Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮವೇ ಸಾಕು ಜೀವನದಲ್ಲಿ ಯಶಸ್ವಿಯಾಗೋಕೆ!

Chanakya Niti success: ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ.. ಚಾಣಕ್ಯ ಹೇಳಿದ ಈ ಮೂರು ಸೂತ್ರಗಳನ್ನು ಅನುಸರಿಸಬೇಕು.  

Written by - Savita M B | Last Updated : Feb 13, 2025, 04:06 PM IST
  • ಸಾಕಷ್ಟು ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಗುರಿ ಹೊಂದಿದ್ದಾರೆ
  • ಇತರರು ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಯಶಸ್ಸನ್ನು ಸಾಧಿಸುವುದಿಲ್ಲ.
Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮವೇ ಸಾಕು ಜೀವನದಲ್ಲಿ ಯಶಸ್ವಿಯಾಗೋಕೆ!  title=

Chanakya Niti success: ಸಾಕಷ್ಟು ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಗುರಿ ಹೊಂದಿದ್ದು, ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅದರಲ್ಲಿ ಕೆಲವರು ತ್ವರಿತವಾಗಿ ಯಶಸ್ವಿಯಾಗುತ್ತಾರೆ, ಆದರೆ ಇತರರು ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಯಶಸ್ಸನ್ನು ಸಾಧಿಸುವುದಿಲ್ಲ. 

ಒಬ್ಬ ವ್ಯಕ್ತಿಗೆ ಪದೇ ಪದೇ ಯಶಸ್ಸಿನ ಬದಲು ಸೋಲು ಎದುರಾದರೇ ಆತ ಮಾನಸಿಕವಾಗಿ ಕುಂಠಿತಗೊಳ್ಳುತ್ತಾನೆ.. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಜನರು ತಮ್ಮ ಅದೃಷ್ಟವನ್ನು ಶಪಿಸಲು ಪ್ರಾರಂಭಿಸುತ್ತಾರೆ.. ಈ ರೀತಿ ಹತಾಶರಾಗುವ ಬದಲು ಇಲ್ಲದಿದ್ದರೆ ಚಾಣಕ್ಯ ನೀಡಿದ ಕೆಲವು ನಿಯಮಗಳನ್ನು ಪಾಲಿಸಿ.. 

ಚಾಣಕ್ಯ ಮಹಾನ್ ವಿದ್ವಾಂಸನಾಗಿದ್ದ. ಅವರ ತತ್ವಾದರ್ಶಗಳನ್ನು ಅನುಸರಿಸಿ ಅನೇಕರು ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ನೀವೂ ಸಹ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಚಾಣಕ್ಯ ಹೇಳಿದ ಈ 3 ವಿಷಯಗಳನ್ನು ಖಂಡಿತವಾಗಿ ಗಮನಿಸಿ.. 

ನಿಮ್ಮನ್ನು ನೀವು ನಿಯತ್ರಿಸುವುದನ್ನು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಕಲಿಯುವ ವ್ಯಕ್ತಿಯು ಜೀವನದಲ್ಲಿ ಬಹಳ ಬೇಗ ಯಶಸ್ವಿಯಾಗುತ್ತಾನೆ. ಅದರಲ್ಲೂ ಭಾವನೆಗಳನ್ನು ನಿಯಂತ್ರಿಸಲು ಕಲಿತ ವ್ಯಕ್ತಿಗೆ ಯಶಸ್ಸು ಒಲಿಯುತ್ತದೆ.. ಸ್ವಯಂ-ನಿಯಂತ್ರಿತ ವ್ಯಕ್ತಿಯು ಏನನ್ನಾದರೂ ಸಾಧಿಸಬಹುದು ಮತ್ತು ಆರ್ಥಿಕವಾಗಿಯೂ ಬೆಳೆಯಬಹುದು.. 

ಅದೃಷ್ಟವನ್ನು ಅವಲಂಬಿಸಬೇಡಿ : ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನು ಅವಲಂಬಿಸಬಾರದು ಆದರೆ ಕೆಲಸ ಮಾಡುವ ಅಥವಾ ಶ್ರಮ ಪಡುವ ಮೂಲಕ ತನ್ನ ಸ್ಥಾನವನ್ನು ಗಳಿಸಬೇಕು.. ಏಕೆಂದರೆ ಕಷ್ಟಪಟ್ಟು ದುಡಿಯುವವರಿಂದ ಯಶಸ್ಸನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. 

ನಿಮ್ಮ ವೀಕನೆಸ್‌ನ್ನು ಯಾರೊಂದಿಗೂ ಹಂಚಿಕೊಳ್ಳಬಾರದು: ಚಾಣಕ್ಯ ಹೇಳುವ ಪ್ರಕಾರ ಯಾವುದೇ ಸಂದರ್ಭದಲ್ಲೂ ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.. ಏಕೆಂದರೆ ನಿಮ್ಮ ಹಿತೈಶಿ ಮುಂದೊಂದು ದಿನ ಹಿತಶತ್ರೂ ಕೂಡ ಆಗಬಹುದು... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News