ಮೇ 27ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

Published by: Yashaswini V | May 23, 2025

ಮೇ 27ರವರೆಗೆ ಭಾರೀ ಮಳೆ

ರಾಜ್ಯದಲ್ಲಿ ಇಂದಿನಿಂದ ಮೇ 27ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Published by: Yashaswini V | May 23, 2025

ಮಳೆಗೆ ಕಾರಣ

ಅರಬ್ಬೀ ಸಮುದ್ರದ ಪೂರ್ವ ಭಾಗದ ಗೋವಾ ಕರಾವಳಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಎಂದು ಐಎಂಡಿ ತಿಳಿದಿದೆ.

Published by: Yashaswini V | May 23, 2025

ರೆಡ್ ಅಲರ್ಟ್

ಕರ್ನಾಟಕದ ಕರಾವಳಿಯಲ್ಲಿ ಮೇ 25ರಿಂದ ಮಳೆಯ ಅಬ್ಬರ ಆರಂಭವಾಗಲಿದ್ದು ಮೇ 27ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.

Published by: Yashaswini V | May 23, 2025

ಆರೆಂಜ್ ಅಲರ್ಟ್

ಇನ್ನೂ ವಾಯುಭಾರ ಕುಸಿತದಿಂದ ಮಳೆ ಹಿನ್ನಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಚಿಕ್ಕಮಗಳೂರು, ಹಾಸನ, ಗದಗ, ಶಿವಮೊಗ್ಗ,ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಡಿದೆ.

Published by: Yashaswini V | May 23, 2025

ಇಲ್ಲೂ ಸಹ ಆರೆಂಜ್ ಅಲರ್ಟ್

ಇಂದು ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಕೂಡ ಹೆಚ್ಚು ಮಳೆಯಾಗಲಿದ್ದು ಇಲ್ಲೂ ಸಹ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

Published by: Yashaswini V | May 23, 2025

ಯೆಲ್ಲೋ ಅಲರ್ಟ್

ಐಎಂಡಿ ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರಕಗಳಿಗೆ ಯೆಲ್ಲೋ ಅಲರ್ಟ್​ ಅನ್ನು ಘೋಷಿಸಿದೆ.

Published by: Yashaswini V | May 23, 2025

ಈ ಜಿಲ್ಲೆಗಳಲ್ಲೂ ಮಳೆ ಎಚ್ಚರಿಕೆ

ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಒಣಹವೆ ಮುಂದುವರೆಯಲಿದ್ದು, ಮೇ 25ರ ಬಳಿಕ ಈ ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Published by: Yashaswini V | May 23, 2025

VIEW ALL

Read Next Story