ಘಟಪ್ರಭ ನದಿಯಲ್ಲಿ ನೀರಿನ ಹರಿವು ಹೆಚ್ಚಳ, ಬಲೆಗೆ ಬಿದ್ದ ಬೃಹತ್ ಗಾತ್ರದ ಮೀನು

ಘಟಪ್ರಭ ನದಿ

ಘಟಪ್ರಭ ನದಿಗೆ ನೀರಿನ ಹರಿವು ಹೆಚ್ಚಾಗಿದ್ದು ಬೃಹತ್ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು,ಸ್ಥಳೀತರನ್ನ ನಿಬ್ಬೆರಗಾಗಿಸಿದೆ.

ನೀರಿನ ಒಳಹರಿವು

ಹೌದು, ಬಾಗಲಕೋಟೆ ಜಿಲ್ಲೆಯ ಮಾಚಕನೂರು ಗ್ರಾಮದಲ್ಲಿ ಘಟಪ್ರಭಾ ನೀರಿನ ಒಳಹರಿವು ಹೆಚ್ಚಾಗಿದೆ.

ಬೃಹತ್ ಗಾತ್ರದ ಮೀನು

ಬೃಹತ್ ಗಾತ್ರದ ಮೀನುಗಳು ನೀರಿನಲ್ಲಿ ಈಜಿ‌ ಬರುತ್ತಿವೆ.

30 ಕೆಜಿ ತೂಕದ ಮೀನು

ಮಾಚಕನೂರು ಗ್ರಾಮದಲ್ಲಿ ಮಹಾಂತೇಶ ಕೆಂಚಪ್ಪಗೋಳ ಎನ್ನುವ ಮೀನುಗಾರನ ಬೆಲೆ ಮೂವತ್ತು ಕೆಜಿ ತೂಕದ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದ್ದು,ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ.

ಸಂಭ್ರಮದಲ್ಲಿ ಮೀನುಗಾರರು

ಮೂವತ್ತು ಕೆಜಿ ತೂಕದ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದ್ದರಿಂದ ಮೀನುಗಾರರಲ್ಲಿ ಸಂಭ್ರಮ ಮನೆಮಾಡಿದೆ.

ಘಟಪ್ರಭ ನದಿ

ಕಳೆದ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುತ್ತಿದ್ದ ಘಟಪ್ರಭ ನದಿ ಈಗ ಜೀವಕಳೆ ಪಡೆದುಕೊಂಡಿದೆ.

ನದಿಯ ಒಡಲು

ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿದ್ದು ಘಟಪ್ರಭ ನದಿಯ ಒಡಲು ತುಂಬಿದೆ.

ಕೃಷಿ ಚಟುವಟಿಕೆಗಳು

ಕೃಷಿ ಚಟುವಟಿಕೆಗಳು ಕೂಡ ಭರ್ಜರಿಯಾಗಿ ಸಾಗುತ್ತಿದ್ದು ರೈತರು, ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

VIEW ALL

Read Next Story