Viral: ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌...!

ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್'ಪೆಕ್ಟರ್ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ.

Last Updated : Nov 16, 2018, 09:22 PM IST
Viral: ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌...! title=

ಕೋಲಾರ: ಸಬ್ ಇನ್ಸ್'ಪೆಕ್ಟರ್ ಒಬ್ಬರು ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಲ್ಲದೆ, ಆರೋಪಿಗೂ ಡ್ಯಾನ್ ಮಾಡುವಂತೆ ಒತ್ತಾಯಿಸಿದ ವಿಚಿತ್ರ ಘಟನೆ ಕೆಜಿಎಫ್‌ ಸಮೀಪದ ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ನಡೆದಿದೆ. 

ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್'ಪೆಕ್ಟರ್ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ. ಪ್ರಕರಣವೊಂದರ ಕುರಿತು ಆರೋಪಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿಗಳಿಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಇಡೀ ಸನ್ನಿವೇಶವನ್ನು ಪೊಲೀಸ್ ಠಾಣೆಯಲ್ಲಿದ್ದವರ್ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸದ್ಯ, ಪಿಎಸ್ಐ ಅವರು ಆರೋಪಿಗಳ ವಿಚಾರಣೆ ವೈಖರಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Trending News