)
ಧಾರವಾಡ : ಕಲಘಟಗಿ ತಾಲೂಕಿನ ಗಳಗಿ ಗ್ರಾಮ ಪಂಚಾಯತಿ ಹಿಂದಿನ ಪಿಡಿಓಯಾಗಿದ್ದ ಪ್ರಸ್ತುತ ಉಗ್ನಿಕೇರಿ ಪಿಡಿಓ ಆಗಿರುವ ಅಬ್ದುಲ್ರಜಾಕ್ ಎಚ್. ಮನಿಯಾರ ಅವರನ್ನು ಕರ್ತವ್ಯಲೋಪ ಹಾಗೂ ಹಣಕಾಸು ದುರಪಯೋಗ ಆರೋಪದಡಿಯಲ್ಲಿ ಅಮಾನತು ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತು ಆದೇಶ ಹೊರಡಿಸಿದ್ದಾರೆ.
ಅನುದಾನದ ದುರುಪಯೋಗ :
2024-25 ಹಾಗೂ 2025-26ನೇ ಸಾಲುಗಳಲ್ಲಿ ಗ್ರಾಮ ಪಂಚಾಯತಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಎಸ್ಕ್ರೋ ಖಾತೆಯಿಂದ ಪಾವತಿಸುವ ಕುರಿತು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಸುತ್ತೋಲೆಗಳಲ್ಲಿ ತಿಳಿಸಿತ್ತು. ಆದರೂ ಸಹ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ ರಜಾಕ್ ಎಚ್. ಮನಿಯಾರ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿದ್ದಾರೆ.
ಇದನ್ನೂ ಓದಿ : ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಮೀಟಿಂಗ್
ಕರ್ತವ್ಯಲೋಪದ ಆರೋಪದ ಅಡಿಯಲ್ಲಿ ಅಮಾನತು :
ಕರ್ತವ್ಯಲೋಪದ ಆರೋಪದ ಅಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು (ವರ್ಗಿಕರಣ ನಿಯಂತ್ರಣ ಮತ್ತು ಅಪೀಲು) 1957 ರ ನಿಯಮ 10 (1) ಡ ಪ್ರಕಾರ ಗ್ರಾಮಪಂಚಾಯತ ಪಿಡಿಓ ಅಬ್ದುಲ್ ರಜಾಕ್ ಎಚ್. ಮನಿಯಾರ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಗೊಳಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.