)
Female Leopard Dead: ಹೆಣ್ಣು ಚಿರತೆಯ ಶವ ಪತ್ತೆಯಾದ ಘಟನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದಲ್ಲಿ ನಡೆದಿದೆ. ಮೃತ ಚಿರತೆಗೆ 4-5 ವರ್ಷ ಎಂದು ಅಂದಾಜಿಸಲಾಗಿದೆ.
ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಬಂಡಳ್ಳಿ ಶಾಖೆಯ ತಮ್ಮಡಿಹಳ್ಳ ಅರಣ್ಯದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಚಿರತೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಹಿಂಗಾಲುಗಳು ಪಾರ್ಶ್ವವಾಯುಗೆ ತುತ್ತಾದ ಪರಿಣಾಮ ಚಿರತೆ ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ದೃಢವಾಗಿದ್ದು ಹೆಚ್ಚಿನ ತನಿಖೆಗಾಗಿ ಚಿರತೆ ಅಂಗಾಗಗಳು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.