ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದಾ.. ಇಲ್ಲವೇ ಕೆಟ್ಟದ್ದಾ..? ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ..!
Omen of the lizard : ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
Lizard lucky : ಪ್ರತಿ ಮನೆಯಲ್ಲೂ ಹಲ್ಲಿಗಳು ಕಂಡು ಬರುತ್ತವೆ. ಈ ಜೀವಿಯು ಮನೆಯ ಗೋಡೆಗಳ ಮೇಲೆ ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ. ಆದರೆ ತುಂಬಾ ಜನರಿಗೆ ಹಲ್ಲಿ ಅಂದ್ರೆ ಭಯಪಡುತ್ತಾರೆ. ಹಲ್ಲಿ ಮನೆಗೆ ಒಳಗೆ ಬಂದ ತಕ್ಷಣ ಅದನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡುತ್ತಾರೆ. ಇದರ ನಡುವೆ ಜ್ಯೋತಿಷ್ಯದಲ್ಲಿ ಹಲ್ಲಿಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಕೆಲವರು ಹಲ್ಲಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅದನ್ನು ಅಶುಭವೆಂದು ಹೇಳುತ್ತಾರೆ. ಈ ಕುರಿತು ತಿಳಿಯೋಣ ಬನ್ನಿ.
ಹಲ್ಲಿ ಅಂದ್ರೆ ಸಾಕು ಬಹಳಷ್ಟು ಜನರು ಹೆದರುತ್ತಾರೆ, ಇಲ್ಲ ಅಸಹ್ಯ ಪಟ್ಟುಕೊಳ್ಳುತ್ತಾರೆ. ಆದ್ರೆ ಗ್ರಂಥಗಳಲ್ಲಿ ಹಲ್ಲಿಯನ್ನು ಶ್ರೀಮಂತಿಕೆಯ ದೃಷ್ಟಿಯಿಂದ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಲ್ಲಿ ಸಂಪತ್ತು ಮತ್ತು ತಾಯಿ ಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದೆ. ಇದೇ ಕಾರಣಕ್ಕೆ ಹೊಸ ಮನೆಗೆ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಗಳನ್ನೂ ಬಳಸುತ್ತಾರೆ. ಮನೆಯಲ್ಲಿ ಹಲ್ಲಿ ಇದ್ದರೆ ಸುಖ, ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: Benefits Banana Leaf Meal: ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೇಲ್ಲಾ ಪ್ರಯೋಜನಗಳು ಇವೆ ಗೊತ್ತಾ...?
ಶಕುನ ಮತ್ತು ವಾಸ್ತುಶಾಸ್ತ್ರದ ಪ್ರಕಾರ, ಪೂಜೆಯ ಮನೆಯ ಸುತ್ತಲೂ ಹಲ್ಲಿ ಕಂಡುಬಂದರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹಣವನ್ನು ಪಡೆಯುವುದನ್ನು ಸೂಚಿಸುತ್ತದೆ. ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ, ಲಕ್ಷ್ಮಿ ದೇವಿಯು ವರ್ಷವಿಡೀ ನಿಮ್ಮ ಮೇಲೆ ಅಪಾರ ಆಶೀರ್ವಾದವನ್ನು ನೀಡುತ್ತಾಳೆ ಎಂದು ನಂಬಿರಿ. ಇದು ಸಂತೋಷ ಮತ್ತು ಸಂಪತ್ತಿನ ಸಂಕೇತವಾಗಿದೆ.
ಮನೆಯಲ್ಲಿ 3 ಹಲ್ಲಿಗಳನ್ನು ಒಟ್ಟಿಗೆ ನೋಡುವುದು ಕೂಡ ತುಂಬಾ ಶುಭ. ಇದು ಒಳ್ಳೆಯ ಸುದ್ದಿಯ ಸಂಕೇತವಾಗಿದೆ. ನೀವು ಹೊಸ ಮನೆಗೆ ಪ್ರವೇಶಿಸುತ್ತಿದ್ದರೆ ಮತ್ತು ಅದೇ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ, ಅದು ತುಂಬಾ ಮಂಗಳಕರವಾಗಿದೆ. ಇದರರ್ಥ ನೀವು ಪೂರ್ವಜರಿಂದ ಆಶೀರ್ವದಿಸಲ್ಪಟ್ಟಿದ್ದೀರಿ ಮತ್ತು ಲಕ್ಷ್ಮಿದೇವಿ ನಿಮ್ಮನ್ನು ಆಶೀರ್ವದಿಸಿದ್ದಾಳೆ ಅಂತ ಅರ್ಥ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.