)
ಕನ್ನಡಿಗರ ನೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕರ್ನಾಟಕ ಐಡಲ್ ಅವಾರ್ಡ್ಸ್-2025 ಪ್ರದಾನ ಮಾಡಿದೆ. ಬುಧವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಿತು. ಉದ್ಯಮ, ಕ್ರೀಡೆ, ಆರೋಗ್ಯ, ಕೃಷಿ, ಸಿನಿಮಾ, ಕಲೆ, ಸಮಾಜ ಸೇವೆ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಅಭಿನಂದಿಸುವ ಕಾರ್ಯಕ್ರಮ ಯಶಸ್ವಿಯಾಯಿತು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ. ಸದಾನಂದ ಗೌಡ ಹಾಗೂ ಕನ್ನಡದ ಪ್ರಣಯ ರಾಜ ಡಾ. ಶ್ರೀನಾಥ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು..ಮುಖ್ಯಮಂತ್ರಿಗಳ ಪರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗೌರವ ಸ್ವೀಕರಿಸಿದರು. ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಕುರುಣಾ ಜೈನ್, ಭಾರತ ಹಾಕಿ ತಂಡದ ಮಾಜಿ ನಾಯಕ ವಿ.ಆರ್.ರಘುನಾಥ್ ಹಾಗೂ ಪ್ಯಾರಾಲಿಂಪಿಕ್ಸ್ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಹೆಚ್.ಎನ್.ಗಿರೀಶ್ ಸೇರಿದಂತೆ ಹಲವರು ಪ್ರಶಸ್ತಿಗೆ ಭಾಜನರಾಗಿದ್ದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಳಿಕ ಮಾತಾಡಿದ ಶ್ರೀಗಳು ಪದ್ಮ ಗೌರವಕ್ಕೆ ಪಾತ್ರರಾಗುವಂತಹರನ್ನು ಜೀ ಕನ್ನಡ ನ್ಯೂಸ್ ಹುಡುಕಿದೆ. ಜೀ ಕನ್ನಡ ನ್ಯೂಸ್ ವಾಹಿನಿಯು ಸಮಾಜಮುಖಿಯಾಗಿದೆ ಅಂತ ಸಂತಸ ವ್ಯಕ್ತಪಡಿಸಿದ್ರು. ಮತ್ತೊಬ್ಬ ಅತಿಥಿಯಾಗಿ ಭಾಗವಹಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು, ಜೀವ ಮುಡುಪಾಗಿಟ್ಟು ಸಮಾಜದ ಅಭಿವೃದ್ಧಿಗೆ ಕಂಕಣ ತೊಟ್ಟವರನ್ನು ಗುರ್ತಿಸಿ ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನಿಸ್ವಾರ್ಥ ಸೇವೆಯನ್ನು ಸಮಾಜ ಗುರುತಿಸಿದಾಗ ಹೊಣೆ ಹೆಚ್ಚಾಗಿ ಹೆಮ್ಮೆ ಉಂಟಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವರು, ಶಾಸಕರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಅವರು ವಿವಿಧ ಕ್ಷೇತ್ರಗಳ ಸಾಧಕರನ್ನು ಸಾರ್ವತ್ರಿಕವಾಗಿ ಗೌರವಿಸಿ ನಾಡಿಗೆ ಪರಿಚಯ ಮಾಡಿಕೊಟ್ಟಿರೋದು ಉತ್ತಮ ಕಾರ್ಯ ಅಂತ ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್, ನಟಿ ಶ್ರೀಮತಿ ಅನು ಪ್ರಭಾಕರ್, ನಟ ವಿನಯ್ ರಾಜ್ಕುಮಾರ್, ನಟ ರಾಣ, ನಟಿ ಅದ್ವಿತಿ ಶೆಟ್ಟಿ ವೇದಿಕೆ ಮೇಲೆ ಇದ್ದು ಸಾಧಕರನ್ನು ಹುರಿದುಂಬಿಸಿದರು.ಇಡೀ ಕರ್ನಾಟಕ ಐಡಲ್ ಅವಾರ್ಡ್ಸ್ 2025 ಪ್ರದಾನ ಕಾರ್ಯಕ್ರಮವನ್ನ ಸಂಪಾದಕರಾದ ರವಿ ಎಸ್. ನಡೆಸಿಕೊಟ್ಟರು.
