ಮೈಸೂರು ಅಂಬಾರಿ ಹೊರುತದತಿದ್ದ ಅರ್ಜುನನ ನಂತರ ದಸರಾದಲ್ಲಿ ಪಾಲ್ಗೊಳುತ್ತಿದ್ದ ಅಶ್ವತ್ಥಾಮ ಆನೆ ಮಂಗಳವಾರ(ಜೂನ್ 11) ಸಾವನಪ್ಪಿದೆ.
ಅರ್ಜುನನ ಸಾವಿನ ನಂತರ ಮೈಸೂರಿನ ದಸರಾದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಆನೆ ಸಾವನ್ನಪ್ಪಿದೆ.
38 ವರ್ಷದ ಅಶ್ವತ್ಥಾಮ ಸತತ ಎರಡು ಭಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿತ್ತು.
2017 ರಲ್ಲಿ ಅಶ್ವತ್ಥಾಮನನ್ನು ಹಾಸನದ ಸಕಲೇಶ್ವರದಲ್ಲಿ ಸೆರೆ ಹಿಡಿಯಲಾಗಿತ್ತು. ಶಾಂತ ಸ್ವಭಾವಕ್ಕೆ ಹೆಸರಾಗಿದ್ದ ಅಶ್ವತ್ಥಾಮನಿಗೆ ನಡಿಗೆ ಸೇರಿದಂತೆ ಹಲವಾರು ತರಹದ ಟ್ರೈನಿಂಗ್ ನೀಡಲಾಗಿತ್ತು.
ಸೋಲಾರ್ ಬೇಲಿ ತಾಕಿದ ಕಾರಣ ಅಶ್ವತ್ಥಾಮ ಮಂಗಳವಾರ ಸ್ಥಳದಲ್ಲೇ ಸಾವನ್ನಪ್ಪಿದೆ.
ನಾಗರಹೊಳೆಯ ಭೀಮನ ಕಟ್ಟೆ ಸಮೀಪ ಅಶ್ವತ್ಥಾಮ ಮೇವು ಅರಿಸಿ ಕಾಡಿಗೆ ಹೊರಟ್ಟಿದ್ದ.
ಸೋಲಾರ್ ಬೇಲಿಯ ಮೇಲೆ ವಿಧ್ಯುತ್ ತಂತಿ ಬಿದ್ದಿತ್ತು ಅದನ್ನು ಯಾರೂ ಗಮನಿಸಿರಲಿಲ್ಲ. ಮೇವಿಗಾಗಿ ಕಾಡಿಗೆ ಓಗುತ್ತಿರುವಾಗ ಅಶ್ವತ್ಥಾಮ ಈ ಬೇಲಿಯ ಮೇಲೆ ಕಾಲಿಟ್ಟು ಪ್ರಾಣ ಕಳೆದುಕೊಂಡಿದೆ.
ಎರಡು ಭಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಅಂಬಾರಿ ಉತ್ಸವದಲ್ಲಿ ಪಾಲ್ಗೊಂಡಿರಲಿಲ್ಲ.