ವಕ್ಫ್‌ ಆಡಳಿತದಲ್ಲಿ ಪಾರದರ್ಶಕ ಬದಲಾವಣೆ ಅಗತ್ಯವಿತ್ತು : ಕೇಂದ್ರ ಸಚಿವ ಜೋಶಿ

ವಕ್ಫ್‌ನಲ್ಲಿ ಪ್ರಮುಖವಾಗಿ ಆಡಳಿತಾತ್ಮಕವಾಗಿ ಪಾರದರ್ಶಕ ಬದಲಾವಣೆ ತರಬೇಕಿತ್ತು ಅದನ್ನು ಮಾಡಿದ್ದೇವೆ.  ಹಾಗೆಂದ ಮಾತ್ರಕ್ಕೆ ದರ್ಗಾ, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುತ್ತೇವೆ ಎಂದಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ ನೀಡಿದರು.

Written by - Krishna N K | Last Updated : Apr 6, 2025, 07:46 PM IST
    • ಒಂದೇ ಒಂದು ದರ್ಗಾ, ಮಸೀದಿಗೂ ಧಕ್ಕೆ ತರಲ್ಲ ಉಮೀದ್‌
    • ವಕ್ಫ್‌ ಆಡಳಿತದಲ್ಲಿ ಪಾರದರ್ಶಕ ಬದಲಾವಣೆ ಅಗತ್ಯವಿತ್ತು ಅದನ್ನು ಮಾಡಿದ್ದೇವೆ
    • ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ
ವಕ್ಫ್‌ ಆಡಳಿತದಲ್ಲಿ ಪಾರದರ್ಶಕ ಬದಲಾವಣೆ ಅಗತ್ಯವಿತ್ತು : ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ವಕ್ಫ್‌ ತಿದ್ದುಪಡಿ ಮಸೂದೆಯಿಂದ ದೇಶದಲ್ಲಿ ಒಂದೇ ಒಂದು ದರ್ಗಾ , ಮಸೀದಿಗೆ ಧಕ್ಕೆ ಆಗುವುದಿಲ್ಲ. ಇದು ನಮ್ಮ ಸರ್ಕಾರ ಮತ್ತು ಪಕ್ಷದ ಸ್ಪಷ್ಟ ಭರವಸೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

Add Zee News as a Preferred Source

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್‌ನಲ್ಲಿ ಪ್ರಮುಖವಾಗಿ ಆಡಳಿತಾತ್ಮಕವಾಗಿ ಪಾರದರ್ಶಕ ಬದಲಾವಣೆ ತರಬೇಕಿತ್ತು ಅದನ್ನು ಮಾಡಿದ್ದೇವೆ. ಹಾಗೆಂದ ಮಾತ್ರಕ್ಕೆ ದರ್ಗಾ, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುತ್ತೇವೆ ಎಂದಲ್ಲ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ:ಬಳ್ಳಾರಿಯಲ್ಲಿ ಡೈರಿ ನಿರ್ಮಾಣಕ್ಕೆ ರಾಜಕೀಯ ಜಟಾಪಟಿ

ಈವರೆಗೆ ದೇಶದಲ್ಲಿ ಯಾವುದೇ ಒಂದು ಆಸ್ತಿಯನ್ನು ವಕ್ಫ್‌ ತನ್ನದೆಂದು ಘೋಷಣೆ ಮಾಡಿದರೆ ಮುಗೀತು. ಇದರಿಂದ ದೇಶಾದ್ಯಂತ ಗೊಂದಲ ಸೃಷ್ಟಿಯಾಗುತ್ತಿತ್ತು. ಇದನ್ನು ಪರಿಹರಿಸಲೆಂದು ಉಮೀದ್‌ ಅನ್ನು ತರಲಾಗಿದೆ. ಇದರಿಂದ ವಕ್ಫ್‌ ಆಸ್ತಿ ದುರ್ಬಳಕೆ ತಪ್ಪುತ್ತದೆ ಎಂದು ಹೇಳಿದರು.