ಅತಿಥಿಗಳ ಹೇಳಿಕೆ: ಶ್ರೀ ವಚನಾನಂದ ಶ್ರೀಗಳು:- ಜೀ ಕನ್ನಡ ದೇಶದ ವಿಶ್ವಾಸಾರ್ಹ ಸುದ್ದಿ ವಾಹಿನಿಯಾಗಿದೆ. ದೇಶದ ಗೌರವ, ಪ್ರತಿಷ್ಠೆ ಕಾಪಾಡಲು ಪೂರಕವಾಗಿದೆ. ತೆರೆಮರೆಯ ಮಹಾನ್ ವ್ಯಕ್ತಿಗಳನ್ನು ಹುಡುಕಿ ಗೌರವಿಸೋ ಕೆಲಸ ಮಾಡುತ್ತಿರುವುದು ಉತ್ತಮವಾದ ಕೆಲಸ. ಪದ್ಮ ಗೌರವಕ್ಕೆ ಪಾತ್ರರಾಗೋ ಸಾಧಕರನ್ನು ಹುಡುಕಿ ಪ್ರಶಸ್ತಿ ಕೊಟ್ಟಿರೋದು ಹಂಡೆ ಹಾಲು ಕುಡಿದಷ್ಟೇ ಖುಷಿಯಾಗಿದೆ, ಜೀ ಕನ್ನಡ ನ್ಯೂಸ್ ವಾಹಿನಿಯ ಕೆಲಸ ಮಾದರಿಯಾಗಿದೆ.
ಶ್ರೀನಾಥ್ :- ಜೀ ಕನ್ನಡ ನ್ಯೂಸ್ ನೀಡುತ್ತಿರುವ ಕರ್ನಾಟಕ ಐಡಲ್ ಸಹಸ್ರಾರು ಸಾಧಕರಿಗೆ ನೆರವಾಗಲಿದೆ. ಮತ್ತಷ್ಟು ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವಂತಾಗಿದೆ. ಜೀವಮಾನ ಸಾಧನೆ ಗುರ್ತಿಸಿ ನನಗೆ ಕೊಡುತ್ತಿರುವುದು ಜನರ ಪ್ರೀತಿ-ವಿಶ್ವಾಸದ ಗೌರವ.
- ಹಿರಿಯ ಕನ್ನಡ ನಟ-ಜೀವಮಾನ ಸಾಧನೆ ಗೌರವ
ಡಿ.ವಿ.ಸದಾನಂದಗೌಡ :- ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಜೀ ಕನ್ನಡ ನ್ಯೂಸ್ ಮಾಡುತ್ತಿದೆ. ವ್ಯಕ್ತಿಯ ಸಾಧನೆ ಸಮಾಜಕ್ಕೆ ಶಕ್ತಿಯಾಗಿ ಪರಿಣಮಿಸಿದೆ. ಜೀ ಕನ್ನಡ ನ್ಯೂಸ್ ಮಾಧ್ಯಮ ಹೊಣೆಗಾರಿಕೆಯನ್ನು ಪ್ರಬುದ್ಧವಾಗಿ ನಿರ್ವಹಿಸುತ್ತಿದೆ.
- ಹಿರಿಯ ರಾಜಕಾರಣಿ-ಜೀವಮಾನ ಸಾಧನೆ ಗೌರವ
AS ಕಿರಣ್ ಕುಮಾರ್ :- ಜೀವ ಮುಡುಪಾಗಿಟ್ಟು ಸಮಾಜದ ಅಭಿವೃದ್ಧಿಗೆ ಕಂಕಣ ತೊಟ್ಟವರನ್ನು ಗುರ್ತಿಸಿ ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನಿಸ್ವಾರ್ಥ ಸೇವೆಯನ್ನು ಸಮಾಜ ಗುರುತಿಸಿದಾಗ ಹೊಣೆ ಹೆಚ್ಚಾಗಿ ಹೆಮ್ಮೆ ಉಂಟಾಗುತ್ತದೆ.
- ಇಸ್ರೋ ಮಾಜಿ ಅಧ್ಯಕ್ಷರು
ದಿನೇಶ್ ಗುಂಡೂರಾವ್ :- ತಮ್ಮಿಷ್ಟಕ್ಕೆ ನಿರಂತರ ಸೇವೆ ಮಾಡುತ್ತಾ ತೆರೆಮರೆಯಲ್ಲಿ ಇದ್ದವರನ್ನು ಜೀ ಕನ್ನಡ ನ್ಯೂಸ್ ಗುರುತಿಸಿ ಪ್ರೋತ್ಸಾಹಿಸಿದೆ. ಗ್ರಾಮೀಣ ಭಾಗದ ಪ್ರತಿಭೆಗಳ ಸನ್ಮಾನದಿಂದ ಪ್ರಶಸ್ತಿಯ ಮೌಲ್ಯವು ಕೂಡ ಹೆಚ್ಚಾಗಿದೆ.
