Beauty Secrets Of Aishwarya Rai : ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಕಿರೀಟವನ್ನು ಗೆದ್ದಿರುವ ಐಶ್ವರ್ಯಾ ಇಂದಿಗೂ ವಿಶ್ವದ ಅತ್ಯಂತ ಸುಂದರ ನಟಿಯರ ಪಟ್ಟಿಯಲ್ಲಿದ್ದಾರೆ.ಐಶ್ವರ್ಯಾಗೆ ಈಗ 50 ವರ್ಷ ವಯಸ್ಸು. ಆದರೂ ಅವರನ್ನು ನೋಡುವಾಗ ಹಾಗನಿಸುವುದೇ ಇಲ್ಲ.ಐಶ್ವರ್ಯ ಚರ್ಮದ ಹೊಳಪು ಇನ್ನೂ ಟೀನೇಜರ್ ನಂತೆಯೇ ಇದೆ.ಐಶ್ವರ್ಯ ತನ್ನ ತ್ವಚೆಯ ಕಾಂತಿ ಕಾಪಾಡಲು ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಬಳಸುತ್ತಾರೆಯಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಐಶ್ವರ್ಯ ಬಹಿರಂಗಪಡಿಸಿದ್ದರು. 


COMMERCIAL BREAK
SCROLL TO CONTINUE READING

ಐಶ್ವರ್ಯಾ ರೈ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೌಂದರ್ಯ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಆದರೆ ಅವರು ಕೂಡಾ ಅದೇ  ಸೌಂದರ್ಯವರ್ಧಕಗಳನ್ನು ಬಳಸುತ್ತಾರೆಯೇ ಎನ್ನುವುದಕ್ಕೆ ಉತ್ತರವಿಲ್ಲ. ತನ್ನ ಸೌಂದರ್ಯದಿಂದ ವಿಶ್ವ ಗೆದ್ದಿರುವ ಐಶ್ ಮಸ್ಸಿನಿಂದ ಪಕ್ಕಾ ದೇಸಿ ಹುಡುಗಿ. 


ಇದನ್ನೂ ಓದಿ : ಸಾಸಿವೆ ಎಣ್ಣೆಯೊಂದಿಗೆ ಇದನ್ನು ಬೆರೆಸಿ ವಾರಕ್ಕೆ 3 ಬಾರಿ ಹಚ್ಚಿ.. ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!


ಐಶ್ವರ್ಯ ನೆಚ್ಚಿನ ಬ್ಯೂಟಿ ಪ್ಯಾಕ್ : 
ಐಶ್ ಅನೇಕ ಸೌಂದರ್ಯ ಬ್ರಾಂಡ್‌ಗಳನ್ನು ಪ್ರತಿನಿಧಿಸುತ್ತಾರೆ.ಈವೆಂಟ್‌ಗಳು ಮತ್ತು ಶೂಟ್‌ಗಳ ಸಮಯದಲ್ಲಿ ಅನೇಕ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಆದರೆ, ಚರ್ಮದ ಆರೈಕೆಯ ವಿಷಯಕ್ಕೆ ಬಂದರೆ, ಐಶ್ವರ್ಯಾ, ಸಾಮಾನ್ಯ ಭಾರತೀಯ ಹುಡುಗಿಯಂತೆ,ತನ್ನ ಅಡುಗೆಮನೆಯಲ್ಲಿ ಇರಿಸಲಾಗಿರುವ ಮನೆಮದ್ದುಗಳನ್ನು ಅನುಸರಿಸುತ್ತಾರೆ. 


ಪ್ಯಾಕ್ ಅನ್ನು ಹೇಗೆ ತಯಾರಿಸಲಾಗುತ್ತದೆ ?: 
ಐಶ್ವರ್ಯಾ ತನ್ನ ತ್ವಚೆಯ ಆರೈಕೆಗಾಗಿ ಕಡಲೆ ಹಿಟ್ಟು, ಹಾಲು ಮತ್ತು ಅರಿಶಿನವನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸುತ್ತಾರೆ. ಐಶ್ವರ್ಯಾ ಪ್ರತಿ ದಿನವೂ ಈ ಪ್ಯಾಕ್ ಅನ್ನು ತನ್ನ ಮುಖಕ್ಕೆ ಹಚ್ಚುತ್ತಾರೆಯಂತೆ. ಚರ್ಮಕ್ಕೆ ತೇವಾಂಶ ಮತ್ತು ಸಂಪೂರ್ಣ ಪೋಷಣೆಯನ್ನು ನೀಡಲು, ದಿನಕ್ಕೆ ಒಮ್ಮೆ ಮುಖಕ್ಕೆ ಮೊಸರಿನಿಂದ ಮಸಾಜ್ ಮಾಡುತ್ತಾರೆಯಂತೆ. 


ಇದನ್ನೂ ಓದಿ : Pre-workout Drinks: ವರ್ಕ್‌ಔಟ್‌ ಮಾಡುವವರು ವ್ಯಾಯಾಮಕ್ಕೂ ಮುಂಚೆ ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ!!


ಸೌತೆಕಾಯಿ ಫೇಸ್ ಮಾಸ್ಕ್  :
ಚರ್ಮದ ಆಯಾಸ ಮತ್ತು ಮಾಲಿನ್ಯದ ಪರಿಣಾಮಗಳನ್ನು ನಿವಾರಿಸಲು, ಐಶ್ವರ್ಯಾ ತನ್ನ ಮುಖದ ಮೇಲೆ ತಾಜಾ ಸೌತೆಕಾಯಿಯ ಫೇಸ್ ಪ್ಯಾಕ್ ಕೂಡಾ ಹಚ್ಚುತ್ತಾರೆಯಂತೆ. 


ನಿಯಮಿತ ಫೇಸ್ ವಾಶ್ : 
ನಿಯಮಿತ ಫೇಸ್ ವಾಶ್,ಕನಿಷ್ಠ ಮೇಕಪ್ ಬಳಕೆ ಮತ್ತು ಕಾಲಕಾಲಕ್ಕೆ ಚರ್ಮವನ್ನು ತೇವಗೊಳಿಸುವುದು ಐಶ್ವರ್ಯಾ ಅವರ ಹೊಳೆಯುವ ಚರ್ಮದ ರಹಸ್ಯವಾಗಿದೆ.ತ್ವಚೆಯ ಆರೈಕೆಗಾಗಿ ನಾನು ಅನುಸರಿಸುವ ಸೌಂದರ್ಯ ಪದ್ಧತಿಯು ಹೆಚ್ಚಾಗಿ ನೈಸರ್ಗಿಕ ವಸ್ತುಗಳನ್ನು ಒಳಗೊಂಡಿರುತ್ತದೆ ಎಂದು ಐಶ್ ಹೇಳುತ್ತಾರೆ.


ಪೌಷ್ಟಿಕ ಆಹಾರ : 
ಐಶ್ವರ್ಯಾ ತನ್ನ ಚರ್ಮವನ್ನು ಆರೋಗ್ಯಕರವಾಗಿಡಲು ಕೇವಲ ಬಾಹ್ಯ ಆರೈಕೆಯ ಮೇಲೆ ಅವಲಂಬಿತವಾಗಿಲ್ಲ.ಇದಕ್ಕಾಗಿ ತಾವು ಪೌಷ್ಟಿಕಾಂಶ ಭರಿತ ಆಹಾರವನ್ನು ಕೂಡಾ ಸೇವಿಸುತ್ತಾರೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.