close

News WrapGet Handpicked Stories from our editors directly to your mailbox

'ಒಂದು ತತ್ವ ಸಿದ್ಧಾಂತ, ಕಾರ್ಯಕ್ರಮಗಳ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದೇವೆ'

ಸೋಮವಾರದಂದು ವಿಶ್ವಾಸ ಮತಯಾಚನೆ ಇರುವ ಹಿನ್ನಲೆಯಲ್ಲಿ ಒಂದು ದಿನ ಮೊದಲು ಬಂಡಾಯ ಶಾಸಕರೆಲ್ಲರೂ ಈಗ ವೀಡಿಯೋ ಸಂದೇಶವನ್ನು ಮೈತ್ರಿ ಸರ್ಕಾರಕ್ಕೆ ರವಾನಿಸಿದ್ದಾರೆ.

Updated: Jul 21, 2019 , 05:41 PM IST
 'ಒಂದು ತತ್ವ ಸಿದ್ಧಾಂತ, ಕಾರ್ಯಕ್ರಮಗಳ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದೇವೆ'

ಬೆಂಗಳೂರು: ಸೋಮವಾರದಂದು ವಿಶ್ವಾಸ ಮತಯಾಚನೆ ಇರುವ ಹಿನ್ನಲೆಯಲ್ಲಿ ಒಂದು ದಿನ ಮೊದಲು ಬಂಡಾಯ ಶಾಸಕರೆಲ್ಲರೂ ಈಗ ವೀಡಿಯೋ ಸಂದೇಶವನ್ನು ಮೈತ್ರಿ ಸರ್ಕಾರಕ್ಕೆ ರವಾನಿಸಿದ್ದಾರೆ.

ವೀಡಿಯೊ ಸಂದೇಶದಲ್ಲಿ ಶಾಸಕರು ತಾವು ಒಂದು ತತ್ವ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದೇವೆ ಹೊರತು ಯಾವುದೇ ಹಣ ಅಧಿಕಾರಕ್ಕಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಶ್ವಾಸ ಮತ ಯಾಚನೆಗೂ ಮುನ್ನ ಈಗ ಬಂಡಾಯ ಶಾಸಕರ ಈ ಹೇಳಿಕೆ ಈಗ ಮಹತ್ವವನ್ನು ಪಡೆದುಕೊಂಡಿದೆ.ಇನ್ನೊಂದೆಡೆ ಬಿಎಸ್ಪಿ ಶಾಸಕ ಎನ್ ಮಹೇಶ್ ಅವರು ಕೂಡ ನಾಳೆ ವಿಶ್ವಾಸ ಮತಕ್ಕೆ ತಾವು ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಮೈತ್ರಿ ಸರ್ಕಾರದ ಭವಿಷ್ಯ ತೂಗೊಯ್ಯಾಲೆಯಲ್ಲಿದೆ ಎನ್ನಲಾಗಿದೆ.

ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಬೆಂಗಳೂರಿನ ತಾಜ್ ವಿವಾಂತದಲ್ಲಿ ಪಕ್ಷದ ಶಾಸಕಾಂಗದ ಸಭೆಯನ್ನು ಕರೆದಿದ್ದು , ವಿಶ್ವಾಸ ಮತದ ವೇಳೆ ಶಾಸಕರು ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ಸಿದ್ಧರಾಮಯ್ಯನವರು ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ. ಇದೆ ವೇಳೆ  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಚ್.ಕೆ ಪಾಟೀಲ್ ಮಾತನಾಡಿ '  ನಾವು ಈಗ ವಿಶ್ವಾಸ ಮತವನ್ನು ಕೋರಿದ್ದೇವೆ. ಆದ್ದರಿಂದ ನಮಗೆ ವಿಶ್ವಾಸ ಮತ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬಂಡಾಯ ಶಾಸಕರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಈಗ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.ಈಗ ನಾಳೆಯೇ ವಿಶ್ವಾಸ ಮತ ಸಾಬೀತುಪಡಿಸುವುದಾಗಿ ಸಿಎಂ ಸ್ಪಷ್ಟವಾಗಿ ಹೇಳಿರುವುದರಿಂದ ಸರ್ಕಾರ ಅಳಿಯುತ್ತಾ ಅಥವಾ ಉಳಿಯುತ್ತಾ ಎನ್ನುವುದರ ಚಿತ್ರಣ ನಾಳೆ ತಿಳಿಯಲಿದೆ.