Honeytrap: ಹನಿಟ್ರ್ಯಾಪ್ ಎಂಬುದು ವ್ಯಕ್ತಿಯ ಭಾವನಾತ್ಮಕ, ಲೈಂಗಿಕ ಅಥವಾ ವೈಯಕ್ತಿಕ ದುರ್ಬಲತೆಯನ್ನು ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಒಂದು ಮಾರ್ಗ. ಇದನ್ನು ಸಾಮಾನ್ಯವಾಗಿ ರಾಜಕೀಯ ನಾಯಕರು, ಸೇನಾ ಅಧಿಕಾರಿಗಳು, ಉದ್ಯಮಿಗಳು, ಅಥವಾ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಣಕ್ಕೆ ಬೇಡಿಕೆ (blackmail), ಅಥವಾ ಸೂಕ್ಷ್ಮ ಮಾಹಿತಿಗಳನ್ನ ಪಡೆಯಲು ಬಳಸಲಾಗುತ್ತದೆ.
ಹನಿಟ್ರ್ಯಾಪ್ ಕಾರ್ಯವಿಧಾನ:
ಹನಿಟ್ರ್ಯಾಪ್(Honey Trap) ಆಗಲಿ ಅಥವಾ ಇತರ ಬ್ಲ್ಯಾಕ್‌ಮೇಲ್ ಮಾರ್ಗಗಳಾಗಲಿ, ಇದು ಒಂದು ಬಾರಿ ಆಗುವ ಕೃತ್ಯ ಅಲ್ಲಾ, ಇದರಲ್ಲಿ ಹಂತಗಳಿವೆ:
1. ಟಾರ್ಗೆಟ್ ಆಯ್ಕೆ (Target Identification):
ರಾಜಕೀಯ ನಾಯಕರು, ಸೇನಾ ಅಧಿಕಾರಿಗಳು, ಉದ್ಯಮಿ, ಅಥವಾ ಯಾವುದೇ ಪ್ರಭಾವಿ ವ್ಯಕ್ತಿಯನ್ನು ಗುರಿಯಾಗಿ ಆಯ್ಕೆ ಮಾಡಲಾಗುತ್ತದೆ.
ಅವರೆಲ್ಲರೂ ಯಾವ ರೀತಿಯ ವೈಯಕ್ತಿಕ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಪೂರಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ- ಹನಿ ಟ್ರ್ಯಾಪ್ ಪ್ರಕರಣ: ಸ್ವಪಕ್ಷ ನಡೆಗೆ ಸುನೀಲ್ ಕುಮಾರ್ ಬೇಸರ
2. ಪರಿಚಯದ ಹಂತ (Establishing Contact):
ಟಾರ್ಗೆಟ್ ಆಗಿರುವ ವ್ಯಕ್ತಿ ಜೊತೆ ಆಕರ್ಷಕ ಹಾಗೂ ಸುಂದರ ವ್ಯಕ್ತಿಯ ಮೂಲಕ ಸ್ನೇಹ ಅಥವಾ ಸಂಬಂಧ ಸ್ಥಾಪಿಸಲಾಗುತ್ತದೆ. ಈ ಸಂಬಂಧವು ಪ್ರೀತಿಯ ನೆಪದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ಅಥವಾ ಪಾರ್ಟಿಗಳು, ಸಮಾರಂಭಗಳಲ್ಲಿ ಸಂಪರ್ಕಿಸಿ ಬೆಳೆಯಬಹುದು.
3. ಭಾವನಾತ್ಮಕ ಬಂಧ (Emotional Attachment):
ಟಾರ್ಗೆಟ್‌ನ ಭಾವನಾತ್ಮಕವಾಗಿ ಬಳಸಿಕೊಂಡು ಅವರ ನಂಬಿಕೆ ಪಡೆಯಲಾಗುತ್ತದೆ. ಈ ಹಂತದಲ್ಲಿ ಆಳವಾದ ಸ್ನೇಹ, ಪ್ರೀತಿ ಅಥವಾ ಸಂಬಂಧ ಬೆಳೆಸಿ, ಅವರ ನಂಬಿಕೆಯನ್ನು ಸಂಪಾದಿಸೋದು ಮುಖ್ಯ ಗುರಿಯಾಗಿರುತ್ತದೆ.
4. ಅಪಾಯದ ಸೃಷ್ಟಿ (Compromising Situation):
ಸಂಬಂಧ ಗಾಢವಾಗಿದ ನಂತರ, ಫೋಟೋ, ವಿಡಿಯೋ ಅಥವಾ ಧ್ವನಿಮುದ್ರಣದ ಮೂಲಕ ಪ್ರಿಯಪಾತ್ರನ ಅಥವಾ ಪ್ರಿಯಪಾತ್ರೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲಾಗುತ್ತದೆ.ಕೆಲವೊಮ್ಮೆ ಡ್ರಗ್‌ಗಳನ್ನು ಬಳಸಿ ವ್ಯಕ್ತಿಯನ್ನು ನಾನಾ ರೀತಿಯಲ್ಲಿ ಅಪಾಯದ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತದೆ.
ಇದನ್ನೂ ಓದಿ- ನನ್ನ ಕುಟುಂಬಕ್ಕೂ ಹನಿಟ್ರ್ಯಾಪ್ ಆಗಿದೆ: ಸಚಿವ ಕೆ.ಎನ್. ರಾಜಣ್ಣ ಶಾಕಿಂಗ್ ಹೇಳಿಕೆ
5. ಬ್ಲ್ಯಾಕ್‌ಮೇಲ್ (Blackmail):
ದಾಖಲಿಸಿದ ಖಾಸಗಿ ಚಿತ್ರಗಳು, ವಿಡಿಯೋಗಳು ಅಥವಾ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಅಥವಾ ಸುದ್ದಿ ಮಾದ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿಲಾಗುವುದು. ಬಿಡುಗಡೆ ಮಾಡಬಾರದು ಎಂದಾದರೆ ಹಣ, ರಾಜಕೀಯ ಕೆಲಸ ಅಥವಾ ರಹಸ್ಯ ಮಾಹಿತಿಯನ್ನು ನೀಡಲು ಕೇಳಲಾಗುವುದು.
ಒಟ್ಟಿನಲ್ಲಿ, ಹನಿಟ್ರ್ಯಾಪ್ ಪ್ರಕರಣಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರವಲ್ಲ, ಅವರ ರಾಜಕೀಯ ಭವಿಷ್ಯ, ವೈಯಕ್ತಿಕ ಜೀವನ ಮತ್ತು ಮಾನಸಿಕ ಸ್ಥಿತಿಗಳಿಗೆ ಅಪಾರ ಹಾನಿ ಉಂಟುಮಾಡುತ್ತದೆ. ಗೌಪ್ಯ ಚಿತ್ರಗಳು ಅಥವಾ ವಿಡಿಯೋಗಳು ಬಹಿರಂಗವಾದರೆ ವ್ಯಕ್ತಿಯ ಖ್ಯಾತಿಗೆ ಆಘಾತ ಉಂಟಾಗುತ್ತದೆ. ಜೊತೆಗೆ ರಾಜಕೀಯವಾಗಿ ಅವನತಿ ಹೊಂದಬಹುದು. ಸೇನಾ ಅಥವಾ ಸರ್ಕಾರದ ಗೌಪ್ಯ ಮಾಹಿತಿಗಳು ಬಹಿರಂಗವಾದರೆ ರಾಷ್ಟ್ರದ ಭದ್ರತೆಗೆ ಅಪಾಯವಾಗಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









