)
white hair remedy : ಮೊಟ್ಟೆಗಳಲ್ಲಿ ಹೇರಳವಾದ ಪ್ರೋಟೀನ್ ಇದ್ದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಕೂದಲನ್ನು ಪೋಷಿಸುತ್ತದೆ. ಪ್ರೋಟೀನ್ ಭರಿತ ಮೊಟ್ಟೆಗಳನ್ನು ಬಳಸುವುದರಿಂದ ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಬಿಳಿ ಕೂದಲನ್ನು ತಡೆಯುತ್ತದೆ.
ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ರಾಸಾಯನಿಕಗಳ ಹೆಚ್ಚುವರಿ ಪ್ರಮಾಣದಿಂದಾಗಿ ಕೂದಲು ಹಾನಿಗೊಳಗಾಗುತ್ತದೆ. ಉದುರಲು ಪ್ರಾರಂಭಿಸುತ್ತದೆ. ವೇಗವಾಗಿ ಉದುರುವ ಕೂದಲಿನಿಂದಾಗಿ ಪ್ರತಿಯೊಬ್ಬ ವ್ಯಕ್ತಿಯು ಬೋಳು ತಲೆ ಭಯದಲ್ಲಿರುತ್ತಾರೆ. ಕೆಲವು ಮನೆಮದ್ದುಗಳ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸುವ ಜೊತೆ ಉದುರುವಿಕೆಯನ್ನು ಸಹ ತಡೆಯಬಹುದಾಗಿದೆ.
ಮೊಟ್ಟೆ ಮತ್ತು ಮೊಸರಿನಿಂದ ತಯಾರಿಸಿದ ನೈಸರ್ಗಿಕ ಹೇರ್ ಮಾಸ್ಕ್ ಬಿಳಿ ಕೂದಲನ್ನು ಬುಡದಿಂದಲೇ ನೈಸರ್ಗಿಕವಾಗಿ ಕಪ್ಪಾಗಿಸುವುದು. ಹೇರ್ ಮಾಸ್ಕ್ ಮಾಡಲು ಬಟ್ಟಲಿನಲ್ಲಿ ಎರಡು ಮೊಟ್ಟೆಗಳನ್ನು ಒಡೆಯಿರಿ. ಮೊಟ್ಟೆಗೆ ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಮೊಸರು ಸೇರಿಸಿ.
ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಗೋರಂಟಿ ಪುಡಿ ಹಾಕಿ ಕಲಿಸಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಕನಿಷ್ಟ 20 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಈ ನೈಸರ್ಗಿಕ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಉದ್ದ ದಪ್ಪವಾಗಿಸುವುದರ ಜೊತೆ ಬಿಳಿ ಕೂದಲನ್ನು ತಡೆಯುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. Z Kannada News ಇದನ್ನು ಖಚಿತಪಡಿಸುವುದಿಲ್ಲ.