- ಆರೋಗ್ಯ ಸಚಿವರು-ಕರ್ನಾಟಕ ಸರ್ಕಾರ
ಬೈರತಿ ಸುರೇಶ್ :- ಮುಖ್ಯಮಂತ್ರಿಗಳ ಜೀವಮಾನ ಸಾಧನೆಗೆ ಜೀ ಕನ್ನಡ ನ್ಯೂಸ್ ಗೌರವ ಸಲ್ಲಿಸಿದೆ. ವಾಹಿನಿಯ ಸಮಾಜಮುಖಿ ಕಾರ್ಯಗಳು ಇತರರಿಗೂ ಪ್ರೇರಣೆಯೊಂದಿಗೆ ಮುಂದುವರಿಯಲಿ.
- ನಗರಾಭಿವೃದ್ಧಿ ಸಚಿವರು-ಕರ್ನಾಟಕ ಸರ್ಕಾರ
TB ಜಯಚಂದ್ರ :- ವಿವಿಧ ಕ್ಷೇತ್ರಗಳ ಸಾಧಕರನ್ನು ಸಾರ್ವತ್ರಿಕವಾಗಿ ಗೌರವಿಸಿ ನಾಡಿಗೆ ಪರಿಚಯವಾಗಿದೆ. ಗ್ರಾಮೀಣ ಪ್ರತಿಭೆ ಮತ್ತು ಬಡಮಕ್ಕಳನ್ನು ರಾಜ್ಯದ ಮುಂದೆ ಅನಾವರಣ ಮಾಡಿದ್ದಾರೆ.
- ಮಾಜಿ ಸಚಿವರು, ದೆಹಲಿ ವಿಶೇಷ ಪ್ರತಿನಿಧಿ-ರಾಜ್ಯ ಸರ್ಕಾರ
ವಿನಯ್ ರಾಜಕುಮಾರ್ :- ಜೀ ಕನ್ನಡ ನ್ಯೂಸ್ ಗುರುತಿಸಿರುವ ಸಾಧಕರು ನೂರಕ್ಕೆ ನೂರು ಅಸಲಿ ಸಾಧಕರು. ಈ ಸನ್ಮಾನ ಮತ್ತಷ್ಟು ಮಂದಿಗೆ ಪ್ರೇರಣೆಯಾಗಲಿ.
- ಪ್ರಸಿದ್ಧ ಕನ್ನಡ ನಟ
ಅನು ಪ್ರಭಾಕರ್ :- ಎಲ್ಲಾ ಸಾಧಕರಿಗೂ ಅಭಿನಂದನೆಗಳು. ಅಭಿನಂದನೆಗೆ ಅರ್ಹರಿದ್ದೀರ. ಜೀ ಕನ್ನಡ ನ್ಯೂಸ್ ಸಂಪಾದಕ ರವಿ ಅವರ ತಂಡಕ್ಕೂ ಪ್ರಣಾಮಗಳು. ನಿಮ್ಮ ಸಾಧನೆ ಸರ್ವ ಜನರಿಗೂ ಹುರುಪನ್ನ ತರುವಂತಾಗಲಿ.
