ದಕ್ಷ ಅಧಿಕಾರಿ ಬೆಂಬಲಿಸಿ, ಸರ್ಕಾರದ ವಿರುದ್ಧ ನೆಟ್ಟಿಗರ ಅಭಿಯಾನ..! "We ಸ್ಟಾಂಡ್ ವಿತ್ ದಯಾನಂದ IPS" ಪೋಸ್ಟ್ ವೈರಲ್‌..

B Dayananda suspended : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ದಕ್ಷ ಅಧಿಕಾರಿಗಳ ಅಮಾನತು ಮಾಡಿ ಆದೇಶ  ಹೊರಡಿಸಿದೆ. ಇದರ ಬೆನ್ನಲ್ಲೇ ಜನಸ್ನೇಹಿ ‌ಪೋಲಿಸ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ನಗರ‌ ಪೊಲೀಸ್ ಆಯುಕ್ತ ಬಿ ದಯಾನಂದ ‌ಪರ ಸಾರ್ವಜನಿಕರು ಧ್ವನಿ ಎತ್ತಿದ್ದಾರೆ. ಮೇಕೆ ತಾನು ತಿಂದು ಕೋತಿ ಮೂತಿಗೆ ಒರೆಸಿದ ಹಾಗೆ ಆಗಿದೆ ಸರ್ಕಾರದ ನಡೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Jun 6, 2025, 08:58 PM IST
    • ದಕ್ಷ ದಯಾನಂದ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ..!
    • We ಸ್ಟಾಂಡ್ ವಿತ್ ದಯಾನಂದ IPS ಎಂಬ ಪೋಸ್ಟ್..
    • ದಕ್ಷ ಅಧಿಕಾರಿಗೆ ಈ ರೀತಿ ಮಾಡಿದ್ದು ಎಷ್ಟು ಸರಿ ಅನ್ನೋ ಮಾತುಗಳು ಕೇಳಿ ಬರ್ತಿದೆ.
ದಕ್ಷ ಅಧಿಕಾರಿ ಬೆಂಬಲಿಸಿ, ಸರ್ಕಾರದ ವಿರುದ್ಧ ನೆಟ್ಟಿಗರ ಅಭಿಯಾನ..! "We ಸ್ಟಾಂಡ್ ವಿತ್ ದಯಾನಂದ IPS" ಪೋಸ್ಟ್ ವೈರಲ್‌..

RCB Stampede : ಸದಾ ಉತ್ಸಾಹಿ ಸಮಾಜದ ಬಗ್ಗೆ ಕಳಕಳಿ, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ, ಕಳ್ಳಾಟ ಆಡೋ ಪೋಲಿಸರ ಪಾಲಿಗೆ ಸಿಂಗಂ. ಇದು ಎರಡು ವರ್ಷಗಳಿಂದ ಬೆಂಗಳೂರು ‌ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಬಿ ದಯಾನಂದ ಅವರ ಕಾರ್ಯವೈಖರಿ. ಆದ್ರೆ 11 ಜನರ ಸಾವಿಗೆ ಪೊಲೀಸ್ ಇಲಾಖೆ ಕಾರಣ ಎಂದು ಅಮಾನತು ಮಾಡಿ ಆದೇಶಿಸಲಾಗಿದೆ.

Add Zee News as a Preferred Source

ನಾಲ್ಕನೇ ತಾರೀಖು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಬಂಧಿಸಿದ ಕಾಲ್ತುಳಿತದಲ್ಲಿ 11 ಜನ ಸಾವಿಗೀಡಾಗಿದ್ದರು. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ‌. ಸರ್ಕಾರ ಕೂಡ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದರ ಮಧ್ಯೆ ಪೊಲೀಸ್ ‌ಇಲಾಖೆಯ ವೈಫಲ್ಯ ಇದೆ ಎಂದು ಆರೋಪಿಸಿರುವ ಸರ್ಕಾರ ಪೊಲೀಸ್‌ ಕಮೀಷನರ್ ಬಿ ದಯಾನಂದ, ಅಡಿಷನಲ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್, ಸೆಂಟ್ರಲ್ ಡಿಸಿಪಿ ಶೇಖರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ, ಠಾಣಾ ಇನ್ಸ್ಪೆಕ್ಟರ್ ಗಿರೀಶ್ ಅವರನ್ನ ಅಮಾನತು ಮಾಡಿ ಆದೇಶಿಸಿದೆ‌. ಇದರಿಂದ ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ. We ಸ್ಟಾಂಡ್ ವಿತ್ ದಯಾನಂದ ಎಂಬ ಪೋಸ್ಟ್‌ ಗಳು ವೈರಲ್ ಆಗುತ್ತಿದ್ದು ಸರ್ಕಾರದ ನಡೆಗೆ ಛೀಮಾರಿ ಹಾಕುತ್ತಿದ್ದಾರೆ. ದಕ್ಷ, ಸಮಯ ಪ್ರಜ್ಞೆ, ತೋರಿದ ಅಧಿಕಾರಿಗೆ ಈ ರೀತಿ ಮಾಡಿದ್ದು ಎಷ್ಟು ಸರಿ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಇದನ್ನೂ ಓದಿ:ನನ್ನ ರಾಜೀನಾಮೆ ಕೇಳುತ್ತಿದ್ದಾರೆ.. ರಾಜೀನಾಮೆ ಕೊಡೋಣ : ಡಿಸಿಎಂ ಡಿಕೆಶಿ ಹೇಳಿಕೆ

