ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯಾಗಿ ಕನ್ನಡೇತರರಾದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕರ್ನಾಟಕ ವಿರೋಧಿ ಬಿಜೆಪಿ ಎಂದು ಹೇಳುತ್ತಾ ಬಿಜೆಪಿ ವಿರುದ್ಧ 10 ಅಂಶಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ.
ನಮೋ ಎಂದರೆ 'ನಮಗೆ ಮೋಸ' ಎಂದು ನೇರವಾಗಿ ಹೇಳುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ 10 ಅಂಶಗಳ ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿದೆ. ಅದಕ್ಕೆ ನಾವೇನು ಕಡಿಮೆ ಇಲ್ಲ ಎಂಬಂತೆ ಬಿಜೆಪಿ ತಿರುಗೇಟನ್ನೂ ನೀಡಿದೆ.
ಕಾಂಗ್ರೆಸ್ ಮಾಡಿರುವ ಆರೋಪಗಳೇನು? ಅದಕ್ಕೆ ಬಿಜೆಪಿ ತಿರುಗೆಟೇನು ಎಂಬುದನ್ನು ಮುಂದೆ ಓದಿ...
* ಕಾಂಗ್ರೆಸ್ ಆರೋಪ- 1
ಬಿಜೆಪಿ ತಿರುಗೇಟು- ರಾಜೀವ್ ಚಂದ್ರಶೇಖರ್ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ್ದಾರೆ. ನಿಮ್ಮ ಸಂಸದರ ಕೊಡುಗೆಯೇನು? ರಾಜ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಕೊಡುಗೆಯೇನು ಎಂದು ಗೊತ್ತಾಗದೆ ನಾಚಿ ತಲೆತಗ್ಗಿಸಿದ್ದೇವೆ. ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್ ರೀತಿ ಕೆಲಸ ಮಾಡುವ ನಿಮ್ಮ ಪಕ್ಷದ ಒಬ್ಬ ರಾಜ್ಯಸಭಾ ಸದಸ್ಯರನ್ನು ತೋರಿಸಿ.
* ಕಾಂಗ್ರೆಸ್ ಆರೋಪ- 2
ಬಿಜೆಪಿ ತಿರುಗೇಟು- ಕರ್ನಾಟಕಕ್ಕೆ ಮಹಾದಾಯಿಯಿಂದ ಒಂದು ಹನಿ ನೀರು ಬಿಡಲ್ಲ ಎಂದ ಸೋನಿಯಾ ಗಾಂಧಿ ಹೇಳಿಕೆಯನ್ನು ಖಂಡಿಸಿ.
* ಕಾಂಗ್ರೆಸ್ ಆರೋಪ- 3
ಬಿಜೆಪಿ ತಿರುಗೇಟು- IBPS ಪ್ರಾರಂಭವಾಗಿದ್ದು 2014ರಲ್ಲಾ? ನಿಮ್ಮ ಪಕ್ಷ ಆಡಳಿತದಲ್ಲಿದ್ದಾಗ ಪರೀಕ್ಷೆಯಲ್ಲಿ ಕನ್ನಡವನ್ನು ಏಕೆ ಸೇರಿಸಿಲ್ಲ? NEETನಲ್ಲಿ ಪ್ರಾದೇಶಿಕ ಭಾಷೆ ಅಳವಡಿಸಲು ಅಭಿಪ್ರಾಯ ಕೇಳಿದಾಗ ನಿಮ್ಮ ಕನ್ನಡ ಪ್ರೇಮ ಎಲ್ಲಿ ಹೋಗಿತ್ತು?
* ಕಾಂಗ್ರೆಸ್ ಆರೋಪ- 4
ಬಿಜೆಪಿ ತಿರುಗೇಟು- ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸರಕಾರದಂತೆ ರೈತರ ಎಲ್ಲಾ ಸಾಲ ಮನ್ನಾ ಮಾಡಲು ನಿಮಗೇಕೆ ನಿರಾಸಕ್ತಿ?
* ಕಾಂಗ್ರೆಸ್ ಆರೋಪ- 5
ಬಿಜೆಪಿ ತಿರುಗೇಟು- ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಕರ್ನಾಟಕಕ್ಕೆ ಎಐಐಎಂಎಸ್, ಐಐಟಿ, ಐಐಐಟಿ, ಸ್ಕಿಲ್ ಡೆವಲಪ್ಮೆಂಟ್ ಯುನಿವರ್ಸಿಟಿ, ಫುಡ್ ಪಾರ್ಕ್ ಗಳು ಬಂದಿವೆ.
* ಕಾಂಗ್ರೆಸ್ ಆರೋಪ- 6
ಬಿಜೆಪಿ ತಿರುಗೇಟು- ರಾಜ್ಯದಲ್ಲಿ ದುರಾಡಳಿತ ನಡೆಸಿ ಈಗ ಪರಿಷ್ಕೃತದ ಕನ್ನಡ ಧ್ವಜದ ಮೂಲಕ ಸಮಾಧಾನ ಪಡಿಸಲು ಹೊರಟಿದ್ದೀರಾ?
* ಕಾಂಗ್ರೆಸ್ ಆರೋಪ- 7
ಬಿಜೆಪಿ ತಿರುಗೇಟು- ರಿಲಯನ್ಸ್ ಗೆ ಸಬ್ ಕಂಟ್ರಾಕ್ಟ್ ಕೊಟ್ಟಿರೋದು ರಾಫೆಲ್ ಹೊರತು ಕೇಂದ್ರ ಸರ್ಕಾರವಲ್ಲ.
* ಕಾಂಗ್ರೆಸ್ ಆರೋಪ- 8
ಬಿಜೆಪಿ ತಿರುಗೇಟು- 2007-2008ರಲ್ಲಿ ರಾಜ್ಯಕ್ಕೆ 269ಕೋಟಿ, 2012-2013ರಲ್ಲಿ 530.29ಕೋಟಿ ಯುಪಿಎ ಸರ್ಕಾರ ನೀಡಿತ್ತು. ಆದರೆ ಮೋದಿ ಸರ್ಕಾರ ರಾಜ್ಯಕ್ಕೆ ಕಾಂಗ್ರೆಸಿಗಿಂತ ಮೂರು ಪಟ್ಟು ಹೆಚ್ಚು ಹಣ ನೀಡಿದೆ.
* ಕಾಂಗ್ರೆಸ್ ಆರೋಪ- 9
ಬಿಜೆಪಿ ತಿರುಗೇಟು- ದಶಕಗಳ ಕಾಲ ಆಳ್ವಿಕೆ ಮಾಡಿಯೂ ಕೂಡ ಕನ್ನಡ ಭಾಷೆಯಲ್ಲಿ ರೈಲ್ವೆ ಟಿಕೆಟ್ ಮುದ್ರಿಸಲು ವಿಫಲರಾದಿರಿ. ಅದನ್ನು ಕೂಡ ಮಾಡಿದ್ದು ನಮ್ಮ ಮೋದಿ ಸರ್ಕಾರ.
* ಕಾಂಗ್ರೆಸ್ ಆರೋಪ- 10
ಬಿಜೆಪಿ ತಿರುಗೇಟು-
Supporting K'taka's interest, Central Govt filed an affidavit in Supreme Court objecting setting up of Cauvery
Management Board.This move helped K'taka build a strong case in SC and eventually resulted in our victory.
CM had himself thanked the Union govt for this move. https://t.co/KtEFC67GN8
— BJP Karnataka (@BJP4Karnataka) March 12, 2018