ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲು ಸೇವೆ ಆರಂಭಕ್ಕೆ ಅನಮತಿ ನೀಡಿದೆ.
ಪ್ರಯಾಣಿಕರ ಒತ್ತಾಯದ ಮೇರೆಗೆ ಹೆಚ್ಚುವರಿ ಮೆಟ್ರೋ ಕಾರ್ಯಾಚರಣೆ ಮಾಡಲಿದೆ.
ನಾಳೆಯಿಂದಲೇ ಜಾರಿ ಬರುವಂತೆ ಆರು ಹೆಚ್ಚುವರಿ ರೈಲುಗಳ ಸೇರ್ಪಡೆ ಮಾಡಲಾಗಿದೆ.
ಇಲ್ಲಿಯವರೆಗೆ ನೇರಳೆ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿತ್ತು.
ಆದರೆ ನಾಳೆಯಿಂದ ಒಟ್ಟು 15 ರೈಲುಗಳ ಮೂಲಕ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ಹೆಚ್ಚುವರಿ ಮೆಟ್ರೋ ಸೇವೆ ಆರಂಭವಾಗಲಿದೆ.
ಈ ಮೂಲಕ ನೇರಳೆ ಮಾರ್ಗದಲ್ಲಿ ಪ್ರತೀ 3.5 ನಿಮಿಷಕ್ಕೊಂದು ರೈಲು ಸೇವೆ ಇರಲಿದೆ.
ಆದರೆ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು BMRCL ಸ್ಪಷ್ಟಪಡಿಸಿದೆ.
ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಹೊರಡಿಸುವ ಬಗ್ಗೆ BMRCL ಪ್ರಕಟಣೆ ಹೊರಡಿಸಿದೆ .