ಬೆಂಗಳೂರು: ಹಿಂದಿ ದಿವಸ್ ದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಪ್ರಾಮುಖ್ಯತೆ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೇ ದಕ್ಷಿಣ ರಾಜ್ಯಗಳು ಅಮಿತ್ ಶಾ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. 


COMMERCIAL BREAK
SCROLL TO CONTINUE READING

ಹಿಂದಿ ಹೇರಿಕೆ ವಿರುದ್ಧ ಈಗ ಟ್ವೀಟರನಲ್ಲಿ #StopHindiImposition ಅಭಿಯಾನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಈಗ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ' ನಮ್ಮ ದೇಶದ ಎಲ್ಲಾ ಅಧಿಕೃತ ಭಾಷೆಗಳು ಸಮಾನವಾಗಿವೆ. ಆದಾಗ್ಯೂ, ಕರ್ನಾಟಕದ ಮಟ್ಟಿಗೆ ಕನ್ನಡವೇ ಪ್ರಮುಖ ಭಾಷೆಯಾಗಿದೆ. ನಾವು ಎಂದಿಗೂ ಅದರ ಪ್ರಾಮುಖ್ಯತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಕನ್ನಡ ಮತ್ತು ನಮ್ಮ ರಾಜ್ಯದ ಸಂಸ್ಕೃತಿಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ. 



ಸೆಪ್ಟಂಬರ್ 14 ರಂದು ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ 'ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ 'ಹಿಂದಿ ದಿವಸ್' ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ 
ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ ಎಂದು ಟಿಕಿಸಿದ್ದರು.


ಇನ್ನೊಂದೆಡೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಶಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು."ಭಾರತವು ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿದೆ. ಪ್ರತಿಯೊಂದೂ ತನ್ನದೇ ಆದ ರೋಮಾಂಚಕ ಸಂಸ್ಕೃತಿ ಮತ್ತು ಅಭ್ಯಾಸವನ್ನು ವಿವರಿಸುತ್ತದೆ. ಐಕ್ಯತೆಯಿಂದ ಇರಲು ನಾವು ವೈವಿಧ್ಯತೆಯನ್ನು ಸ್ವೀಕರಿಸಬೇಕು. ಅಮಿತ್ ಶಾ ಜಂಟಿ ಕುಟುಂಬದಲ್ಲಿ ದುಷ್ಟ ಅವರು ಒಳಗಿನವರಂತೆ ಐಕ್ಯತೆಯನ್ನು ಮುರಿಯುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಈ ಮನೆ ಧ್ವಂಸ ಮಾಡುವವರಿಗೆ ಪಾಠ ಕಲಿಸಬೇಕಾಗಿದೆ !! ಎಂದು ಅವರು ಟ್ವೀಟ್ ಮಾಡಿದ್ದರು.