ಮೋಡಿಮಾಡುವ ಸೌಂದರ್ಯ, ಆಕರ್ಷಕ ಸ್ಥಳಗಳು ಮತ್ತು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾದ ಕರ್ನಾಟಕವು ನಿಜವಾಗಿಯೂ ಪ್ರಯಾಣಿಕರ ಸ್ವರ್ಗ.
ಗಿರಿಧಾಮಗಳು, ಸಮುದ್ರ ತೀರಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಹಿಡಿದು ಐತಿಹಾಸಿಕ ದೇವಾಲಯಗಳು ಮತ್ತು ವಿಶ್ವ ಪರಂಪರೆಯ ತಾಣಗಳವರೆಗೆ ಎಲ್ಲವೂ ಒಂದೇ ರಾಜ್ಯದಲ್ಲಿ ಸಿಗುವುದು ವಿಶೇಷ
ಈ ಬೇಸಿಗೆಯಲ್ಲಿ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವ ಪ್ಲಾನ್ ನಿಮಗಿದ್ದರೆ ಈ ಸ್ಥಳಗಳು ಬೆಸ್ಟ್. ಆ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ:
ಚಿಕ್ಕಮಗಳೂರು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ, ಪ್ರಕೃತಿಯ ಮಡಿಲಲ್ಲಿರುವ ಈ ಪ್ರಶಾಂತ ಪಟ್ಟಣಕ್ಕೆ ಬೇಸಿಗೆಯಲ್ಲಿ ಭೇಟಿ ನೀಡಬಹುದು.
ಕಾಫಿ ಮತ್ತು ಮಸಾಲೆ ಪದಾರ್ಥಗಳ ತೋಟಗಳು, ಎಲ್ಲೆಲ್ಲೂ ಅರಣ್ಯ ಪ್ರದೇಶ, ಜಲಪಾತಗಳು ಮತ್ತು ಬೆಟ್ಟ ಗುಡ್ಡಗಳಿಂದ ಕಂಗೊಳಿಸುವ ಈ ಸ್ಥಳಕ್ಕೆ ಬೇಸಿಗೆಯಲ್ಲಿ ಭೇಟಿ ನೀಡಬಹುದು. ಅಂದಹಾಗೆ ಕೂರ್ಗ್ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯಲಾಗುತ್ತದೆ. ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ ಮತ್ತು ರಾಜಾ ಸೀಟ್ ಮಡಿಕೇರಿಯ ಪ್ರಸಿದ್ಧ ಸ್ಥಳಗಳು.
ರಾಜ್ಯ ರಾಜಧಾನಿ ಬೆಂಗಳೂರಿಗೆ ನಂದಿ ಹಿಲ್ಸ್ ಸಮೀಪ. ಇಲ್ಲಿ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಸರೋವರಗಳು, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಆಕರ್ಷಕ ಭೂದೃಶ್ಯವು ಇಲ್ಲಿನ ಆಕರ್ಷಣೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲಕ್ರೀಡೆಗಳು ಅಥವಾ ದಡದಲ್ಲಿ ಕ್ಯಾಂಪಿಂಗ್ ಮಾಡುವವರೆಗೆ ನಿಮಗೆ ಸಂತಸದ ಅನುಭವ ನೀಡುತ್ತದೆ ಈ ಸ್ಥಳ. ಪ್ರಕೃತಿ ಪ್ರಿಯರಿಗೆ ಇದು ಪರಿಪೂರ್ಣ ರಜೆಯ ತಾಣ ಎಂದೇ ಹೇಳಬಹುದು.