)
weight loss home remedy : ಅನೇಕ ಜನರು ಹೊಟ್ಟೆ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀವು ಎಷ್ಟೇ ವರ್ಕೌಟ್, ಡಯೆಟ್ ಮಾಡಿದರೂ ನಿಮ್ಮ ಹೊಟ್ಟೆಯನ್ನು ಕಡಿಮೆ ಮಾಡುವುದು ತುಂಬಾ ಕಷ್ಟ ಅನಿಸಬಹುದು. ಈ ಒಂದು ಪದಾರ್ಥವನ್ನು ಬೆಳಿಗ್ಗೆ ತಿನ್ನಲು ಆರಂಭಿಸಿ 30 ದಿನಗಳಲ್ಲಿ ಹೊಟ್ಟೆ ಬೊಜ್ಜು ಸಂಪೂರ್ಣ ಕರಗುವುದು.
ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುವುದು ಅಸಾಧ್ಯ ಎಂದು ಎಲ್ಲರೂ ಭಾವಿಸುತ್ತಾರೆ. ಸಣ್ಣ ಸಲಹೆಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಬೊಜ್ಜನ್ನು ಕಡಿಮೆ ಮಾಡಬಹುದು. ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಅಲ್ಲದೆ ದಿನಕ್ಕೆ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯನ್ನು ಮಾಡಲು ಮರೆಯದಿರಿ.
ಜನರು ಬೊಜ್ಜು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಪ್ರಯತ್ನಿಸುತ್ತಾರೆ ಆದರೆ ಅವರು ಬಯಸಿದ ದೇಹವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಳೆಯ ಕಾಲದ ಕೆಲವು ಆಹಾರ ಪದ್ಧತಿಗಳು ಇಂದಿಗೂ ಬೊಜ್ಜನ್ನು ಕರಗಿಸುವಲ್ಲಿ ಬಹಳ ಪರಿಣಾಮಕಾರಿ. ಹೆಚ್ಚಾಗಿ ವಯಸ್ಸಾದ ಜನರು ಆಹಾರ ಸೇವಿಸಿದ ನಂತರ ಸೋಂಪು ಮತ್ತು ವೀಳ್ಯದೆಲೆ ತಿನ್ನುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಅದನ್ನು ಹವ್ಯಾಸವಾಗಿ ಸೇವಿಸುತ್ತಾರೆ.
ಈ ಪಾನ್ ತಿನ್ನುವ ಅಭ್ಯಾಸವು ಆರೋಗ್ಯಕ್ಕೆ ಸಂಬಂಧಿಸಿದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ತೂಕವನ್ನು ನಿಯಂತ್ರಿಸಲುಸಹಾಯ ಮಾಡುತ್ತದೆ. ಪ್ರಸ್ತುತ ಕಾಲದಲ್ಲಿ, ಬೊಜ್ಜು ಒಂದು ದೊಡ್ಡ ಕಾಯಿಲೆಯಾಗಿದೆ. ನೀವು ಬೊಜ್ಜಿನಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ನಿಯಂತ್ರಿಸಲು ಬಯಸಿದರೆ ವೀಳ್ಯದೆಲೆ ಸೇವಿಸಿ.
ಊಟದ ನಂತರ ವೀಳ್ಯದೆಲೆಗೆ ಸೋಂಪು, ಕರಿಮೆಣಸು ಮತ್ತು ಎರಡು ಕಪ್ಪು ಒಣದ್ರಾಕ್ಷಿಗಳೊಂದಿಗೆ ಸೇವಿಸಿದರೆ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಪ್ರತಿದಿನ ಊಟದ ನಂತರ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ .
ವೀಳ್ಯದ ಎಲೆಯಲ್ಲಿ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಹಾಕಿ ಸುತ್ತಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದು ಉತ್ತಮ.. ಇದನ್ನು ತಿಂದ ನಂತರ 30 ನಿಮಿಷಗಳ ಕಾಲ ಏನನ್ನೂ ತಿನ್ನಬೇಡಿ. ಹೀಗೆ ಒಂದು ತಿಂಗಳು ಮಾಡಿದರೆ ಹೊಟ್ಟೆ ಬೊಜ್ಜು ಕಡಿಮೆಯಾಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Z Kannada News ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.