ಚಾಣಕ್ಯರ ಪ್ರಕಾರ ಅದೃಷ್ಟವಂತ ವ್ಯಕ್ತಿಗಳು ʼಈʼ ಮೂರು ಗುಣಗಳನ್ನು ಹೊಂದಿರುತ್ತಾರೆ!!

Chanakya Niti: ಚಾಣಕ್ಯ ನೀತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಸುಧಾರಿಸುವ ಕೆಲವು ವಿಷಯಗಳ ಬಗ್ಗೆ ಹೇಳುತ್ತದೆ. ಇಂದು ನಾವು ಇದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ.

Written by - Puttaraj K Alur | Last Updated : Apr 4, 2025, 06:39 PM IST
  • ಸಾಕಷ್ಟು ಆಹಾರವಿರುವ ಮತ್ತು ಆ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿರುವ ವ್ಯಕ್ತಿ ಅದೃಷ್ಟಶಾಲಿ
  • ಉತ್ತಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುವುದು ಅದೃಷ್ಟಕ್ಕಿಂತ ಕಡಿಮೆಯಲ್ಲ
  • ಸಾಕಷ್ಟು ಸಂಪತ್ತು ಇದ್ದಾಗ ಆ ಹಣವನ್ನ ಅಗತ್ಯವಿರುವವರಿಗೆ ಸಹಾಯ ಮಾಡಲು ಬಳಸಿದರೆ ಅದೃಷ್ಟಶಾಲಿ
ಚಾಣಕ್ಯರ ಪ್ರಕಾರ ಅದೃಷ್ಟವಂತ ವ್ಯಕ್ತಿಗಳು ʼಈʼ ಮೂರು ಗುಣಗಳನ್ನು ಹೊಂದಿರುತ್ತಾರೆ!!

Chanakya Niti: ನೀತಿ ಶಾಸ್ತ್ರದಲ್ಲಿ ಆಚಾರ್ಯ ಚಾಣಕ್ಯರಯ ಜೀವನದ ಪ್ರತಿಯೊಂದು ವಿಷಯಗಳ ಬಗ್ಗೆಯೂ ತಿಳಿಸಿದ್ದಾರೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯರು ರಾಜಕೀಯ ಮತ್ತು ಆರ್ಥಿಕ ಅಂಶಗಳ ಬಗ್ಗೆ ಮಾತ್ರವಲ್ಲದೆ ಮಾನವೀಯ ಮೌಲ್ಯಗಳ ಬಗ್ಗೆಯೂ ಬೋಧನೆಗಳನ್ನು ನೀಡಿದ್ದಾರೆ. ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಆಚಾರ್ಯ ಚಾಣಕ್ಯರು ಮಾನವನಲ್ಲಿರುವ ಕೆಲವು ಗುಣಗಳು ಅದೃಷ್ಟದ ಸಂಕೇತವೆಂದು ಪರಿಗಣಿಸಿದ್ದಾರೆ. ಇಂದು ನಾವು ಈ ಲೇಖನದಲ್ಲಿ ಈ ವಿಷಯಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

Add Zee News as a Preferred Source

ಅದೃಷ್ಟವಂತರು ಈ ಗುಣಗಳನ್ನು ಹೊಂದಿರುತ್ತಾರೆ 

ಚಾಣಕ್ಯ ನೀತಿಯ ಎರಡನೇ ಅಧ್ಯಾಯದಲ್ಲಿ, ಆಚಾರ್ಯ ಚಾಣಕ್ಯರು ಅದೃಷ್ಟವಂತರು ಹೊಂದಿರುವ ಮೂರು ಗುಣಗಳ ಬಗ್ಗೆ ಹೇಳಿದ್ದಾರೆ. ಈ ಗುಣಗಳನ್ನು ಹೊಂದಿರುವವರ ಜೀವನದಲ್ಲಿ ಸಂತೋಷಕ್ಕೆ ಕೊರತೆ ಇರಲ್ಲ. ಆ ವ್ಯಕ್ತಿಗಳು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತಾರೆ.  

ಇದನ್ನೂ ಓದಿ: ಚಾಣಕ್ಯ ನೀತಿಯ ಪ್ರಕಾರ ಹೆಂಡತಿಯ ಸೌಂದರ್ಯವೇ ಗಂಡನಿಗೆ ಆಪತ್ತು! ಹೇಗೆ ಗೊತ್ತೇ?

