Astrology: ತುಂಬಾ ಭಾವನಾತ್ಮಕವಾಗಿರುತ್ತಾರೆ ಈ 3 ರಾಶಿಯ ಜನ , ಅವರ ಹೃದಯವು ಪರಿಶುದ್ಧ

Astrology: ದುಃಖದಲ್ಲಿರುವ ಅಥವಾ ಕಣ್ಣೀರು ಸುರಿಸುವ ಜನರನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ ಆದರೆ 3 ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಭಾವುಕರಾದ ನಂತರವೂ ಪ್ರತಿ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತಾರೆ.

Written by - Yashaswini V | Last Updated : Nov 9, 2021, 10:51 AM IST
  • ಈ ರಾಶಿಚಕ್ರದ ಜನರು ಅತ್ಯಂತ ಭಾವನಾತ್ಮಕರು
  • ಇವರಿಗೆ ಸಣ್ಣ ಸಣ್ಣ ವಿಷಯಗಳಿಗೆ ನೋವಾಗುತ್ತದೆ
  • ಆದರೆ ಅವರು ತಮ್ಮ ನೋವನ್ನು ಯಾರಿಗೂ ಹೇಳಬೇಡಿ
Astrology: ತುಂಬಾ ಭಾವನಾತ್ಮಕವಾಗಿರುತ್ತಾರೆ ಈ 3 ರಾಶಿಯ ಜನ , ಅವರ ಹೃದಯವು ಪರಿಶುದ್ಧ title=
Leo, Aaquarius, Pisces zodiac signs people are very emotional

Astrology: ಸಾಮಾನ್ಯವಾಗಿ ಕೆಲವರು ಸಣ್ಣ ಸಣ್ಣ ವಿಷಯಗಳಿಗೂ ಅಳುತ್ತಾರೆ. ಅವರು ತುಂಬಾ ಭಾವನಾತ್ಮಕ ಸ್ವಭಾವದವರು ಮತ್ತು ಅವರ ವರ್ತನೆಯನ್ನು ನೋಡಿದರೆ, ಅವರು ಕಷ್ಟಗಳನ್ನು ಎದುರಿಸಲು ಆಗುವುದೇ ಇಲ್ಲ ಎಂದು ತೋರುತ್ತದೆ. ಬದಲಿಗೆ ಜನರ ಸಹಾನುಭೂತಿ ಪಡೆಯಲು ಹೆಚ್ಚು ಪ್ರಯತ್ನಿಸುತ್ತಾರೆ ಎಂದು ಭಾಸವಾಗುತ್ತದೆ. ಆದರೆ, ವಾಸ್ತವವಾಗಿ ಇದು ತಪ್ಪು ಕಲ್ಪನೆ.

ಈ ರಾಶಿಚಕ್ರದ ಜನರು ತುಂಬಾ ಭಾವನಾತ್ಮಕವಾಗಿರುತ್ತಾರೆ​:
ಜ್ಯೋತಿಷ್ಯದಲ್ಲಿ (Astrology), ಅಂತಹ 3 ರಾಶಿಚಕ್ರ ಚಿಹ್ನೆಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯ ಜನರು ತುಂಬಾ ಭಾವಾನಾತ್ಮಕರಾಗಿರುತ್ತಾರೆ. ಅವರ ಕಣ್ಣಿನಿಂದ ನೀರು ಸುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ವಾಸ್ತವದಲ್ಲಿ ಅಂತಹ ಜನರು ತುಂಬಾ ಶುದ್ಧ ಹೃದಯ ಮತ್ತು ಧೈರ್ಯಶಾಲಿಗಳು. ಯಾವ ರಾಶಿಚಕ್ರದ ಜನರು ಭಾವನಾತ್ಮಕವಾಗಿರುತ್ತಾರೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ- Sun Transit November 2021: ಸೂರ್ಯ ರಾಶಿ ಪರಿವರ್ತನೆ; ಈ 5 ರಾಶಿಗಳ ಮೇಲೆ ಹೆಚ್ಚು ಪರಿಣಾಮ

