)
ಕರ್ನಾಟಕ ಗೃಹ ಮಂಡಳಿಯಿಂದ ಸುಮಾರು 260 ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಸೈಟ್ ಗಳನ್ನು ಹಾಕಿದ್ದಾರೆ. 2009-2010 ನೇ ಸಾಲಿನಲ್ಲಿಯೇ ಅವುಗಳನ್ನು ಉದ್ಘಾಟನೆ ಕೂಡ ಮಾಡಲಾಗಿತ್ತು. ಆದರೆ ಅಲ್ಲಿ ಜನರು ಬಂದು ವಾಸವಾಗಿರದ ಕಾರಣ ಅವುಗಳೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಇನ್ನೂ ಬೆರಳೆಣಿಕೆಯಷ್ಟು ಕುಟುಂಬಗಳು ಅಲ್ಲಿ ಬಂದು ವಾಸವಿದೆ, ಆದರೆ ಅವರು ಜೀವನವನ್ನೆ ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದಾರೆ. ಇನ್ನೊಂದೆಡೆ ಸುಸಜ್ಜಿಯ ಅಭಿವೃದ್ಧಿ ಪಡಿಸಲಾದ ಲೇ ಔಟ್ ಗಳಿಗೆ ಜನರು ಆನ್ ಲೈನ್ ಮೂಲಕ ಅಪ್ಲೈ ಮಾಡಿ ಎಂದು ಪ್ರಕಟಣೆ ಹೊರಡಿಸುತ್ತಾರೆ, ಆದರೆ ವಾಸ್ತವದಲ್ಲಿ ಅಲ್ಲಿ ಜನರಲ್ಲ, ಪ್ರಾಣಿಗಳು ಸಹಿತ ವಾಸಿಸಲು ಹೆದರುವ ಪರಿಸ್ಥಿತಿ ಇದೆ. ಗ್ರಹ ಮಂಡಳಿಯಿಂದ ಜನರನ್ನು ದಾರಿ ತಪ್ಪಿಸಲು ಯತ್ನ ಮಾಡಲಾಗುತ್ತಿದೆ. ಹಾಗಾದರೆ ಆ ಸೈಟ್ ಗಳು ಇರುವದಾದರೂ ಎಲ್ಲಿ...? ಅಲ್ಲಿನ ಸಮಸ್ಯೆ ಗಳೇನು ಎಂಬುದರ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ...
ಹೌದು ವಿಜಯಪುರ ನಗರದ ಹೊರ ಭಾಗದ ಕಸಬಾ-2 ರಲ್ಲಿ ಸುಮಾರು 260 ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಗ್ರಹ ಮಂಡಳಿಯಿಂದ ಮನೆಗಳ ನಿರ್ಮಾಣದ ಜೊತೆಗೆ ಸೈಟ್ ವಿತರಣೆ ಮಾಡಿದ್ದಾರೆ. ಹಿಂದೆ 2009-2010 ನೇ ಸಾಲಿನಲ್ಲಿ ಆಗಿನ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ ಅವರು ನಿವೇಶನ ಹಂಚಿಕೆಗೆ ಚಾಲನೆ ನೀಡಿದ್ದರು. ಆ ಮನೆಗಳು ಹಂಚಿಕೆಯಾಗಿ ಸುಮಾರು 14 ರಿಂದ 15 ವರ್ಷಗಳ ಕಳೆದರೂ ಸಹಿತ ಇನ್ನೂ ವರೆಗೂ ಯಾರು ಕೂಡ ಜನರು ಬಂದು ಇಲ್ಲಿ ವಾಸವಾಗಿಲ್ಲ. ಇಂದು ಅಲ್ಲಿರುವ ಮನೆಗಳು ಹಾಳು ಹಂಪೆಯಂತಾಗಿ ಮಾರ್ಪಟ್ಟಿದ್ದು ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿವೆ, ಜೊತೆಗೆ ಅಲ್ಲಿ ಸಂಪೂರ್ಣವಾಗಿ ಮುಳ್ಳು ಕಂಟೆಗಳು ಬೆಳೆದಿದ್ದು ಈಗ ಜನರು ಹಗಲು ಹೊತ್ತಿನಲ್ಲಿ ಅಲ್ಲಿ ಹೋಗಲು ಹೆದರು ಅಂತ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ..
