)
ಚಾಮರಾಜನಗರ: ಶಕ್ತಿ ಯೋಜನೆಯಿಂದ ಕಂಗೆಟ್ಟಿದ್ದ ಖಾಸಗಿ ಬಸ್ ಗಳು ಸಾರಿಗೆ ನೌಕರರ ಮುಷ್ಕರದಿಂದ ಇಂದು ಹುರುಪು ಕಂಡವು. ಚಾಮರಾಜನಗರದಿಂದ ಮೈಸೂರು, ಕೊಳ್ಳೇಗಾಲ, ನಂಜನಗೂಡಿಗೆ ಖಾಸಗಿ ಬಸ್ ಗಳಿಗೆ ಪ್ರಯಾಣಿಕರು ಮೊರೆ ಇಟ್ಟರು. KSRTC ಬಸ್ ನಿಲ್ದಾಣದ ಮುಂಭಾಗ ನಿಂತ ಹತ್ತಾರು ಖಾಸಗಿ ಬಸ್ ಗಳಿಗೆ ಪ್ರಯಾಣಿಕರು ಮುಗಿಬಿದ್ದರು.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಕೆಎಸ್ಆರ್ಟಿಸಿ ಚಾಮರಾಜನಗರ ಡಿಸಿ ಅಶೋಕ್ ಕುಮಾರ್ ಮಾತನಾಡಿ, ಇಂದು ಬೆಳಗ್ಗೆ ಚಾಮರಾಜನಗರದ ಮೂರು ಡಿಪೋಗಳಿಂದ 39 ಬಸ್ ಕಾರ್ಯಾಚರಣೆ ಆರಂಭಿಸಬೇಕಿತ್ತು, 39 ಬಸ್ ಗಳಲ್ಲಿ 13 ಬಸ್ ಮಾತ್ರ ಡಿಪೋಯಿಂದ ನಿರ್ಗಮಿಸಿವೆ. ಡ್ರೈವರ್ಸ್ ಮತ್ತು ಕಂಡಕ್ಟರ್ ಗಳ ಬರುವಿಕೆಗೆ ಕಾಯುತ್ತಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರನ್ನು ಮನವೊಲಿಸುತ್ತಿದ್ದೇವೆ, ನಿನ್ನೆ ರಾತ್ರಿ ಕಾರ್ಯಾಚರಣೆ ಆರಂಭಿಸಿದ್ದ 149 ಬಸ್ ಗಳ ನೌಕರರು ಕರ್ತವ್ಯದಲ್ಲಿದ್ದಾರೆ ಎಂದರು.
ಚಾಮರಾಜನಗರ ವಿಭಾಗದಲ್ಲಿ ಒಟ್ಟು 429 ಬಸ್ಗಳಿವೆ, ಪೊಲೀಸ್ ಇಲಾಖೆ ಕೂಡ ನಮ್ಮ ಜೊತೆ ನಿರಂತರವಾಗಿ ಇದ್ದಾರೆ. ಎಲ್ಲಾ ಬಸ್ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ರಕ್ಷಣೆ ಕೊಡುತ್ತಿದ್ದಾರೆ, ಚಾಲಕರು ಮತ್ತು ನಿರ್ವಾಹಕರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದು ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿದ್ದೇವೆ ಎಂದವರು ತಿಳಿಸಿದರು.
ಇದನ್ನೂ ಓದಿ- ಚಾಮರಾಜನಗರ: ಬಸ್ಗಳಿಲ್ಲದೆ ಜನರ ಪರದಾಟ- ಖಾಕಿ ಕಟ್ಟೆಚ್ಚರಜ
ಒಟ್ಟಿನಲ್ಲಿ ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಪರದಾಡುವಂತಾಗಿದೆ.