close

News WrapGet Handpicked Stories from our editors directly to your mailbox

ಪಕ್ಷ ಬಿಟ್ಟು ಹೋದವರನ್ನು ಪ್ರಳಯವಾದ್ರೂ ಸರಿ, ಕಾಂಗ್ರೆಸ್‌ಗೆ ಸೇರಿಸಲ್ಲ: ಸಿದ್ದರಾಮಯ್ಯ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ದ್ರೋಹ ಮಾಡಿರುವ ಅತೃಪ್ತ ಶಾಸಕರಿಗೆ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಿಂದಿರುಗಲು ಅವಕಾಶ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Updated: Jul 23, 2019 , 07:46 PM IST
ಪಕ್ಷ ಬಿಟ್ಟು ಹೋದವರನ್ನು ಪ್ರಳಯವಾದ್ರೂ ಸರಿ, ಕಾಂಗ್ರೆಸ್‌ಗೆ ಸೇರಿಸಲ್ಲ: ಸಿದ್ದರಾಮಯ್ಯ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ವಿರುದ್ಧ ವಿಪ್ ಜಾರಿಗೊಳಿಸಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಪಕ್ಷ ತೊರೆದ ಶಾಸಕರನ್ನು ಯಾವುದೇ ಕಾರಣಕ್ಕೂ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶ್ವಾಸಮತಕ್ಕೆ ಹಾಕುವ ಮುನ್ನ ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ದ್ರೋಹ ಮಾಡಿರುವ ಅತೃಪ್ತ ಶಾಸಕರಿಗೆ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಿಂದಿರುಗಲು ಅವಕಾಶ ನೀಡುವುದಿಲ್ಲ. ಪ್ರಳಯವಾದರೂ ಸರಿ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಖಂಡಿತ ತ್ರಿಶಂಕು ಸ್ವರ್ಗವೇ ಆಗುತ್ತೆ ಎಂದು ಹೇಳಿದರು. 

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಜೆಡಿಎಸ್ ಪಕ್ಷದ ಮೂರು ಅತೃಪ್ತ ಶಾಸಕರನ್ನು ವಾಪಸ್ ಪಡೆಯುವುದಿಲ್ಲ. ರಾಜ್ಯದ ಜನರಿಗೆ ಈ ಶಾಸಕರ ಬಗ್ಗೆ ತಿಳಿಯಲಿ ಎಂದು ಕುಮಾರಸ್ವಾಮಿ ಹೇಳಿದರು.