ಸೆಲ್ಫಿ ತೆಗೆದುಕೊಳ್ಳವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ...!? ಭಯಾನಕ ವಿಡಿಯೋ ವೈರಲ್‌

Viral Selfie Incident:  ಇತ್ತೀಚೆಗೆ, ಪತ್ನಿಯರು ತಮ್ಮ ಗಂಡನ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚುತ್ತಿವೆ. ಇತ್ತೀಚಿನ ಪ್ರಕರಣವೊಂದರಲ್ಲಿ, ಪತ್ನಿಯೊಬ್ಬಳು ತನ್ನ ಗಂಡನನ್ನು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನದಿಗೆ ತಳ್ಳಿದ್ದಾರೆ ಎನ್ನಲಾದ ಘಟನೆ ಇದೀಗ ಬೆಳಕಿದೆ ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jul 12, 2025, 05:45 PM IST
    • ಪತ್ನಿಯರು ತಮ್ಮ ಗಂಡನ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚುತ್ತಿವೆ.
    • ಪತ್ನಿಯೊಬ್ಬಳು ತನ್ನ ಗಂಡನನ್ನು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನದಿಗೆ ತಳ್ಳಿದ್ದಾರೆ
    • ತ್ನಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ತನ್ನ ಗಂಡನನ್ನು ನದಿಗೆ ತಳ್ಳಿದ್ದಾಳೆ
ಸೆಲ್ಫಿ ತೆಗೆದುಕೊಳ್ಳವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ...!? ಭಯಾನಕ ವಿಡಿಯೋ ವೈರಲ್‌

Wife pushes man into River : ಪತ್ನಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ತನ್ನ ಗಂಡನನ್ನು ನದಿಗೆ ತಳ್ಳಿದ್ದಾಳೆ ಎನ್ನಲಾಗಿದೆ.. ಜೋರಾಗಿ ಹರಿಯುತ್ತಿದ್ದ ನದಿಯಿಂದ ಕೊನೆಗೂ ಈಜುತ್ತಾ ಪತಿ ಬದುಕುಳಿದಿದ್ದಾನೆ. ಈ ಘಟನೆ ತೆಲಂಗಾಣ-ಕರ್ನಾಟಕ ಗಡಿಯಲ್ಲಿ ನಡೆದಿದೆ. ಅಲ್ಲದೆ, ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Add Zee News as a Preferred Source

ಕರ್ನಾಟಕದ ರಾಯಚೂರು ಜಿಲ್ಲೆಯ ಗುರ್ಜಾಪುರ ಸೇತುವೆಯಲ್ಲಿ ಈ ಘಟನೆ ನಡೆದಿದೆ. ತಾತಪ್ಪ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಅವರು, ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದ ಚೆಗುಂಟ ಮತ್ತು ಕುಡ್ಲೂರು ನಡುವಿನ ಕೃಷ್ಣಾ ನದಿ ಸೇತುವೆ ತೆರೆಳಿದ್ದರು. ಅಲ್ಲಿ, ಅವರ ಪತ್ನಿ "ಬಾ ಸೆಲ್ಫಿ ತೆಗೆದುಕೊಳ್ಳೋಣ" ಅಂತ ಹೇಳಿ ಸೇತುವೆಯ ಅಂಚಿಗೆ ಕರೆದೊಯ್ದರು. ಇದೇ ವೇಳೆ ಗಂಡನನ್ನು ನದಿಗೆ ತಳ್ಳಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: ಗಾಯಗೊಂಡಿರುವ ಸಿಂಹದ ಉಸಿರು... ಬಂಡೆ ಬಣದ ಬೆಂಬಲಿಗರ ರೋಷದ ಮಾತು ಮತ್ತು ಡಿಕೆ ಮುಂದಿನ ಹೆಜ್ಜೆ

ತಾತಪ್ಪನಿಗೆ ಈಜು ಬರದಿದ್ದರೂ, ಅದೃಷ್ಟವಶಾತ್ ನದಿ ಆಳವಿಲ್ಲದ ಕಾರಣ, ಸ್ವಲ್ಪ ದೂರ ಕೊಚ್ಚಿ ಹೋಗಿದ್ದಾನೆ. ನಂತರ, ನದಿಯ ಮಧ್ಯದಲ್ಲಿರುವ ಮರದ ಕೊಂಬೆಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲಿದ್ದ ದೊಡ್ಡ ಬಂಡೆಯ ಮೇಲೆ ಕುಳಿತು ಬದುಕುಳಿದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ.

ಇನ್ನು ಘಟನೆ ಕುರಿತು ಮಾತನಾಡಿರುವ ತಾತಪ್ಪ, "ನನ್ನ ಹೆಂಡತಿ ನನ್ನನ್ನು ಕೊಲ್ಲಲು ನದಿಗೆ ತಳ್ಳಿದಳು" ಎಂದು ಆರೋಪಿಸಿದ್ದಾರೆ. ಆದರೆ, " ನಿಯಂತ್ರಣ ಕಳೆದುಕೊಂಡು ಬಿದ್ದ" ಅಂತ ಪತ್ನಿ ಹೇಳುತ್ತಿದ್ದಾರೆ. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ.. ಅಂತ ಕಾದು ನೋಡಬೇಕಾಗಿದೆ. ಘಟನೆಯ ಬಗ್ಗೆ ಸಂಬಂಧಿಕರಿಗೆ ಮಾಹಿತಿ ಸಿಗುತ್ತಿದ್ದಂತೆ, ಅವರು ಸ್ಥಳಕ್ಕೆ ಬಂದು ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಲಾಗಿದ್ದು, ದಂಪತಿಯ ವಿಚಾರಣೆ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News