ಕೆಲಸದ ಅವಧಿ 10 ಗಂಟೆಗೆ ಏರಿಸಿದರೂ ವಾರಕ್ಕೆ 2 ದಿನ ರಜೆ ಇರಲಿದೆ ! ಹೀಗಿದ್ದೂ ಕಾರ್ಮಿಕರು ಈ ಚಿಂತನೆಗೆ ವಿರೋಧಿಸುತ್ತಿರುವ ಕಾರಣ ?

ಈಗಾಗಲೇ ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ತಿದ್ದುಪಡಿಯನ್ನ ತಂದಿವೆ. ಛತ್ತೀಸ್ ಘಡ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರಖಂಡ್ ನಲ್ಲಿ ತಿದ್ದುಪಡಿ ತಂದು ಕೆಲಸದ ಅವಧಿ ಹೆಚ್ಚಳ ಮಾಡಿಸಿದೆಯಂತೆ.

Written by - Ranjitha R K | Last Updated : Jun 18, 2025, 07:55 PM IST
  • ಖಾಸಗಿ ಸಂಸ್ಥೆಗಳ‌ ಕೆಲಸದ ಅವಧಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
  • ಈ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಕಾರ್ಮಿಕರ ದುಡಿಯುವ ಅವಧಿ ಹೆಚ್ಚಾಗಲಿದೆ
  • ಕಾಯ್ದೆ ತಿದ್ದುಪಡಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.
ಕೆಲಸದ ಅವಧಿ 10 ಗಂಟೆಗೆ ಏರಿಸಿದರೂ ವಾರಕ್ಕೆ 2 ದಿನ ರಜೆ ಇರಲಿದೆ ! ಹೀಗಿದ್ದೂ ಕಾರ್ಮಿಕರು ಈ ಚಿಂತನೆಗೆ ವಿರೋಧಿಸುತ್ತಿರುವ ಕಾರಣ ?

ಬೆಂಗಳೂರು  : ಖಾಸಗಿ ಸಂಸ್ಥೆಗಳ‌ ಕೆಲಸದ ಅವಧಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕ ಶಾಪ್ಸ್ ಆಂಡ್ ಕಮರ್ಷಿಯಲ್ ಎಷ್ಟಾಬ್ಲಿಷ್ ಮೆಂಟ್ ಆ್ಯಕ್ಟ್ -೧೯೬೧ ಗೆ ತಿದ್ದುಪಡಿ ತರಲು ಹೊರಟಿದೆ. ಒಂದು ವೇಳೆ ಈ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಕಾರ್ಮಿಕರ ದುಡಿಯುವ ಅವಧಿ ಹೆಚ್ಚಾಗಲಿದೆ. ಅಂದರೆ ದುಡಿಯುವ ಅವಧಿ 9 ಗಂಟೆಯಿಂದ 10 ಗಂಟೆಗೆ ಏರಲಿದೆ. ಹಾಗಾಗಿ ಕಾಯ್ದೆ ತಿದ್ದುಪಡಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. 

Add Zee News as a Preferred Source

ಕರ್ನಾಟಕ ಶಾಪ್ಸ್ ಆಂಡ್ ಕಮರ್ಷಿಯಲ್ ಆ್ಯಕ್ಟ್ -೧೯೬೧ ರ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಕಾಯ್ದೆಗೆ ತಿದ್ದು‌ಪಡಿ ತಂದು ಈಗಿರುವ ಖಾಸಗಿ ನೌಕರ, ಸಿಬ್ಬಂದಿಗಳ ಕೆಲಸದ ಅವಧಿಯನ್ನ 9 ಗಂಟೆಯಿಂದ 10ಗಂಟೆಗೆ ಏರಿಕೆ ಮಾಡಲು ಮುಂದಾಗಿದೆ. ಸರ್ಕಾರದ ಈ ಚಿಂತನೆಗೆ ರಾಜ್ಯದ ಕಾರ್ಮಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.ಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟ ವಾಡದಂತೆ ಸರ್ಕಾರಕ್ಕೆ‌ಎಚ್ಚರಿಕೆ ನೀಡಿದೆ. ಇದನ್ನ ಯಾವುದೇ ಕಾರಣಕ್ಕೂ ಜಾರಿಗೆ ತರದಂತೆ ಸರ್ಕಾರದ ಮೇಲೆ ಒತ್ತಡ ಏರಿದೆ. 

