ಸಿಎಂ ಬದಲಾವಣೆ ಇಲ್ಲ.. ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ; ಸಿಎಂ ಪುತ್ರ ಯತೀಂದ್ರನಿಂದ ಆಟಂಬಾಂಬ್

ತಮ್ಮ ತಂದೆಯ ಪರವಾಗಿ ಯತೀಂದ್ರ ಅಖಾಡಕ್ಕೆ ಇಳಿದು, ಭಾರೀ ಸದ್ದು ಮಾಡ್ತಿದ್ದಾರೆ.ಐದು ವರ್ಷವೂ ಸಿದ್ದರಾಮಯ್ಯನ ವ್ರೇ ಸಿಎಂ ಎಂದು ಡಿ.ಕೆ ಶಿವಕುಮಾರ್ ಆಪ್ತರ ಕೆಂಗಣ್ಣಿಗೆ ಗುರಿಯಾಗಿದ್ರು.

Edited by - Chetana Devarmani | Last Updated : Dec 11, 2025, 09:37 PM IST
  • ಸಿಎಂ ಬದಲಾವಣೆ ಇಲ್ಲ.. ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ..!
  • ಸಿಎಂ ಪುತ್ರ ಯತೀಂದ್ರನಿಂದ ಆಟಂಬಾಂಬ್..!
ಸಿಎಂ ಬದಲಾವಣೆ ಇಲ್ಲ.. ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ; ಸಿಎಂ ಪುತ್ರ ಯತೀಂದ್ರನಿಂದ ಆಟಂಬಾಂಬ್

ಬೆಳಗಾವಿ : ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಆಟಂಬಾಂಬ್ ನಂತೆ ಸಿಡಿಯುತ್ತಿದೆ.ಪವರ್ ಶೇರಿಂಗ್ ಜಟಾಪಟಿಗೆ ಇನ್ನೇನು ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಮತ್ತೆ ಸೌಂಡ್ ಮಾಡ್ತಿದೆ.ಸಿಎಂ ಪುತ್ರ ಯತೀಂದ್ರ ಕೊಟ್ಟ ಒಂದು ಸ್ಟೇಟ್ ಮೆಂಟ್ ಇಡೀ ಅಧಿವೇಶನದ ದಿಕ್ಕನ್ನೇ ಬದಲಿಸಿದೆ.ದಿನಕ್ಕೊಂದು ಹೇಳಿಕೆ,ಪ್ರತಿಕ್ರಿಯೆಗಳು ಚಳಿಗಾಲದಲ್ಲೂ  ಕಾವೇರುವಂತೆ ಮಾಡಿದೆ.

Add Zee News as a Preferred Source

ತಮ್ಮ ತಂದೆಯ ಪರವಾಗಿ ಯತೀಂದ್ರ ಅಖಾಡಕ್ಕೆ ಇಳಿದು, ಭಾರೀ ಸದ್ದು ಮಾಡ್ತಿದ್ದಾರೆ.ಐದು ವರ್ಷವೂ ಸಿದ್ದರಾಮಯ್ಯನ ವ್ರೇ ಸಿಎಂ ಎಂದು ಡಿ.ಕೆ ಶಿವಕುಮಾರ್ ಆಪ್ತರ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ನಾಯಕತ್ವದ ಬದಲಾವಣೆ ಏನೂ ಇಲ್ಲ‌‌. ಹೈಕಮಾಂಡ್ ಕ್ಲಿಯರ್ ಕಟ್ ಹೇಳಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ರು.ಇದರಿಂದ ಚಳಿಗಾಲದ ಕಲಾಪ ಮತ್ತಷ್ಟು ಬಿಸಿಯೇರುವಂತಾಗಿದೆ. ಯತೀಂದ್ರ ಸ್ಟೇಟ್ ಮೆಂಟ್ ಡಿ.ಕೆ ಶಿವಕುಮಾರ್ ಅವ್ರನ್ನೂ ಕೆರಳಿಸಿದೆ..ಸಿಎಂ ಪುತ್ರ ಆಗಿರೋದ್ರಿಂದ ಕನಿಷ್ಟ ನೋಟಿಸ್ ಕೂಡ ಕೊಡಲಾಗೇ,ವಿಷಕಂಠನಂತೆ ಇದ್ದಾರೆ.ಯತೀಂದ್ರ ಸ್ಟೇಟ್ ಮೆಂಟ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡ್ತಾರೆ ಅಂತಾ ಸಿದ್ದರಾಮಯ್ಯ ಕಡೆ ಬೊಟ್ಟು ಮಾಡಿದ್ದಾರೆ..ಈ ಬಗ್ಗೆ ಅವರ ತಂದೆ ಉತ್ತರಿಸಲಿ ಎಂದು ಸೂಚ್ಯವಾಗಿ ತಿಳಿಸಿದ್ರು.

