ಬೆಂಗಳೂರು : ನಮ್ಮ ದೇಹದಲ್ಲಿ ಎರಡು ರೀತಿಯ ರಕ್ತಕಣಗಳಿರುತ್ತವೆ.  ಬಿಳಿ ಮತ್ತು ಕೆಂಪು ರಕ್ತ ಕಣ.  ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದಾಗ, ದೇಹದಲ್ಲಿ ರಕ್ತದ ಕೊರತೆ ಉಂಟಾಗುತ್ತದೆ. ಇದನ್ನು ರಕ್ತಹೀನತೆ ಎಂದೂ ಕರೆಯುತ್ತಾರೆ. ದೇಹದಲ್ಲಿ ರಕ್ತದ ಕೊರತೆಯು ಅನೇಕ ರೋಗಗಳು ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಈ ಮೂರು ವಸ್ತುಗಳನ್ನು ನಿತ್ಯ ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆಯು ಕೇವಲ 15 ದಿನಗಳಲ್ಲಿ ದೂರವಾಗುತ್ತದೆ. 


COMMERCIAL BREAK
SCROLL TO CONTINUE READING

1. ದಾಳಿಂಬೆ :
ದಾಳಿಂಬೆಯನ್ನು ತಿನ್ನುವುದರಿಂದ ದೇಹದಲ್ಲಿ ರಕ್ತವು ಹೆಚ್ಚಾಗುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣವು ಕಡಿಮೆಯಾಗುತ್ತಿದ್ದರೆ, ನಿತ್ಯ ದಾಳಿಂಬೆ ರಸವನ್ನು ಕುಡಿಯಲು ಪ್ರಾರಂಭಿಸಬೇಕು. ದಾಲಿಮ್ಬೇಯಲ್ಲಿರುವ ಕೆಲವು ಅಂಶಗಳಿಂದ ದೇಹದಲ್ಲಿ ರಕ್ತವು ಹೆಚ್ಚಾಗಲು ಸಹಾಯವಾಗುತ್ತದೆ. 


ಇದನ್ನೂ ಓದಿ : Covid 4th Wave in India: ಭಾರತಕ್ಕೂ ಕಾಲಿಟ್ಟಿತೇ ಕರೋನಾ ನಾಲ್ಕನೇ ಅಲೆ ; ICMR ತಜ್ಞರು ಹೇಳಿದ್ದೇನು ?


2. ಬೀಟ್  ರೂಟ್ :
ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ರಕ್ತದ ಕೊರತೆ ದೂರವಾಗುತ್ತದೆ. ಇದಲ್ಲದೇ ಶೇಂಗಾವನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣಾಂಶವೂ ಹೆಚ್ಚುತ್ತದೆ.  ಇದನ್ನು ನಿರಂತರವಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ. ಅಲ್ಲದೆ, ಬೀಟ್ ರೂಟ್ ನ ಹಲ್ವಾ ಮಾಡಿ ತಿಂದರೂ ರಕ್ತವೃದ್ಧಿಗೆ  ರಾಮಬಾಣವಾಗಿರಲಿದೆ. ಹೀಗೆ  ಮಾಡಿದರ, ದೇಹದಲ್ಲಿ ರಕ್ತವು 3 ಪಟ್ಟು ವೇಗವಾಗಿ ಹೆಚ್ಚಾಗುತ್ತದೆ.


3. ಅಂಜೂರ :  
ಅಂಜೂರವು ಒಂದು ಹಣ್ಣು. ಈ ಹಣ್ಣನ್ನು ಸೇವಿಸುವುದರಿಂದ ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸುವುದರ ಜೊತೆಗೆ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಎದ್ದ ನಂತರ ತಿಂದರೆ ದೇಹದಲ್ಲಿ ರಕ್ತವು ಬಹುಬೇಗ ಹೆಚ್ಚುತ್ತದೆ.


ಇದನ್ನೂ ಓದಿ :  Facial Hair: ಮನೆಯಲ್ಲೇ ಫೇಸಿಯಲ್‌ ಹೇರ್‌ ರಿಮೂವ್‌ ಮಾಡುವ ಸುಲಭ ವಿಧಾನ ಇಲ್ಲಿದೆ


 (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.