ಸಿಂಹ ರಾಶಿ: ಸಾಮಾನ್ಯವಾಗಿ, ಸಿಂಹ ರಾಶಿಯ (Zodiac Signs) ಜನರ ಚಿತ್ರವು ಪ್ರಾಬಲ್ಯ, ಬಲಶಾಲಿ ಮತ್ತು ಕೆಲವೊಮ್ಮೆ ಸೊಕ್ಕಿನ ವ್ಯಕ್ತಿಯಾಗಿರುತ್ತದೆ, ಆದರೆ ಅವರಿಗೆ ತುಂಬಾ ಹತ್ತಿರವಿರುವ ಜನರು ಮಾತ್ರ ಅವರೊಳಗೆ ಅಡಗಿರುವ ಶುದ್ಧ ಹೃದಯವನ್ನು ಗುರುತಿಸಬಹುದು. ಈ ಜನರು ತುಂಬಾ ಭಾವನಾತ್ಮಕ ಮತ್ತು ಶುದ್ಧ ಹೃದಯದವರು. ಅವರ ಸರಿಯಾದ ವಿಷಯಕ್ಕೆ ಸರಿಯಾದ ಗಮನ ನೀಡದಿದ್ದರೆ, ಅವರು ತುಂಬಾ ನೊಂದುಕೊಳ್ಳುತ್ತಾರೆ. ಅವರು ತಮ್ಮ ಪ್ರೇಮಿ ಅಥವಾ ಜೀವನ ಸಂಗಾತಿಯ ಬಗ್ಗೆ ತುಂಬಾ ಭಾವನಾತ್ಮಕವಾಗಿರುತ್ತಾರೆ. ಅದೇ ಸಮಯದಲ್ಲಿ, ಅವರ ದಯೆ ಅವರನ್ನು ಇತರರಿಂದ ಪ್ರತ್ಯೇಕಿಸುತ್ತದೆ. 

ಕುಂಭ ರಾಶಿ : ಕುಂಭ ರಾಶಿಯವರು ಕೂಡ ತುಂಬಾ ಮೃದು ಹೃದಯಿಗಳು ಮತ್ತು ಭಾವುಕರಾಗಿರುತ್ತಾರೆ (Emotional). ಈ ಜನರ ನಂಬಿಕೆಯನ್ನು ಗೆಲ್ಲುವುದು ತುಂಬಾ ಸುಲಭ. ಏಕೆಂದರೆ ಅವರು ಜನರನ್ನು ಸುಲಭವಾಗಿ ನಂಬುತ್ತಾರೆ. ಅದೇ ಸಮಯದಲ್ಲಿ, ಯಾರಾದರೂ ಅವರನ್ನು ನೋಯಿಸಿದಾಗ, ಅವರ ಕಣ್ಣೀರು ಸುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಅವರು ತಮ್ಮ ದುಃಖವನ್ನು ಎಲ್ಲರ ಮುಂದೆ ಹೇಳಿಕೊಳ್ಳುವುದಿಲ್ಲ ಮತ್ತು ಏಕಾಂತದಲ್ಲಿ ಅಳಲು ಇಷ್ಟಪಡುತ್ತಾರೆ. 

ಇದನ್ನೂ ಓದಿ- Garuda Purana: ಕುಟುಂಬದ ಸದಸ್ಯರ ಮರಣದ ನಂತರ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಆತ್ಮವು ನರಳಬೇಕಾದೀತು

ಮೀನ ರಾಶಿ: ಮೀನ ರಾಶಿಯವರು ತಮ್ಮನ್ನು ತಾವು ಎಷ್ಟೇ ಕಠಿಣ ಮತ್ತು ಬಲಶಾಲಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿದರೂ, ಅವರು ಒಳಗಿನಿಂದ ತುಂಬಾ ಮೃದು ಹೃದಯದವರು. ಸಣ್ಣ ವಿಷಯಗಳು ಕೂಡ ಅವರಿಗೆ ದುಃಖವನ್ನುಂಟುಮಾಡುತ್ತವೆ, ಆದರೆ ಅವರು ನಗುವಿನೊಂದಿಗೆ ದೊಡ್ಡ ದುಃಖಗಳನ್ನು ಸಹಿಸಿಕೊಳ್ಳುತ್ತಾರೆ. ಈ ಜನರು ತಮ್ಮ ಭಾವನೆಗಳನ್ನು ಮರೆಮಾಡುವಲ್ಲಿ ಉತ್ತಮರು. ಕೆಲವೇ ಜನರು ಮಾತ್ರ ಇವರ ಹೃದಯಕ್ಕೆ ಹತ್ತಿರವಾಗಲು ಸಾಧ್ಯವಾಗುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News