ದೇಶದಲ್ಲಿ 18 ಲಕ್ಷ ಎಕರೆ ಇದ್ದ ವಕ್ಫ್‌ ಆಸ್ತಿ ಈಗ 39 ಲಕ್ಷ ಎಕರೆ ಆಗಿದೆ. ಆದರೆ ಆದಾಯ ಮಾತ್ರ ಕೇವಲ ₹168 ಕೋಟಿ ಇದೆ. ಅಂದರೆ, ವಕ್ಫ್‌ ಆಸ್ತಿಯನ್ನು ₹ 1., ₹ 5, ₹ 10. ಹೀಗೆ ಬೇಕಾಬಿಟ್ಟಿ ದರದಲ್ಲಿ ಲೀಸ್‌ ಕೊಡಲಾಗಿದೆ. ಇದರಿಂದ ವಕ್ಫ್‌ಗೇ ಸಹಸ್ರಾರು ಕೋಟಿ ನಷ್ಟ ಎಂದು ಜೋಶಿ ಹೇಳಿದರು.

ಕಾಂಗ್ರೆಸ್‌ ನಾಯಕರು ಚರ್ಚೆಗೆ ಬರಲೇ ಇಲ್ಲ: ಉಭಯ ಸದನಗಳಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ ವೇಳೆ ಬೆಳಗಿನಿಂದ ಮಧ್ಯರಾತ್ರಿವರೆಗೂ ಚರ್ಚೆಗೆ ಅವಕಾಶ ನೀಡಲಾಗಿದೆ. ಹಾಗಿದ್ದರೂ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾಧ್ರಾ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. ರಾಹುಲ್‌ ಗಾಂಧಿ ರಾಜಕೀಯ ನೆಲೆಗಾಗಿ ವೋಟಿಂಗ್‌ ವೇಳೆಗೆ ಬಂದೆರೆಂದು ಜೋಶಿ ಆರೋಪಿಸಿದರು.

ಇದನ್ನೂ ಓದಿ:ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸುತ್ತೇನೆ -ಡಿಕೆ ಶಿವಕುಮಾರ್

ಕ್ರೈಸ್ತರನ್ನು ಕೈ ಬಿಟ್ಟ ಕಾಂಗ್ರೆಸ್‌: ವೋಟ್‌ ಬ್ಯಾಂಕ್‌ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್‌ ಪಕ್ಷವೇ ಬರೀ ಮುಸ್ಲಿಂರನ್ನು ಓಲೈಸುತ್ತ ಕ್ರಿಶ್ಚಿಯನ್ನರನ್ನು ಸಂಪೂರ್ಣವಾಗಿ ಕೈ ಬಿಟ್ಟಿದೆ. ಸದಾ ಅಲ್ಪಸಂಖ್ಯಾತರ ಪರ ಎನ್ನುವ ಕಾಂಗ್ರೆಸ್‌ ಅಲ್ಪಸಂಖ್ಯಾತರಲ್ಲಿ ಹೆಚ್ಚು ಮತಬುಟ್ಟಿ ಎಲ್ಲಿದೆಯೋ ಅದರತ್ತ ವಾಲುತ್ತದೆ. ಅದರಂತೆ ಈಗ ಕ್ರೈಸ್ತರನ್ನು ಕೈ ಬಿಟ್ಟು ಮುಸಲ್ಮಾನರ ಪರ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ʼಕ್ರೈಸ್ತರ ಆಸ್ತಿ ಮೇಲೂ NDA ಸರ್ಕಾರದ ದೃಷ್ಟಿಯಿದೆʼ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ಸಿನ ಎಲ್ಲಾ ಹೇಳಿಕೆಗಳು ಹತಾಶೆಯ ಪ್ರತೀಕ. ಕೇರಳದ ವಯನಾಡಲ್ಲಿ ಕ್ರೈಸ್ತರು ರಾಹುಲ್‌ ಗಾಂಧಿ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಉಮೀದ್‌ ಅನ್ನು ಸಂಭ್ರಮಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.

ರಾಹುಲ್‌ ಗಾಂಧಿ ಅನಿವಾರ್ಯದ ನಾಯಕ: ರಾಹುಲ್‌ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ. ಕಾಂಗ್ರೆಸ್‌ ಮೈತ್ರಿಕೂಟ ಅನಿವಾರ್ಯವಾಗಿ ಇವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ರಾಹುಲ್‌ ಗಾಂಧಿ ಅವರಿಂದ ಅಸಂಬದ್ಧ ಹೇಳಿಕೆಗಳು, ವಿರೋಧಗಳು ಸರ್ವೇ ಸಾಮಾನ್ಯ ಎಂದು ವ್ಯಂಗ್ಯವಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News