)
ಐಸ್ ಕ್ರೀಮ್ ಯಾರಿಗೆ ಇಷ್ಟ ಇರಲ್ಲ. ಹಲವು ಜನರಂತೂ ಯಾವ ಸಮಯವನ್ನು ಲೆಕ್ಕಿಸದೇ ಐಸ್ ಕ್ರೀಮ್ ತಿನ್ನುತ್ತಾರೆ. ಚಳಿಗಾಲ, ಮಳೆಗಾಲ, ರಾತ್ರಿ ಎಂದು ಗಮನಿಸಿದೇ ಐಸ್ ಕ್ರೀಮ್ ಸವಿಯುತ್ತಾರೆ. ಈಗ ಚಳಿಗಾಲವಾದರೂ ಜನರು ಐಸ್ ಕ್ರೀಮ್ ಮೊರೆ ಹೋಗುತ್ತಾರೆ. ಹಾಗಾದ್ರೆ ಚಳಿಗಾಲದಲ್ಲಿ ಐಸ್ ಕ್ರೀಮ್ ತಿಂದರೆ ಆರೋಗ್ಯ ಹಾಳಾಗುತ್ತಾ ಇಲ್ವಾ ಒಂದು ಕಟ್ಟು ಕಥೆನಾ ಎಂಬುದಕ್ಕೆ ಉತ್ತರ ಇಲ್ಲಿದೆ.
ಐಸ್ ಕ್ರೀಮ್ ತಿನ್ನುವುದರಿಂದ ಶೀತ ಬರುವುದಿಲ್ಲ. ಜ್ವರ, ಶೀತಗಳಂತ ಕಾಯಿಲೆಗಳು ಪ್ಲೂ, ಬ್ಯಾಕ್ಟೀರಿಯಾ, ವೈರಸ್ಗಳಿಂದ ಬರುತ್ತವೆ್ ತಣ್ಣನೆಯ ತಾಪಾಮಾನದಿಂದ ಬರುವುದಿಲ್ಲ. ತಣ್ಣನೆಯ ಆಹಾರ ಹೊಟ್ಟೆಯಲ್ಲಿ ಹೋದ ತಕ್ಷಣ ದೇಹದ ಆಂತರಿಕ ವ್ಯವಸ್ಥೆಯು ತನ್ನನ್ನು ತಾನು ಬೆಚ್ಚಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುವುದಿಲ್ಲ. ಐಸ್ ಕ್ರೀಮ್ ಒತ್ತಡವನ್ನ ಕಡಿಮೆ ಮಾಡಿ, ಉಲ್ಲಾಸವನ್ನ ನೀಡುತ್ತದೆ. ಹೀಗಾಗಿಯೇ ಇದನ್ನು ಕೆಲವರು ಇಷ್ಟ ಪಡುತ್ತಾರೆ.
ಅನಾರೋಗ್ಯದಿಂದ ಬಳಲುತ್ತಿರುವವರು ಐಸ್ ಕ್ರೀಮ್ ತಿನ್ನಲು ವೈದ್ಯರ ಸಲಹೆ ಮೊದಲೇ ಪಡೆದಿರಬೇಕು. ಗಂಟಲು ನೋವು ಹಾಗೂ ಸೋಂಕು ಇರುವವರು ಐಸ್ ಕ್ರೀಮ್ ತಿಂದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶ್ವಾಸಕೋಶ ತೊಂದರೆ ಅನುಭವಿಸುವರು, ನಿರಂತರ ಕೆಮ್ಮುವವರು ತಣ್ಣನೆಯ ಹಾಗೂ ಸಕ್ಕರೆ ಮಿಕ್ಸ್ ಇರುವ ಆಹಾರದಿಂದ ದೂರ ಇದ್ರೆ ಆರೋಗ್ಯಕ್ಕೆ ಉತ್ತಮ.
ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಅತಿ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ಗಂಟಲು ಒಳಗೆ ಮತ್ತಷ್ಟು ಒಣಗಿ ವೈರಲ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇನ್ನು ಐಸ್ ಕ್ರೀಮ್ ತಿನ್ನಬೇಕಾದರೆ ಪ್ರತಿಯೊಬ್ಬರು ಈ ಕೆಳಗಿನ ಸೂಚನೆಗಳನ್ನು ಪಾಲನೆ ಮಾಡಬಹುದು.
ಐಸ್ ಕ್ರೀಮ್ ತಿಂದ ಮೇಲೆ ಉಗುರು ಬೆಚ್ಚಗಿನ ನೀರು ಅಥವಾ ಹಾಲು ಕುಡಿಯುವುದು ಒಳ್ಳೆಯದು
ನಿಮಗೆ ಜ್ವರ ಅಥವಾ ಶೀತದ ಸಂಕೇತವಾಗುತ್ತಿದ್ರೆ ಐಸ್ ಕ್ರೀಮ್ನಿಂದ ದೂರ ಇರುವುದು ಉತ್ತಮ
ಗಬ ಗಬ ಎಂದು ತಿನ್ನುವ ಮೊದಲು ನಿಧಾನವಾಗಿ ತಿಂದರೆ ಗಂಟಲಿಗೆ ಒಳ್ಳೆಯದು