ಬೆಂಗಳೂರು:  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಯಾವುದೇ ಗ್ರಹದ ಸಂಚಾರ, ಉದಯ, ಅಸ್ತ ಮತ್ತು ಹಿಮ್ಮುಖ ಚಲನೆಯು ರಾಶಿಚಕ್ರದ ಚಿಹ್ನೆಗಳ (Zodiac sign) ಮೇಲೆ ನೇರ ಪರಿಣಾಮ ಬೀರುತ್ತದೆ. 2022 ರಲ್ಲಿ, ರಾಶಿಚಕ್ರದಲ್ಲಿ ಬದಲಾವಣೆ (Rashi parivarthane), ಅನೇಕ ಗ್ರಹಗಳ ಉದಯ ಮತ್ತು ಅಸ್ತ ವಾಗಿದೆ.  ಶೀಘ್ರದಲ್ಲೇ ಕರ್ಮಫಲದಾತ ಶನಿದೇವನ (shanideva) ಉದಯವಾಗಲಿದೆ. ಜನವರಿ 22 ರಂದು ಶನಿಗ್ರಹದ ಅಸ್ತವಾಗಿತ್ತು. ಇದೀಗ ಫೆಬ್ರವರಿ 24 ರಂದು ಮತ್ತೆ ಶನಿ ಗ್ರಹದ ಉದಯವಾಗಲಿದೆ. ಶನಿದೇವನ ಉದಯದೊಂದಿಗೆ, ಕೆಲವು ರಾಶಿಚಕ್ರದ ಜನರ ಜೀವನದಲ್ಲಿ ಭಾರೀ ಬದಲಾವಣೆಗಳಾಗಲಿವೆ.  


COMMERCIAL BREAK
SCROLL TO CONTINUE READING

ಮೇಷ ರಾಶಿ (Aries) :
ಮೇಷ ರಾಶಿಯ (Aries)ಜಾತಕದ 10 ನೇ ಮನೆಯಲ್ಲಿ ಶನಿಯು ಉದಯಿಸುತ್ತಾನೆ. ಇದರಿಂದ  ಇವರ ಜಾತಕದಲ್ಲಿ ರಾಜಯೋಗವು ರೂಪುಗೊಳ್ಳಲಿದೆ. ಈ ರಾಶಿಯ ಅಧಿಪತಿ ಮಂಗಳ (Mars) ಅದೃಷ್ಟದ ಮನೆಯಲ್ಲಿ ಕುಳಿತಿದ್ದಾನೆ. ಇದರಿಂದ ರಾಜಸುಖದಂತಹ ಸಂತೋಷವನ್ನು ಈ ರಾಶಿಯವರು ಪಡೆಯುತ್ತಾರೆ. ರಾಜಕೀಯದಲ್ಲಿ ತೊಡಗಿಸಿಕೊಂಡವರು ದೊಡ್ಡ ಹುದ್ದೆ ಅಲಂಕರಿಸಬಹುದು. ಹೊಸ ಉದ್ಯೋಗ ಪ್ರಸ್ತಾಪ ಕೂಡಾ ಬರಬಹುದು. ವೇತನದಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ. 


ಇದನ್ನೂ ಓದಿ : ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಸೋಲೆಂಬುದಿಲ್ಲ, ಮುಟ್ಟಿದ್ದೆಲ್ಲಾ ಚಿನ್ನ


ವೃಷಭ ರಾಶಿ (Taurus):
ಫೆಬ್ರವರಿ 24 ರಂದು ಶನಿದೇವನು ಉದಯಿಸಿದಾಗ (Saturn Rise) , ವೃಷಭ ರಾಶಿಯವರ ಜಾತಕದಲ್ಲಿ ಕೂಡಾ ರಾಜಯೋಗವು (Rajayoga) ರೂಪುಗೊಳ್ಳುತ್ತದೆ. ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಸಮಯವು ಮಂಗಳಕರವಾಗಿರುತ್ತದೆ. ಅಲ್ಲದೆ, ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದೆ. ಅಂದರೆ ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ. ರಾಜಕೀಯದಲ್ಲಿ ದೊಡ್ಡಮಟ್ಟದ ಲಾಭಗಳಾಗಬಹುದು. 


ಕಟಕ (Cancer) :
ಶನಿದೇವನು (Shani deva) ಜಾತಕದ ಏಳನೇ ಮನೆಯಲ್ಲಿ ಉದಯಿಸುತ್ತಾನೆ. ಇದರಿಂದ ಜಾತಕದ ಕೇಂದ್ರದಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ. ಅದರ ಪರಿಣಾಮದೊಂದಿಗೆ, ಪಾಲುದಾರಿಕೆ ವ್ಯವಹಾರದಲ್ಲಿ ಭಾರಿ ಆರ್ಥಿಕ ಪ್ರಯೋಜನಗಲಾಗುತ್ತದೆ. ಕಬ್ಬಿಣ, ಪೆಟ್ರೋಲಿಯಂ, ಗಣಿ ಮುಂತಾದ ಶನಿಗ್ರಹಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡಿದರೆ ವಿಶೇಷ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದರೊಂದಿಗೆ ಸಂಗಾತಿಯ ಬೆಂಬಲವೂ ಈ ಸಮಯದಲ್ಲಿ ದೊರೆಯುತ್ತದೆ. 


ಇದನ್ನೂ ಓದಿ : Dream Interpretation: ಇಂತಹ ಕನಸುಗಳು ಉದ್ಯೋಗ-ವ್ಯವಹಾರದಲ್ಲಿನ ಪ್ರಗತಿಯನ್ನು ಸೂಚಿಸುತ್ತವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.