ಇದು ಮೂರು ಮಕ್ಕಳ ಹೆತ್ತಿರುವ ಮಹಿಳೆಯ ಅಕ್ರಮ ಸಂಬಂಧದ ಪ್ರೇಮ ಕಹಾನಿ. ಹದಿಮೂರು ವರ್ಷ ಕಾಲ ಜೊತೆಯಾಗಿ ಸಂಸಾರ ಮಾಡಿದವನನ್ನೆ ಕಿಂಚಿತ್ತು ಕರುಣೆ ಕನಿಕರ ಇಲ್ಲದೆ ಕೊಂದು ಮುಗಿಸಿದ್ದಾಳೆ.

ಕೊಪ್ಪಳ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಅರೆಬರೆ ಸುಟ್ಟುಹಾಕಿ ಪತ್ನಿ ನಾಗರ ಪಂಚಮಿ ಆಚರಿಸಿದ್ದಳು. ಗಂಡನನ್ನು ಕೊಂದು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ನಾಗರ ಪಂಚಮಿ ಹಬ್ಬ ಮಾಡಿದಾಕೆ ಶ್ರಾವಣ ಮುಗಿಯೊದರೊಳಗೆ ಕಂಬಿ ಹಿಂದೆ ಬಿದ್ದಿದ್ದಾಳೆ.
ಇದು ಮೂರು ಮಕ್ಕಳ ಹೆತ್ತಿರುವ ಮಹಿಳೆಯ ಅಕ್ರಮ ಸಂಬಂಧದ ಪ್ರೇಮ ಕಹಾನಿ. ಹದಿಮೂರು ವರ್ಷ ಕಾಲ ಜೊತೆಯಾಗಿ ಸಂಸಾರ ಮಾಡಿದವನನ್ನೆ ಕಿಂಚಿತ್ತು ಕರುಣೆ ಕನಿಕರ ಇಲ್ಲದೆ ಕೊಂದು ಮುಗಿಸಿದ್ದಾಳೆ. ಮಾತ್ರವಲ್ಲ ನಾಗರ ಪಂಚಮಿ ಹಬ್ಬ ಬೇರೆ ಆಚರಿಸಿಕೊಂಡಿದ್ದಾಳೆ.
ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ನೇತ್ರಾವತಿ ಎನ್ನುವ ಮಹಿಳೆಗೆ ಮದುವೆಯಾಗಿ ಮೂರು ಮಕ್ಕಳಿದ್ದರು. ಆದರೂ ಇನ್ನೊಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾನೆ ಎನ್ನುವ ಕಾರಣಕ್ಕೆ ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿ ಪತಿಯನ್ನೆ ಕೊಂದಿದ್ದಾಳೆ. ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿಯಾಗಿದ್ದು ವೃತ್ತಿಯಲ್ಲಿ ಕರು ಚಾಲಕ. ನೇತ್ರಾವತಿ ಮತ್ತು ಶ್ಯಾಮಣ್ಣ ಒಂದೇ ಗ್ರಾಮದವರಾಗಿದ್ದರು. ನೇತ್ರಾವತಿಗೆ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿ, ಮೂವರು ಮಕ್ಕಳಿದ್ದರು.
ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಉತ್ತಿರುವ ಕಾರಣ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಜುಲೈ 25ರಂದು ರಾಡಿನಿಂದ ಹೊಡೆದು ದ್ಯಾಮಣ್ಣನ ಕೊಲೆ ಮಾಡಿದ್ದಾರೆ. ಬಳಿಕ ಸತ್ತ ವ್ಯಕ್ತಿಯ ಗುರುತು ಸಿಗದಂತೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಕೊಲೆ ಬಳಿಕ ರಾಡ್ ವಾಪಸ್ ಕೂಡ ನೀಡಿದ್ದಾನೆ. ಅತ್ತ ಗಂಡ ಹೆಣವಾಗಿ ಸುಟ್ಟು ಕರಕಲಾಗಿದ್ದರೂ, ಇತ್ತ ಮನೆಯಲ್ಲಿ ನೇತ್ರಾವತಿ ಏನೂ ಆಗಿಲ್ಲ ಎನ್ನುವಂತೆ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದ್ದಾಳೆ.
ಇನ್ನು, ಕೊಲೆ ಬಳಿಕ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಮನೆಯವರಿಗೆ ನಂಬಿಸಿದ್ದಾಳೆ. ತಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು 5 ದಿನ ಮನೆಯಲ್ಲೇ ಇದ್ದಳು. ಇತ್ತ ದ್ಯಾಮಣ್ಣ ಸಹೋದರರು ಅನುಮಾನಗೊಂಡು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮುನಿರಾಬಾದ್ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ಪತಿ ಕೊಲೆ ವಿಚಾರವನ್ನು ನೇತ್ರಾವತಿ ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿ ಪತಿಯನ್ನ ಕೊಂದಿರುವುದು ಬಹಿರಂಗವಾಗಿದೆ.