ಇನ್ನು ಯತೀಂದ್ರ ಸ್ಟೇಟ್ ಮೆಂಟ್ ಬಗ್ಗೆ ಹೆಚ್ಚಾಗಿ ಮಾತಾಡದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಕಡೆ ಬೊಟ್ಟು ಮಾಡಿ ಸುಮ್ಮನಾದ್ರು. ನಾವ್ ಮಾತಾಡಿದ್ರೆ ಬಲಾತ್ಕಾರ,ಅವ್ರು ಮಾತಾಡಿದ್ರೆ ಚಮತ್ಕಾರನಾ ಅಂತಾ ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಸಿಡಿದಿದ್ದಾರೆ. ಹೈಕಮಾಂಡ್ ಸ್ಥಾನವನ್ನ ಯಾರೂ ತುಂಬೋದು ಬೇಡ ಅಂತಾ ಯತೀಂದ್ರಗೆ ಕುಣಿಗಲ್ ರಂಗನಾಥ್ ಕೌಂಟರ್ ಕೊಟ್ರು. ಸಿಎಂ‌ ಪುತ್ರ ಯತೀಂದ್ರ ಹೇಳಿಕೆಯಿಂದ ಜಟಾಪಟಿ ಜೋರಾಗ್ತಿದ್ದಂತೆ ಸಿಎಂ ಮಧ್ಯಪ್ರವೇಶ ಮಾಡಿದ್ದಾರೆ.ತಮ್ಮ ಪುತ್ರನನ್ನ ಇಂದು ಮಧ್ಯಾಹ್ನ ಕಾರಿನಿಲ್ಲಿ ಕೂರಿಸಿಕೊಂಡು ಸುವರ್ಣಸೌಧದಿಂದ ಬೆಳಗಾವಿ ಸರ್ಕ್ಯೂಟ್ ಹೌಸ್ ಗೆ ಕರೆದುಕೊಂಡು ಹೋದ್ರು. ಊಟದ ವೇಳೆ ಏನೂ ಮಾತನಾಡದಂತೆ ಬುದ್ದಿಮಾತು ಹೇಳಿದ್ದಾರಂತೆ. 

ಈ ಕಡೆ ಡಿ.ಕೆ ಶಿವಕುಮಾರ್ ಅಲರ್ಟ್ ಆಗಿದ್ದಾರೆ. ಮಧ್ಯಾಹ್ನ ಕಲಾಪ ಮುಂದೂಡಿಕೆ ಯಾದ್ರೂ ಸದನದಲ್ಲೇ ಕೂತು,ಆಪ್ತ ಸಚಿವರು, ಶಾಸಕರ ಜೊತೆ  ಸಮಾಲೋಚನೆ ನಡೆಸಿದ್ರು. ಸಚಿವ ಪ್ರಿಯಾಂಕ್ ಖರ್ಗೆ, ಮಂಡ್ಯ ಶಾಸಕ ರವಿ ಗಣಿಗ, ಎನ್.ಎ.ಹ್ಯಾರಿಸ್,ಆನೇಕಲ್ ಶಿವಣ್ಣ,ನೆಲಮಂಗಲ ಶ್ರೀನಿವಾಸ್,ರೂಪಾ ಶಶಿಧರ್ ಜೊತೆ ಗಹನ ಮಾತುಕತೆಯಲ್ಲಿ ತೊಡಗಿದ್ರು.ನಂತ್ರ ಸುವರ್ಣ ಸೌಧದ ಮೊಗಸಾಲೆಯ ಆಡಳಿತ ಪಕ್ಷದ ಕೊಠಡಿ ಯೊಂದರಲ್ಲಿ ಸಚಿವ ರಾಮಲಿಂಗಾರೆಡ್ಡಿ,ದಿನೇಶ್ ಗುಂಡೂರಾವ್,ಶಾಸಕ ರಿಜ್ವಾನ್ ಅರ್ಷದ್,ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ ಸೋಮಶೇಖರ್ ಸೇರಿದಂತೆ ಬೆಂಗಳೂರು ಭಾಗದ ಕೆಲ ಶಾಸಕರ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೌಪ್ಯ ಮಾತುಕತೆ ನಡೆಸಿದ್ರು. ಅವಕಾಶ ಸಿಕ್ಕಾಗಲೆಲ್ಲಾ ಶಾಸಕರನ್ನ ವಿಶ್ವಾಸಕ್ಕೆ ಪಡೆದು,ಬಲ ಹೆಚ್ಚಿಸಿ ಕೊಳ್ಳಲು ತಂತ್ರಗಾರಿಕೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌

ಇದನ್ನೂ ಓದಿ : ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಕಾಗೆ ಬೇಡಿಕೆ; ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕನ ಸೆಡ್ಡು

Trending News