- ಪ್ರಸಿದ್ಧ ಕನ್ನಡ ನಟಿ
ರಾಣಾ :- ನಿಸ್ವಾರ್ಥ ಜನಸೇವಕರಿಗೆ ಅರ್ಹ ಗೌರವ ಸಿಕ್ಕಿದೆ. ಹಳ್ಳಿಯ ರೈತ, ವೈದ್ಯ, ಸರ್ಕಾರಿ ಅಧಿಕಾರಿಗಳ ಸೇವೆ ಅಮೂಲ್ಯವಾಗಿದೆ. ನಿಮ್ಮ ಸೇವೆ ನಮಗೆ ಸ್ಪೂರ್ತಿಯಾಗಿದೆ
- ಪ್ರಸಿದ್ಧ ಕನ್ನಡ ನಟ
ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಜೀವಮಾನ ಸಾಧನೆ ಪ್ರಶಸ್ತಿ-2025:
1) ಶ್ರೀ ಸಿದ್ದರಾಮಯ್ಯ - ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ (ಜೀವಮಾನ ಸಾಧನೆ ಪ್ರಶಸ್ತಿ)
2) ಶ್ರೀ ಡಿ.ವಿ. ಸದಾನಂದ ಗೌಡ - ಮಾನ್ಯ ಮಾಜಿ ಮುಖ್ಯಮಂತ್ರಿಗಳು (ಜೀವಮಾನ ಸಾಧನೆ ಪ್ರಶಸ್ತಿ)
3) ಡಾ. ಶ್ರೀನಾಥ್ - ಖ್ಯಾತ ಹಿರಿಯ ನಟ (ಜೀವಮಾನ ಸಾಧನೆ ಪ್ರಶಸ್ತಿ)
ಕರ್ನಾಟಕ ಐಡಲ್ ಅವಾರ್ಡ್ಸ್-2025 ಪ್ರಶಸ್ತಿ ವಿಜೇತರು:
1. ಪ್ರೊ. ಡಾ. ಎಂ. ಮುನಿರಾಜು - ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಕುಲಪತಿ
2. ಡಾ. ಪಿ.ಸಿ. ಜಗದೀಶ್ - ವೈದ್ಯಕೀಯ ಸೇವೆ
3. ಶ್ರೀ ಟಿ.ಎಂ.ಮಹೇಶ್- ಸಮಾಜ ಸೇವಕರು
4. ಶ್ರೀ ಕೃಷ್ಣ ಬಿ. ಮರಿಯಂಕ - ಬ್ರಾಂಡ್ ಅಂಡ್ ಕಮ್ಯೂನಿಕೇಶನ್ ಕನ್ಸಲ್ಟೆಂಟ್
5. ಶ್ರೀ ಮಲ್ಲಿಕಾರ್ಜುನ್ - RTO ನೌಕರರ ಸಂಘದ ರಾಜ್ಯಾಧ್ಯಕ್ಷರು & RTO ಅಧಿಕಾರಿ
6. ಶ್ರೀ ಕೃಷ್ಣ ಜೆ. ಪಾಲೇಮಾರ್ - ಮಾಜಿ ಸಚಿವರು & ಸಮಾಜ ಸೇವಕರು
7. ಶ್ರೀ ಶಾಂತ ಕುಮಾರ್ - ಸಮಾಜ ಸೇವಕರು
8. ಶ್ರೀ ಕೆ.ಟಿ. ನಾಗರಾಜ್ - ಬಿಬಿಎಂಪಿ ನಿವೃತ್ತ ಚೀಫ್ ಎಂಜಿನಿಯರ್
9. ಲಾಡ್ ಫೌಂಡೇಶನ್...
10. A-ಒನ್ ಸ್ಟೀಲ್ ಇಂಡಿಯಾ ಲಿಮಿಟೆಡ್ - ಲೀಡಿಂಗ್ ಸರ್ಟಿಫೈಡ್ ಗ್ರೀನ್ ಸ್ಟೀಲ್ ಮ್ಯಾನ್ಯುಫ್ಯಾಕ್ಚರರ್
11. ಶ್ರೀ ಈಶ್ವರ್ ಮಾನಪ್ಪ ವಜ್ಜಲ್ - ಸಮಾಜ ಸೇವಕರು
12. ಶ್ರೀ ವಿ.ಆರ್. ರಘುನಾಥ್ - ಹಾಕಿ ಕರ್ನಾಟಕ ಉಪಾಧ್ಯಕ್ಷರು
13. ಶ್ರೀಮತಿ ಸುಮಾ ಮಹೇಶ್ ಗೌಡ - ಸಮಾಜ ಸೇವಕರು & ಸಂಖ್ಯಾಶಾಸ್ತ್ರಜ್ಞರು
14. ಶ್ರೀ ರಾಘವೇಂದ್ರ - ನೈಋತ್ಯ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್