ಇನ್ನೂ ಸಿಟಿಗೆ ಕಮಿಷನರ್ ‌ಆಗಿ ಬಂದ ನಂತರ ಸಾಕಷ್ಟು ಸುಧಾರಣೆ ಕೆಲಸಗಳನ್ನು ಮಾಡಿದ್ದು, ಜನಸ್ನೇಹಿ ‌ಪೋಲಿಸ್, ಕ್ಯೂ ಆರ್ ಕೋಡ್ ಸಿಸ್ಟಮ್, ಸೇಪ್ಟಿ ಐಲ್ಯಾಂಡ್, 112 ,ಸೋಷಿಯಲ್ ಮೀಡಿಯಾ, ಟ್ವಿಟರ್ ಗೆ ಹೆಚ್ಚಿನ ಮಹತ್ವ ಕೊಟ್ಟು ಕರೆ, ದೂರು ಬಂದ ಕೂಡಲೇ ಸ್ಪಂದಿಸುವಂತೆ ಮಾಡಿದ್ರು ಇದರಿಂದ ಸಾಕಷ್ಟು ಪ್ರಕರಣ ಗಳು ಈಸಿಯಾಗಿ ಇತ್ಯರ್ಥ ಕೂಡ ಆಗಿದ್ದವು. ಅಲ್ಲದೆ ನಗರದಲ್ಲಿ ಇರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಕೂಡ ಭೇಟಿ ನೀಡಿ ಮಾಹಿತಿ ಪಡೆದ ಹೆಗ್ಗಳಿಕೆ ಪಡೆದಿದ್ರು. ಅಲ್ಲದೆ ಲೈವ್ ಬ್ಯಾಂಡ್, ಮಸಾಜ್ ಪಾರ್ಲರ್ ಗಳಿಗೆ ಬೀಗ ಜಡಿದು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ರು. ಅಲ್ಲದೆ ಕಳಂಕಿತ ಪೊಲೀಸರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಮನೆಗೂ‌ ಕಳಿಸಿದ್ದಾರೆ.ಇಂತಹ ಪ್ರಾಮಾಣಿಕ ಅಧಿಕಾರಿಯನ್ನ ಅಮಾನತು ಮಾಡಿದ ಸರ್ಕಾರದ ನಡೆಯನ್ನು ಜನ ತೀವ್ರವಾಗಿ ಖಂಡಿಸುತ್ತಿದ್ದಾರೆ.

ಇದನ್ನೂ ಓದಿ:ದಯಾನಂದ್‌ ಅಮಾನತು ಆದೇಶ ಹಿಂಪಡೆಯಲು ಒತ್ತಾಯ

ಇತ್ತ ಸರ್ಕಾರದ ನಡೆಯನ್ನು ಖಂಡಿಸಿ  ಮಡಿವಾಳ ಠಾಣೆಯ ಹೆಡ್ ಕಾನ್ಸ್ ಟೇಬಲ್ ನರಸಿಂಹ ರಾಜು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬಂದು ರಾಜ ಭವನದ ಮುಂದೆ ಪ್ರತಿಭಟನೆ ಗೆ ಮುಂದಾಗಿದ್ರು ,ಇದೆ ವೇಳೆ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡರು. ಒಬ್ಬ ಪ್ರಾಮಾಣಿಕ ಅಧಿಕಾರಿಯ ಪರವಾಗಿ ಇಷ್ಟು ಬೆಂಬಲ ನೀಡುತ್ತೀರೋದನ್ನ ನೋಡಿದ್ರೆ ಅವರ ಕಾರ್ಯ ವೈಖರಿ ‌ಜನರಿಗೆ ಎಷ್ಟು ಉಪಯುಕ್ತ ವಾಗಿತ್ತು ಅನ್ನೋದು ಕಾಣುತ್ತಿದೆ. ಇನ್ನೂ ನೂತನ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್, ಕಬ್ಬನ್ ಪಾರ್ಕ್ ಠಾಣೆ ಇನ್ಸ್ ಪೆಕ್ಟರ್ ಆಗಿ ದೇವೆಂದ್ರಪ್ಪ, ಸಬ್ ಡಿವಿಷನ್ ಎಸಿಪಿಯಾಗಿ ರಾಮಚಂದ್ರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ಅಧಿಕಾರಿಗಳು ಈಗಾಗಲೇ ಚಾರ್ಜ್ ತೆಗೆದುಕೊಂಡು ಕೆಲಸ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News