ಹೆಂಡತಿ ತನ್ನ ಗಂಡನ ಜೊತೆ ಈ 5 ವಿಷಯಗಳ ಬಗ್ಗೆ ಎಂದಿಗೂ ಶೇರ್ ಮಾಡಿಕೊಳ್ಳುವುದಿಲ್ಲ!

ಇಂದಿನ ಜಮಾನದಲ್ಲಿ ಪ್ರತಿಯೊಬ್ಬರಿಗೂ ಮಾಜಿ ಪ್ರೇಮ ಪುರಾಣಗಳಿರುತ್ತವೆ. ಇಂತಹ ವಿಚಾರಗಳನ್ನು ತನ್ನ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಆಕೆ ಬಯಸುವುದಿಲ್ಲ. ಗತಕಾಲದ ಬಗ್ಗೆ ತಿಳಿದ ನಂತರ ತಮ್ಮ ಸಂಗಾತಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಎಂಬ ಗೊಂದಲದಿಂದ ಮರೆ ಮಾಡುತ್ತಾರೆ.

Written by - Bhavishya Shetty | Last Updated : Nov 8, 2025, 07:26 AM IST
    • ಪ್ರತಿಯೊಂದು ಸಂಬಂಧವು ನಂಬಿಕೆಯ ಮೇಲೆ ಆಧಾರಿತ
    • ಮಹಿಳೆಯರು ಅನೇಕ ರಹಸ್ಯಗಳನ್ನು ಮರೆಮಾಡುತ್ತಾರೆ.
    • ಕೇವಲ ಯಾರಿಗೂ ಹೇಳಬಾರದು ಎಂಬ ದೃಢ ನಿರ್ಧಾರ ಹೊಂದಿರುವುದರಿಂದ...
ಹೆಂಡತಿ ತನ್ನ ಗಂಡನ ಜೊತೆ ಈ 5 ವಿಷಯಗಳ ಬಗ್ಗೆ ಎಂದಿಗೂ ಶೇರ್ ಮಾಡಿಕೊಳ್ಳುವುದಿಲ್ಲ!

ಪ್ರತಿಯೊಂದು ಸಂಬಂಧವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಒಮ್ಮೆ ನಂಬಿಕೆ ಮುರಿದು ಬಿದ್ದರೆ ಸಂಬಂಧ ಉಳಿಸುವುದು ಕಷ್ಟ. ಅದಕ್ಕಾಗಿಯೇ ಜನರು ತಮ್ಮ ಸಂಗಾತಿಯೊಂದಿಗೆ ಸಂಬಂಧದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಮಹಿಳೆಯರು ಅನೇಕ ರಹಸ್ಯಗಳನ್ನು ಮರೆಮಾಡುತ್ತಾರೆ. ಹುಡುಗಿಯರು ತಮ್ಮ ಸಂಗಾತಿಗೆ ಹೇಳದ ಅನೇಕ ವಿಷಯಗಳಿವೆ. ಅದು ಭಯದಿಂದಲ್ಲ. ಕೇವಲ ಯಾರಿಗೂ ಹೇಳಬಾರದು ಎಂಬ ದೃಢ ನಿರ್ಧಾರ ಹೊಂದಿರುವುದರಿಂದ.

Add Zee News as a Preferred Source

ಇಂದಿನ ಜಮಾನದಲ್ಲಿ ಪ್ರತಿಯೊಬ್ಬರಿಗೂ ಮಾಜಿ ಪ್ರೇಮ ಪುರಾಣಗಳಿರುತ್ತವೆ. ಇಂತಹ ವಿಚಾರಗಳನ್ನು ತನ್ನ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಆಕೆ ಬಯಸುವುದಿಲ್ಲ. ಗತಕಾಲದ ಬಗ್ಗೆ ತಿಳಿದ ನಂತರ ತಮ್ಮ ಸಂಗಾತಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಎಂಬ ಗೊಂದಲದಿಂದ ಮರೆ ಮಾಡುತ್ತಾರೆ.

ಪ್ರತಿಯೊಬ್ಬರಿಗೂ ಕೆಲವು ರಹಸ್ಯ ಮೋಹವಿರುತ್ತದೆ. ಆದರೆ ಮಹಿಳೆಯರು ತಮ್ಮ ಬಾಯ್ ಫ್ರೆಂಡ್ ಅಥವಾ ಗಂಡಂದಿರಿಗೆ ಈ ಬಗ್ಗೆ ಹೇಳುವುದಿಲ್ಲ. ಅನೇಕ ಬಾರಿ ಮಹಿಳೆಯರು ತಮ್ಮ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ, ಆದರೆ ಅವರು ಸಂಗಾತಿಗೆ ಹೇಳಲು ಹಿಂಜರಿಯುತ್ತಾರೆ.

ಅನೇಕ ಬಾರಿ ಮಹಿಳೆಯರು ತಮ್ಮ ಅನಾರೋಗ್ಯವನ್ನು ಸಂಗಾತಿಯಿಂದ ಮರೆಮಾಡುತ್ತಾರೆ. ಇದನ್ನು ತಿಳಿದರೆ ತಮ್ಮ ಸಂಗಾತಿಯೂ ಬೇಸರಗೊಳ್ಳುತ್ತಾರೆ ಎಂದು ಮಹಿಳೆಯರು ಭಾವಿಸುವ ಕಾರಣ... ಅದಕ್ಕಾಗಿಯೇ ಅವಳು ತನ್ನ ತೊಂದರೆಯನ್ನು ಸಹಿಸಿಕೊಳ್ಳುತ್ತಲೇ ಇರುತ್ತಾಳೆ,

ಮಹಿಳೆಯರು ತಮ್ಮ ಪತಿ ಅಥವಾ ಗೆಳೆಯನ ಮುಂದೆ ತಮ್ಮ ಕುಟುಂಬದ  ಬಗ್ಗೆ ಬಹಳ ಜಾಗೃತರಾಗಿರುವುದು ಕಂಡುಬರುತ್ತದೆ. ತನ್ನ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ವಿಷಯಗಳನ್ನು ರಹಸ್ಯವಾಗಿಡುತ್ತಾಳೆ. ತನ್ನ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಒಳ್ಳೆಯ ವಿಷಯವಿದ್ದರೆ, ಅವಳು ಖಂಡಿತವಾಗಿಯೂ ಅದನ್ನು ತನ್ನ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾಳೆ.

ಇದನ್ನೂ ಓದಿ:  ಕಳೆಗುಂದಿದ ಮುಖ ಫಳ ಫಳ ಹೊಳೆಯುವಂತೆ ಮಾಡಲು ಈ ನ್ಯಾಚುರಲ್ ಫೇಸ್ ಮಾಸ್ಕ್‌ಗಳನ್ನು ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ:  ರೆಡ್‌ ವೈನ್‌ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದಾ? ಎಲ್ಲರ ನೆಚ್ಚಿನ ಪಾನಿಯದ ಬಗ್ಗೆ ತಜ್ಞರ ಶಾಕಿಂಗ್‌ ಸತ್ಯ ಬಯಲು

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News