)
Who is YouTuber Sameer MD: ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ಪ್ರಕರಣದ ಜೊತೆ ಧರ್ಮಸ್ಥಳದ ವಿಚಾರವಾಗಿ ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಕಂಟೆಂಟ್ ಹರಿಬಿಟ್ಟಿದ್ದ ಸಮೀರ್ ಎಂಡಿ ಬಗ್ಗೆ ಈ ವರದಿಯಲ್ಲಿ ಕಂಪ್ಲೀಟ್ ಮಾಹಿತಿ ನೀಡಲಾಗಿದೆ.
ʼದೂತʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸಮೀರ್ ಎಂಡಿ ಎಂಬಾತ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿ ಹಾಕಿದ್ದ. ಆದರೆ ಈ ಸಂದರ್ಭದಲ್ಲಿ ಹಿಂದೂಗಳ ಧಾರ್ಮಿಕ ಕ್ಷೇತ್ರವನ್ನೂ ಟಾರ್ಗೆಟ್ ಮಾಡಿದ್ದ ಎಂಬ ಆರೋಪ ಮಾಡಲಾಗಿತ್ತು. ಈ ವಿಚಾರದಲ್ಲಿ ಧರ್ಮಸ್ಥಳದ ಭಕ್ತರು ಆತನ ವಿರುದ್ಧ ಸಿಡಿದೆದ್ದಿದ್ದರು. ಆ ಬೆನ್ನಲ್ಲೇ ಆತನ ವಿರುದ್ಧ ಪ್ರಕರಣ ಕೂಡ ದಾಖಲಾಗಿ ಬಂಧನ ಯತ್ನ ನಡೆದಿತ್ತು.
ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಈ ಸಮೀರ್ ಎಂಡಿ ಯಾರು? ಈತನ ಹಿನ್ನೆಲೆ ಏನು? ಎಂಬುದನ್ನು ಈ ವರದಿಯಲ್ಲಿ ನೋಡೋಣ.
ಸಮೀರ್ ಎಂಡಿ ಒಬ್ಬ ಕಂಟೆಂಟ್ ಕ್ರಿಯೇಟರ್. ಅವರು ಈ ಹಿಂದೆ ಪ್ಯಾರಾ ನಾರ್ಮಲ್ ಅಂದರೆ ದೆವ್ವ ಭೂತಗಳ ಅನುಭವದ ಕುರಿತು ವೀಡಿಯೊಗಳನ್ನು ಮಾಡುತ್ತಿದ್ದ ಸಮೀರ್ ಎಂಡಿ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಉತ್ತಮ ಸಬ್ಸ್ಕ್ರೈಬರ್ಸ್ನ್ನು ಹೊಂದಿದ್ದರು. ಇತ್ತೀಚೆಗೆ ಅವರು ʼದೂತʼ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ ಅನೇಕ ವೀಡಿಯೊಗಳನ್ನು ಪ್ರಕಟಿಸಿದ್ದರು.
ಎಂಜಿನಿಯರಿಂಗ್ ಪದವೀಧರನಾಗಿರುವ ಸಮೀರ್ ಎಂಡಿ ಮೂಲತಃ ಬಳ್ಳಾರಿ ಜಿಲ್ಲೆಯವರು. ಸುಮಾರು 12 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣವನ್ನು ಉಲ್ಲೇಖಿಸಿ "ಊರಿಗೆ ದೊಡ್ಡವರೇ ಕೊಲೆ ಮಾಡಿದ್ರಾ" ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ವೀಡಿಯೊ ಪ್ರಕಟವಾದ ತಕ್ಷಣ, ವೀಡಿಯೊ ಮಾಡಲು ಅವರು ಲಂಚ ಪಡೆದಿದ್ದಾರೆ ಎಂಬ ಆರೋಪ ಹೊರಿಸಲಾಯಿತು. ಸೌಜನ್ಯ ಪರ ವೀಡಿಯೊದಲ್ಲಿ ಅವರು ಧರ್ಮಸ್ಥಳ ದೇವಾಲಯವನ್ನೂ ಹೆಸರಿಸಿದ್ದು, ಇದು ಧರ್ಮಸ್ಥಳದ ಭಕ್ತರನ್ನು ಕೆರಳಿಸಿತ್ತು. ಅದಾದ ಬಳಿಕ ಬಳ್ಳಾರಿಯಲ್ಲಿ ದೂರು ಕೂಡ ದಾಖಲಾಗಿ ಬಂಧನಕ್ಕೆ ಯತ್ನ ನಡೆದಿತ್ತು.