)
ಸದ್ಯ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕುರ್ಚಿ ಕದನಕ್ಕೆ ಈಗ ನೇರವಾಗಿ ಸಮುದಾಯಗಳು ಎಂಟ್ರಿ ಯಾಗಿವೆ.ಒಂದು ಕಡೆ ಕುರುಬ ಸಮುದಾಯ ಸಿಎಂ ಪರ ಬ್ಯಾಟ್ ಬೀಸಿದ್ರೆ ಇತ್ತ ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗರು ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸುತ್ತಿದ್ದಾರೆ.ಎಲ್ಲಾ ಬಾರಿಯೂ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ.ಈ ಬಾರಿ ಅನ್ಯಾಯವಾಗಲು ಬಿಡುವುದಿಲ್ಲ.ಡಿಕೆಶಿ ಸಿಎಂ ಅಗಲೇ ಎಂದು ಒತ್ತಾಯಿಸಿದೆ ಒಕ್ಕಲಿಗ ಸಮುದಾಯ.
ಒಕ್ಕಲಿಗ ಸಂಘದಿಂದ ಡಿಕೆಶಿ ಪರ ಬೀಗಿ ಪಟ್ಟು ಶಾಸಕರ ರಾಜೀನಾಮೆ ಎಚ್ಚರಿಕೆ
ಇದೀಗ ಆದಿಚುಂಚನಗಿರಿ ಸ್ವಾಮೀಜಿ ಬಳಿಕ ಒಕ್ಕಲಿಗರ ಸಂಘದಿಂದ ಮತ್ತೊಂದು ತಂತ್ರ ನಡೆದಿದೆ. ಒಕ್ಕಲಿಗರ ಸಂಘದಿಂದ ಡಿಸಿಎಂ ಡಿಕೆ ಶಿವಕುಮಾರ್ ಪರ ಬಿಗಿ ಪಟ್ಟು ಹಿಡಿಯಲು ತೀರ್ಮಾನ ಮಾಡಲಾಗಿದೆ.. ಡಿಕೆ ಸಿಎಂ ಆಗದಿದ್ದರೆ ಒಕ್ಕಲಿಗ ಶಾಸಕರ ರಾಜೀನಾಮೆ ಕೊಡಿಸಲು ಸಂಘ ನಿರ್ಧಾರ ಮಾಡಿದೆ. ಇತ್ತ ಡಿಸಿಎಂ ಮನೆಗೆ ಬಂದ ಸ್ಪಟಿಕಪುರಿಯ ನಂಜವದೂತ ಸ್ವಾಮಿ ಪುಣ್ಯಕೋಟಿ ಕಥೆಯಂತೆ ಡಿಕೆ ಅಗಬಾರದು. ಕಷ್ಟ ಪಟ್ಟಿರೋರಿಗೆ ನ್ಯಾಯ ಸಿಗಬೇಕು. ಡಿಕೆಶಿ ಸಿಎಂ ಅಗಲೇ ಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮಾತಿನಲ್ಲಿಯೇ ತಂತ್ರಗಾರಿಕೆಯ ಸುಳಿವು ಬಿಟ್ಟ ಟ್ರಬಲ್ ಶೂಟರ್, ದೆಹಲಿಗೆ ಖಂಡಿತವಾಗಿ ಹೋಗ್ತಿನಿ.. ದೆಹಲಿ ನಮ್ಮ ದೇವಸ್ಥಾನವಿದ್ದಂತೆ.. ದೆಹಲಿ ಇಲ್ಲದೆ ಇದ್ರೆ ಯಾರು ಏನು ಮಾಡೋಕೆ ಸಾಧ್ಯವಿಲ್ಲ. ಕಾಂಗ್ರೆಸ್ ಪಾರ್ಟಿಗೆ ತನ್ನದೇ ಇತಿಹಾಸವಿದೆ..ದೆಹಲಿ ನಮ್ಗೆ ಯಾವಾಗಲೂ ಗೈಡ್ ಮಾಡುತ್ತೆ.. ನಾವು ಇಲ್ಲಿ ಅಧಿಕಾರ ನಡೆಸುತ್ತಿದ್ದೇವೆ.. ಆದ್ರೆ ಕಾಂಗ್ರೆಸ್ ಪಾರ್ಟಿಯ ಪೊಲಿಸಿ ಸಂವಿಧಾನದ ಪ್ರಕಾರ ನಾವು ಕೆಲಸ ಮಾಡಬೇಕು. ಪಾರ್ಟಿ ಲೀಡರ್ಸ್ ಯಾವಾಗ ದೆಹಲಿಗೆ ಕರೆಯುತ್ತಾರೆ ಆಗ ಖಂಡಿತ ದೆಹಲಿಗೆ ಹೋಗುತ್ತೇವೆ. ನಾನು ಮತ್ತು ಸಿಎಂ ದೆಹಲಿಗೆ ಹೋಗುತ್ತೇವೆ.. ನನಗೆ ಏನು ಬೇಡ.. ನಾವು ಯಾವ ವಿಚಾರಕ್ಕೂ ತರಾತುರಿಯಲ್ಲಿಲ್ಲ. ಪಾರ್ಟಿ ಸರಿಯಾದ ನಿರ್ಧಾರವನ್ನ ಸರಿಯಾದ ಸಮಯಕ್ಕೆ ತೆಗೆದುಕೊಳ್ಳುತ್ತೆ ಎಂದು ಡಿಕೆ ಪರೋಕ್ಷವಾಗಿ ಪಕ್ಷದ ವರಿಷ್ಠರಿಗೆ ಸಂದೇಶ ರವಾನೆ ಮಾಡಿದ್ದಾರೆ.
ಒಟ್ಟಾರೆಯಾಗಿ ಡಿಸಿಎಂ ಡಿಕೆ ಶಿವಕುಮಾರ್ ತಂತ್ರದ ಮೇಲೆ ತಂತ್ರವನ್ನು ಹೆಣೆಯುತ್ತಿದ್ದಾರೆ. ರಾಜ್ಯಭಾರ ಮಾಡೋದಕ್ಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳುತ್ತಿರೋ ಡಿಕೆ ಮತ್ತು ಸಿಎಂಗೆ ಹೈಕಮಾಂಡ್ ಇಂದು ಅಥವಾ ನಾಳೆ ಬುಲಾವ್ ನೀಡಿ ಎಲ್ಲದಕ್ಕೂ ಬ್ರೇಕ್ ಹಾಕುವ ಸಾಧ್ಯತೆ ಇದೆ.
ವರದಿ: ಜನಾರ್ದನ ಹೆಬ್ಬಾರ್
ಜೀ ಕನ್ನಡ ನ್ಯೂಸ್ ಬೆಂಗಳೂರು.