ಭೋಜ್ಯಂ ಭೋಜನಶಕ್ತಿಶ್ಚ ರಾತಿಶಕ್ತಿರ್ ವರಂಗನಾ । 
ವಿಭಾವೋ ದಾನಶಕ್ತಿಶ್ಚ ನಾಲ್ಪಸ್ಯ ತಪಸಃ ಫಲಮ್ ।

* ಆಚಾರ್ಯ ಚಾಣಕ್ಯರು ಹೇಳುವಂತೆ, ಯಾವಾಗಲೂ ಸಾಕಷ್ಟು ಆಹಾರವಿರುವ ಮತ್ತು ಆ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂದರೆ ಆಚಾರ್ಯ ಚಾಣಕ್ಯರ ಪ್ರಕಾರ, ಆಹಾರದ ಜೊತೆಗೆ ಉತ್ತಮ ಜೀರ್ಣಶಕ್ತಿಯನ್ನು ಹೊಂದಿರುವುದು ಸಹ ಅದೃಷ್ಟದ ಸಂಕೇತವಾಗಿದೆ. 

* ಅದೇ ರೀತಿ ಉತ್ತಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುವುದು ಅದೃಷ್ಟಕ್ಕಿಂತ ಕಡಿಮೆಯಲ್ಲ. ಚಾಣಕ್ಯನ ಪ್ರಕಾರ, ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ ನಿಮ್ಮ ಜೀವನವು ಸಂತೋಷದಾಯಕವಾಗಿರುತ್ತದೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯನು ಹಲವು ಬಾರಿ ಪುರುಷನಿಗೆ ಸದ್ಗುಣಶೀಲ ಪತ್ನಿ ಸಿಕ್ಕಾಗ ಆತನ ಅದೃಷ್ಟ ಜಾಗೃತಗೊಳ್ಳುತ್ತದೆ ಎಂದು ಉಲ್ಲೇಖಿಸಿದ್ದಾರೆ. 

* ನಿಮ್ಮಲ್ಲಿ ಸಾಕಷ್ಟು ಸಂಪತ್ತು ಇದ್ದು, ಆ ಹಣವನ್ನು ಅಗತ್ಯವಿರುವವರಿಗೆ ಸಹಾಯ ಮಾಡಲು ಬಳಸಿದರೆ ಅಥವಾ ಅದನ್ನು ದಾನ ಮಾಡುವ ಇಚ್ಛೆಯನ್ನು ಹೊಂದಿದ್ದರೆ, ಚಾಣಕ್ಯರು ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸುತ್ತಾರೆ. ಯಾವುದೇ ಒಬ್ಬ ವ್ಯಕ್ತಿಯು ಸಾಕಷ್ಟು ಸಂಪತ್ತನ್ನು ಹೊಂದಿದ ನಂತರ ಅದನ್ನು ದಾನ ಮಾಡುವುದು ಅವಶ್ಯಕ ಎಂದು ಚಾಣಕ್ಯರು ನಂಬುತ್ತಾರೆ. ಹೀಗೆ ಮಾಡುವುದರಿಂದ ಸಮಾಜದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ.

ಇದನ್ನೂ ಓದಿಮುಂದಿನ ಒಂದು ವರ್ಷ ಈ ರಾಶಿಯವರಿಗೆ ಗಟ್ಟಿಯಾಗಿರಲಿದೆ ಗುರು ಬಲ ! ಗುರು ದೆಸೆಯ ಕಾರಣದಿಂದಲೇ ಮನೆ, ವಾಹನ ಖರೀದಿ ಯೋಗ ಕೂಡಿ ಬರುವುದು ! ಸಾಲದಿಂದ ಮುಕ್ತರಾಗುವ ಕಾಲ !

ಆಚಾರ್ಯ ಚಾಣಕ್ಯರ ಪ್ರಕಾರ, ಈ ಗುಣಗಳನ್ನು ಹೊಂದಿರುವುದು ಕೇವಲ ತಪಸ್ಸು ಮಾತ್ರವಲ್ಲ, ಹಿಂದಿನ ಜನ್ಮಗಳ ಕರ್ಮಗಳ ಫಲಿತಾಂಶವೂ ಆಗಿದೆ. ಈ ಗುಣಗಳನ್ನು ಹೊಂದಿರುವ ಜನರನ್ನು ಅದೃಷ್ಟವಂತರು ಎಂದು ಕರೆಯುವುದು ತಪ್ಪಲ್ಲ. ಇಂದಿನ ಕಾಲದಲ್ಲೂ ಸಹ ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಸಂಪತ್ತು, ಉತ್ತಮ ಜೀವನ ಸಂಗಾತಿ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಇದನ್ನೆಲ್ಲಾ ಹೊಂದಿದ್ದರೆ ಅವರನ್ನು ಅದೃಷ್ಟಶಾಲಿ ಎಂದು ಕರೆಯುವುದು ತಪ್ಪಲ್ಲ. 

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News