15. ಶ್ರೀ ಉಮಾಪತಿ - ಮಾಲೀಕರು, ಶ್ರೀ ಮಲ್ಲಿಕಾರ್ಜುನ ಟ್ರಾವೆಲ್ಸ್
16. ಶ್ರೀ ಅನಿಲ್ ಕುಮಾರ್ ಎಸ್.ಎಸ್. - ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ) ಟ್ರಸ್ಟ್ ಸಿಇಓ
17. ಡಾ. ರಾಘವೇಂದ್ರರಾವ್ ಪುರೋಹಿತ್ - ಜ್ಯೋತಿಷಿ & ಆಗಮಿಕರು
18. ಶ್ರೀ ಹೆಚ್.ಎನ್. ಗಿರೀಶ್ - ಪ್ಯಾರಾಲಿಂಪಿಯನ್
19. ಶ್ರೀ ಅಪ್ಪಾ ಸಾಬ್ ಶಿವಪ್ಪ ಕವಲಗುಡ್ಡ - ಪ್ರಗತಿಪರ ರೈತ
20. ಶ್ರೀ ಸಿ. ಮುನಿಸ್ವಾಮಿ ಕಪ್ಪಗಲ್ - ಸಮಾಜ ಸೇವಕರು
21. ಶ್ರೀ ಜಗದೀಶ್ ಎಸ್. - ವ್ಯವಸ್ಥಾಪಕ ನಿರ್ದೇಶಕರು, ಎಸ್ಜಿ ಗ್ರೂಪ್ಸ್ ಡೆವಲಪರ್ಸ್ ಅಂಡ್ ಪ್ರಮೋಟರ್ಸ್
22. ಡಾ. ಮುಬಾರಕ್ - ಶಿಕ್ಷಣ ಕ್ಷೇತ್ರ
23. ಶ್ರೀ ಸದ್ಗುರು ಅಭಿನವ ಕಲ್ಮೇಶ್ವರ ಮಹಾರಾಜರು - ಪೀಠಾಧ್ಯಕ್ಷರು, ಸದ್ಗುರು ಕಲ್ಮೇಶ್ವರ ಆಶ್ರಮ ಸುಕ್ಷೇತ್ರ
24. ಕರುಣಾ ಜೈನ್ - ಮಾಜಿ ಕ್ರಿಕೆಟರ್ (ಯುವರತ್ನ)
25. ಶ್ರೀ ಆಂಟೋನಿ ಸಜೀತ್ ಎಸ್. - ಸಮಾಜ ಸೇವಕರು
26. ಡಾ. ಪರಮೇಶ್ ಸಿದ್ದಪ್ಪ ಲಿಂಗಾಯತ್ - ಉದ್ಯಮಿ
27. ಶ್ರೀ ಶಿವಪ್ಪ ಎನ್. ದೇವರಗುಡಿ - ಉದ್ಯಮಿ
28. ಶ್ರೀ ರಮೇಶ್ ಶಂಕರ್ ಮಾಳಿ - ವಾಸ್ತುತಜ್ಞರು & ಸಮಾಜ ಸೇವಕರು
29. ಶ್ರೀಮತಿ ಲೀಲಾವತಿ - ಪಂಚಾಯತಿ ಅಭಿವೃದ್ಧಿ ಅಧಿಕಾರಿ
30. ಶ್ರೀ ದತ್ತ ಕೊಂಡಿಬಾ ಸಣ್ಣಕ್ಕಿ - ಪುರಸಭಾ ಸದಸ್ಯರು & ಸಮಾಜ ಸೇವಕರು
31. ಶ್ರೀ ನಿಂಗರಾಜ್ ಗೌಡ್ರು - ಉದ್ಯಮಿ & ಕನ್ನಡಪರ ಹೋರಾಟಗಾರರು
32. ಡಾ. ಎಂ. ಕೃಷ್ಣಪ್ಪ ಮರಸೂರು - ಸಮಾಜ ಸೇವಕರು
33. ಶ್ರೀ ಶ್ರೀಕಾಂತ್ ಕಾಂಬಳೆ - PSI, ಮನಗೋಳಿ ಪೊಲೀಸ್ ಠಾಣೆ
34. ಡಾ. ಪಂಡಿತ್ ಡಿ.ಎಸ್. ಜೋಶಿ - ಜ್ಯೋತಿಷಿ & ಸಲಹೆಗಾರರು
35. ಶ್ರೀ ನವೀನ್ ಅಂಜನಪ್ಪ - ಸಮಾಜ ಸೇವಕರು
36. ಶ್ರೀಮತಿ ಸುಷ್ಮಾ ಕುರುಬರ್ - ಸಮಾಜ ಸೇವಕರು
37. ಡಾ. ಪ್ರವೀಣ್ ಕುಮಾರ್ ಹಿರೇಮಠ್ - ವೈದ್ಯಕೀಯ ಸೇವೆ
38. ಶ್ರೀಮತಿ ಶೈಲಜಾ ಯೋಗೇಶ್ ರೆಡ್ಡಿ - ಸಮಾಜ ಸೇವಕರು