ಪ್ರಯಾಣಿಕರ ಜೀವನದ ಜೊತೆ ಚೆಲ್ಲಾಟವಾಡುವ ಬಿಎಂಟಿಸಿ ಚಾಲಕರ ಬೇಜವಾಬ್ದಾರಿ ಚಾಲನೆ ಬಗ್ಗೆ ಕೊನೆಗೂ ಎಚ್ಚೆತ್ತ ಸರ್ಕಾರ
ಇನ್ಮುಂದೆ ಕೆಲಸದ ಅವಧಿಯಲ್ಲಿ ಬಿಎಂಟಿಸಿ ಚಾಲಕರು ಮೊಬೈಲ್ ನೋಡೋದು ನಿಷೇಧ
ಬಿಎಂಟಿಸಿ ಚಾಲಕರು ಕೆಲಸದಲ್ಲಿರುವಾಗ ಕೇವಲ ಮೊಬೈಲ್ ನೋಡೋದಷ್ಟೆ ಅಲ್ಲ ಪೇಪರ್ ಓದೋದು, ರೀಲ್ಸ್ ಮಾಡಿದ್ರೂ ಕೆಲಸ ಹೋಗುತ್ತೆ ಹುಷಾರ್.
ಬಿಎಂಟಿಸಿ ಚಾಲಕರ ಬೇಜವಾಬ್ದಾರಿ ಬಗ್ಗೆ ಇಷ್ಟು ದಿನ ಜಸ್ಟ್ ನೋಟೀಸ್ ನೀಡುತ್ತಿದ್ದ ಸಾರಿಗೆ ಇಲಾಖೆ ಇನ್ಮುಂದೆ ಡೈರೆಕ್ಟ್ ಸಸ್ಪೆಂಡ್ ಮಾಡಲಿದೆ.
ಬೆಂಗಳೂರು ನಗರದಲ್ಲಿ ಬಸ್‌ಗಳ ಚಾಲನೆಯಲ್ಲಿ ತುಂಬಾ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಚಾಲನೆ ವೇಳೆ ಬಸ್ ಚಾಲಕ ರೀಲ್ಸ್ ನೋಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಹತ್ತಾರು ಜನರಿರುವ ಬಸ್‌ನಲ್ಲಿ ಚಾಲಕರ ನಿರ್ಲಕ್ಷ್ಯ ಸಾರ್ವಜನಿಕರನ್ನ ಕೆರಳಿಸುವುದರ ಜೊತೆಗೆ ಭಯಕ್ಕೂ ಕೂಡ ಕಾರಣವಾಗಿತ್ತು.
ಬಸ್ ಚಾಲನೆ ವೇಳೆ ಕೆಲ ಚಾಲಕರ ನಡೆಗೆ ಬಸ್ ಗಳಿಗೆ ಹತ್ತೋಕು ಜನ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಇಂತಹ ಚಾಲಕರ ವಿರುದ್ಧ ಕೊನೆಗೂ ಎಚ್ಚೆತ್ತ ಬಿಎಂಟಿಸಿ ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿ ಅಂತಹ ಚಾಲಕರನ್ನು ಸಸ್ಪೆಂಡ್ ಮಾಡಲು ಮುಂದಾಗಿದೆ.