)
Aloe Vera Gel For Hair: ಅಲೋವೆರಾ ಅದ್ಭುತ ಔಷಧೀಯ ಗುಣಗಳನ್ನ ಹೊಂದಿದೆ. ನಿಮ್ಮ ಕೂದಲಿನ ಆರೋಗ್ಯವನ್ನ ಸುಧಾರಿಸಲು ಬಯಸಿದರೆ, ಕೂದಲಿನ ಆರೈಕೆಯ ದಿನಚರಿಯಲ್ಲಿ ಪೋಷಕಾಂಶಗಳಿಂದ ಕೂಡಿದ ಅಲೋವೆರಾವನ್ನ ಸೇರಿಸಿಕೊಳ್ಳಬಹುದು. ಕೂದಲಿನ ಸರ್ವ ಸಮಸ್ಯೆಗಳಿಗೂ ಅಲೋವೆರಾ ಉತ್ತಮ ಮನೆಮದ್ದಾಗಿದೆ. ಈ ಅಲೋವೆರಾವನ್ನ ಹೇಗೆ ಬಳಸಬಹುದು ಎಂಬುದರ ಬಗ್ಗೆ ತಿಳಿಯಿರಿ...
ಮೊದಲು ನೀವು ಕೆಲವು ತಾಜಾ ಅಲೋವೆರಾ ಎಲೆಗಳನ್ನ ತೆಗೆದುಕೊಳ್ಳಬೇಕು. ಎಚ್ಚರಿಕೆಯಿಂದ ಚಾಕುವಿನಿಂದ ಎಲೆಗಳ ಸಿಪ್ಪೆ ತೆಗೆಯಿರಿ. ನಂತರ ಒಂದು ಚಮಚವನ್ನ ಬಳಸಿ ಅಲೋವೆರಾ ಜೆಲ್ ಅನ್ನ ಒಂದು ಬಟ್ಟಲಿಗೆ ತೆಗೆಯಿರಿ. ಅಂತಿಮವಾಗಿ ಈ ಜೆಲ್ ಅನ್ನ ಮಿಕ್ಸರ್ನಲ್ಲಿ ಹಾಕಿ ನಯವಾದ ಪೇಸ್ಟ್ ಆಗಿಸಿ.
ನಿಮ್ಮ ಕೂದಲನ್ನ ಸ್ವಲ್ಪ ಒದ್ದೆ ಮಾಡಿದ ನಂತರ ಅಲೋವೆರಾ ಜೆಲ್ ಅನ್ನ ಬೇರುಗಳಿಂದ ತುದಿಗಳವರೆಗೆ ಚೆನ್ನಾಗಿ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ನೀವು ಜೆಲ್ ಅನ್ನ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಬಿಡಬೇಕು.
ನಿಮ್ಮ ಕೂದಲನ್ನ ಸೌಮ್ಯವಾದ ಶಾಂಪೂ ಬಳಸಿ ತೊಳೆದ ನಂತರ, ನೀವು ಸ್ವಯಂ ಸಕಾರಾತ್ಮಕ ಫಲಿತಾಂಶಗಳನ್ನ ಗಮನಿಸುವಿರಿ. ನೀವು ವಾರಕ್ಕೆ ಎರಡು ಬಾರಿ ಈ ರೀತಿ ಅಲೋವೆರಾ ಜೆಲ್ ಬಳಸಬಹುದು. ಒಣಗಿದ ಮತ್ತು ನಿರ್ಜೀವ ಕೂದಲನ್ನ ಮೃದುಗೊಳಿಸಲು ಅಲೋವೆರಾ ಜೆಲ್ ಬಳಸಬಹುದು.
ಅಲೋವೆರಾ ಜೆಲ್ ಕೂದಲಿನ ಬೆಳವಣಿಗೆಯನ್ನ ವೇಗಗೊಳಿಸಲು ಸಹಾಯ ಮಾಡುತ್ತದೆ. ಕೂದಲಿನ ಬೆಳವಣಿಗೆ ಹೆಚ್ಚಿಸುವುದರ ಜೊತೆಗೆ ಅಲೋವೆರಾ ಜೆಲ್ ನಿಮ್ಮ ಕೂದಲನ್ನ ಹೊಳೆಯುವಂತೆ ಮಾಡುವಲ್ಲಿಯೂ ಪರಿಣಾಮಕಾರಿ. ಒಟ್ಟಾರೆ ಅಲೋವೆರಾ ಜೆಲ್ ನಿಮ್ಮ ಕೂದಲಿನ ಆರೋಗ್ಯಕ್ಕೆ ವರದಾನವಾಗಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)