ಇನ್ನೂ ಆ ಸ್ಥಳದಲ್ಲಿ ಸುಸಜ್ಜಿತ ರಸ್ತೆಗಳಿಲ್ಲ, ನೀರಿನ ವ್ಯವಸ್ಥೆ ಇಲ್ಲ ಇನ್ನೂ ಬೀದಿ ದೀಪದ ವೈರ್ ಗಳಂತೂ ಕಿತ್ತು ಹೋಗಿವೆ ಇದರ ಮದ್ಯೆ ಮತ್ತೊಮ್ಮೆ ಗ್ರಹ ಮಂಡಳಿಯಿಂದ ಅಲ್ಲಿ ಇನ್ನಷ್ಟು ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಗೃಹ ಮಂಡಳಿಯಿಂದ, ವಿವಿಧ ಸೈಜ್ ನ್ ಸೈಟ್ ಗಳ ಹಂಚಿಕೆಗೆ ಅರ್ಜಿ ಆಹ್ವಾನ ಮಾಡಿದ್ದರು. ಸುಮಾರು 244 ವಿವಿಧ ಸೈಜ್ ನ ಹಂಚಿಕೆಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಜನರು ಸೈಟ್ ಗಳನ್ನು ತೆಗೆದುಕೊಳ್ಳಲು ಆನ್ಲೈನ್ ಮೂಲಕ ಅಪ್ಲಿಕೇಶನ್ಗಳನ್ನು ಹಾಕಬೇಕು. ಜನರು ಸೈಟ್ ನ ಸದಸ್ಯ ವಾಸ್ತವ ಚಿತ್ರಣ ಅರಿಯದೇ ಸರ್ಕಾರದಿಂದ ಕರೆದಿದ್ದಾರೆ ಎಂದು ಅಪ್ಲಿಕೇಶನ್ ಹಾಕಿ ಸೈಟ್ ಪಡೆಯಲು ಮುಂದಾಗುತ್ತಾರೆ. ಆದರೆ ವಾಸ್ತವವಾಗಿ ಆ ಸ್ಥಳಕ್ಕೆ ಹೋಗಿ ನೋಡಿದರೆ ಅಲ್ಲಿ ಹಗಲು ಹೊತ್ತಿನಲ್ಲಿ ಸಹಿತ ಸಂಚರಿಸಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಗೃಹ ಮಂಡಳಿಯಿಂದ ಜನರಿಗೆ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಜೊತೆಗೆ ಸರ್ಕಾರ ಸೈಟ್ ಅಭಿವೃದ್ಧಿ ಪಡಿಸಿದರೆ ಖಾಸಗಿ ಸೈಟ್ ಗಳ ಮಾರಾಟವಾಗಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಖಾಸಗಿ ಸೈಟ್ ಮಾಲೀಕರೊಂದಿಗೆ ಶಾಮೀಲಾಗಿದ್ದು ಸರ್ಕಾರಿ ಸೈಟ್ ಗಳ ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ...
ಇನ್ನೂ ಕಸಬಾ 2 ರ ಸೈಟ್ ಗಳ ವಾಸ್ತವ ಚಿತ್ರಣ ನೋಡುವದಾದರೆ ಹಗಲು ಹೊತ್ತಿನಲ್ಲಿ ಅಲ್ಲಿ ಹೋಗಲು ಭಯ ಬೀಳಿವ ಪರಿಸ್ಥಿತಿ ಇದೆ. ಜನರಿಗೆ ದಾರಿ ತಪ್ಪಿಸು ಕೆಲಸ ಮಾಡುತ್ತಿರುವ ಗೃಹ ಮಂಡಳಿ ಅಧಿಕಾರಿಗಳು ಮಾಡುತ್ತಿದ್ದಾರೆ. ಇದರ ಮದ್ಯೆ ಕಸಬಾ 2 ಅನ್ನು ಮೇಲುಸ್ತುವಾರಿಗೆ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಜಾಣ ಕುರುಡುತನ ಮೆರೆಯುತ್ತಿದ್ದಾರೆ. ಇನ್ನೂದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಲಕ್ಷ ವಹಿಸಿ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಸಬೇಕಿದೆ..