ಟಿಪ್ಪು ಜಯಂತಿ ಆಚರಣೆ ಏಕೆ!

            

Last Updated : Nov 10, 2017, 12:37 PM IST
ಟಿಪ್ಪು ಜಯಂತಿ ಆಚರಣೆ ಏಕೆ! title=

ಸದ್ಯ ಟಿಪ್ಪು ಜಯಂತಿಯ ವಿಚಾರ ಕುರಿತಂತೆ ಪರ-ವಿರೋಧದ ಚರ್ಚೆಯು ನಡೆಯುತ್ತಿದೆ. ಕೆಲವರು ಟಿಪ್ಪುವನ್ನು ದೇಶ ದ್ರೋಹಿ ಎಂದರೆ, ಇನ್ನೂ ಕೆಲವರು ದೇಶ ಪ್ರೇಮಿ ಎಂದು ಕರೆಯುತ್ತಾರೆ. ಇಂತಹ ಜಿಜ್ಞಾಸೆಗಳ ನಡುವೆಯೂ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೇ ಟಿಪ್ಪು ನೀಡಿದ ಮಹತ್ತರ ಕೊಡುಗೆಗಳನ್ನು ಸ್ಮರಿಸಲು ಇಂದು ಸರ್ಕಾರ 'ಟಿಪ್ಪು ಜಯಂತಿ'ಯನ್ನು ಆಚರಿಸುತ್ತಿದೆ. 

ಹಾಗಾದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಟಿಪ್ಪುವನ್ನು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿ ಸ್ಮರಿಸಲು ಕಾರಣಗಳೇನು? ಟಿಪ್ಪು ಜಯಂತಿಯನ್ನು ಆಚರಿಸುವುದು ತಪ್ಪೇ? ತಪ್ಪಿಲ್ಲ ಎಂದು ಹೇಳುವುದಾದರೆ, ಟಿಪ್ಪು ಜಯಂತಿಯನ್ನು ಏಕೆ ಆಚರಿಸಬೇಕು? 

* ಮೈಸೂರು ಪ್ರಾಂತ್ಯದ ಜನರಿಗೆ ಟಿಪ್ಪು ಧ್ವನಿಯಾಗಿದ್ದನು.
* ಧೈರ್ಯ ಮತ್ತು ತ್ಯಾಗಕ್ಕೆ ಇನ್ನೊಂದು ಹೆಸರೇ ಟಿಪ್ಪು.
* ಶೋಷಿತ ಸಮುದಾಯಗಳಿಗೆ ಇದ್ದ ಸಾಮಾಜಿಕ ಬಹಿಷ್ಕಾರವನ್ನು ತಡೆದಿದ್ದು ಟಿಪ್ಪು ಹಿರಿಮೆ.
* ಬ್ರಿಟಿಷರ ಅವಧಿಯಲ್ಲಿ ಜನರನ್ನು ರಕ್ಷಿಸಲು ಮುಂದಾದ ದೊರೆ.
* ಜನರ ಒಳಿತಿಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಿದ್ದ ನಾಯಕ.
* 40,000 ಚ.ಮೈಲಿ ಇದ್ದ ಮೈಸೂರು ಸಾಮ್ರಾಜ್ಯವನ್ನು 80,000 ಚ.ಮೈಲಿಗಳಷ್ಟು ವಿಸ್ತರಿಸಿದ.
* ಲಾಭದಾಯಕ ರೇಷ್ಮೆಯನ್ನು ಪರಿಚಯಿಸಿದ್ದು ಟಿಪ್ಪು.
* ಶೃಂಗೇರಿಯ ಶಾರದಾ ಪೀಠವನ್ನು ಜೀರ್ಣೋದ್ಧಾರ ಮಾಡಲು ಸಹಕರಿಸಿದ್ದು ಟಿಪ್ಪು.
* ಭಾರತಕ್ಕೆ ಮೊದಲು ರಾಕೆಟ್ ತಂತ್ರಜ್ಞಾನ ಟಿಪ್ಪುವಿನ ಕೊಡುಗೆ.
* 18ನೇ ಶತಮಾನದಲ್ಲಿ ಟಿಪ್ಪು ತನ್ನ ಹಲವಾರು ಭೂಮಿಯನ್ನು  ಬಡವರಿಗೆ ಹಂಚಿದ್ದನು. 

ಕೆಲವರು ವಾದಿಸುವಂತೆ ಟಿಪ್ಪು ಹಿಂದೂಗಳ ವಿರೋಧಿಯಾಗಿದ್ದರೆ ಶೃಂಗೇರಿಯ ಜೀರ್ಣೋದ್ಧಾರವಾಗಲೀ, ಶೋಷಿತ ಸಮುದಾಯಕ್ಕೆ ಬೆಂಬಲವಾಗಲಿ ಅಥವಾ ಬಡವರಿಗೆ ಭೂಮಿ ಹಂಚುವುದನ್ನಾಗಲಿ ಮಾಡುತ್ತಿದ್ದನೇ ಎಂಬುದನ್ನು ನಾವು ಒಂದು ಕ್ಷಣ ಯೋಚಿಸಬೇಕು. 

ಕಳೆದ 500 ವರ್ಷಗಳಲ್ಲಿ ಟಿಪ್ಪು ಒಬ್ಬ ಶ್ರೇಷ್ಠ ಕನ್ನಡಿಗ. ಟಿಪ್ಪು ಒಂದು ವೇಳೆ ಹಿಂದೂವಾಗಿ ಜನಿಸಿದ್ದರೆ, ಮಹಾರಾಷ್ಟ್ರದಲ್ಲಿ ಶಿವಾಜಿ ಪೂಜಿಸುವಂತೆ ಕರ್ನಾಟಕವು ಟಿಪ್ಪುವನ್ನು ಪೂಜಿಸುತ್ತಿತ್ತೇನೋ ಎಂದು ಗಿರೀಶ್ ಕಾರ್ನಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Trending News