ಇದನ್ನೂ ಓದಿ ದೇವೇಗೌಡರು ಬಿಜೆಪಿ ಪಕ್ಷದತ್ತ ಮುಖ ಮಾಡಿರಲಿಲ್ಲ

ರಾಜ್ಯ ಸರ್ಕಾರಗಳ ಮೇಲೆ ಕೇಂದ್ರದ ಒತ್ತಡವಿದ್ಯಾ?  :
ಇನ್ನು ಶಾಪ್ಸ್ ಅಂಡ್ ಕಮರ್ಷಿಯಲ್ ಎಷ್ಟಾಬ್ಲಿಷ್ ಮೆಂಟ್ ಆ್ಯಕ್ಟ್ ಅನ್ನ ತರುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆಯಂತೆ. ೧೯೬೧ ರ ಕಾಯ್ದೆಯೇ ಮುಂದುವರೆದಿರುವ ಅದಕ್ಕೆ ತಿದ್ದುಪಡಿ ತರಬೇಕು. ಉತ್ಪಾದನಾ ಕ್ಷೇತ್ರದ ಬಲವರ್ಧನೆಗೆ ಅವಕಾಶ ಮಾಡಿಕೊಡಬೇಕೆಂದು ಹೇಳಿದೆಯಂತೆ. ಈಗಾಗಲೇ ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ತಿದ್ದುಪಡಿಯನ್ನ ತಂದಿವೆ. ಛತ್ತೀಸ್ ಘಡ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರಖಂಡ್ ನಲ್ಲಿ ತಿದ್ದುಪಡಿ ತಂದು ಕೆಲಸದ ಅವಧಿ ಹೆಚ್ಚಳ ಮಾಡಿಸಿದೆಯಂತೆ. ಹಾಗಾಗಿ‌ ಉಳಿದ ರಾಜ್ಯಗಳಲ್ಲೂ‌ ತಿದ್ದುಪಡಿ ತಂದರೆ ದೇಶದ ಉದ್ಯಮ ಕ್ಷೇತ್ರ ಮತ್ತಷ್ಟು‌ ಬೆಳೆಯಲಿದೆ ಅನ್ನೋದು ಕೇಂದ್ರದ ಅಭಿಮತ. ಕೇಂದ್ರವೇ ನೇರವಾಗಿ ಕಾನೂನು ತರುವುದಕ್ಕೆ ಸಾಧ್ಯವಿಲ್ಲವಂತೆ. ಹಾಗಾಗಿ ರಾಜ್ಯಗಳ ಕಾನೂನು ತಿದ್ದುಪಡಿ ರಾಜ್ಯಗಳೇ ಮಾಡಬೇಕಿರುವುದರಿಂದ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.  ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಪರಿಷ್ಕರಣೆಗೆ ಮುಂದಾಗಿದೆ. ಹಾಗಾಗಿ ಇಂದು ಮಾಲಿಕರು,ಕಾರ್ಮಿಕ ಸಂಘಟನೆಗಳ ಜೊತೆ ಸಭೆಯನ್ನ ನಡೆಸಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಹೊಟೇಲ್ ಮಾಲಿಕರು ಇನ್ನ ಸ್ವಾಗತಿಸಿದರೆ, ಎಐಟಿಯುಸಿ ಪ್ರತಿನಿಧಿಗಳು ಇದನ್ನ‌ ವಿರೋಧಿಸಿದ್ದಾರೆ. 

ಈ ಕಾಯ್ದೆಯಡಿ ನೊಂದಾಯಿಸಿರುವ ಅಂಗಡಿ, ವಾಣಿಜ್ಯ ಮಳಿಗೆಗಳ ಕಾರ್ಮಿಕರು, ನೌಕರರು ೯ ತಾಸಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ. ಅದರ‌ ಮೇಲೆ ಕೆಲಸ ಮಾಡಿದರೆ ಹೆಚ್ಚುವರಿ ಓಟಿ ಸಿಗುತ್ತಿತ್ತು. ಈ ಕಾಯ್ದೆಗೆ ತಿದ್ದುಪಡಿ ತಂದರೆ ಕೆಲಸದ ಅವಧಿ ೧೦ ಗಂಟೆಗೆ ಏರಿಕೆಯಾಗಲಿದೆ.ಒಟಿ ಅವಧಿ ೧೨ ತಾಸಿಗೆ ಏರಿಕೆಯಾಗಲಿದೆಯಂತೆ. ದಿನಕ್ಕೆ ೧೨ ತಾಸು ನೌಕರರು ಕೆಲಸ ಮಾಡಿದರೆ  ಅವರ ದೈಹಿಕ ಅರೋಗ್ಯ ಹದಗೆಡಲಿದೆ.ಹೆಣ್ಣುಮಕ್ಕಳಿಗೆ ಋತುಸ್ರಾವದ ಸಂದರ್ಭ ದಲ್ಲಿ ಮತ್ತಷ್ಟು ಕಠಿಣವಾಗಲಿದೆ. ಹೀಗಾಗಿಯೇ ಇದು ಕಾರ್ಯಸಾಧುವಲ್ಲ ಎಂದು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಆದರೆ ಹೊಟೇಲ್ ಮಾಲಿಕರ ಸಂಘ ಈ ತಿದ್ದುಪಡಿ ಮಾಲಿಕ ಹಾಗೂ ಕಾರ್ಮಿಕ ಇಬ್ಬರಿಗೂ ಅನುಕೂಲವಾಗಲಿದೆ ಎಂದು ಹೇಳುತ್ತಿದೆ. ಕೆಲಸ ಅವಧಿ ದಿನಕ್ಕೆ ೧೦ ಗಂಟೆಯಾಗಲಿದೆಯಾದರೂ  ವಾರಕ್ಕೆ ಎರಡು ದಿನ ರಜೆ ಸಿಗಲಿದೆ. ಅಲ್ಲಿಗೆ 9 ತಾಸುಗಳೇ ಕೆಲಸದ ಅವಧಿಯಾಗಲಿದೆ ಎಂದು ಸಮರ್ಥಿಸಿಕೊಂಡಿದೆ. 

ಇದನ್ನೂ ಓದಿ : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕಸರತ್ತು

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News