)
White Hair Remedy: ನುಗ್ಗೆಕಾಯಿ ಮಾತ್ರವಲ್ಲ ಅದರ ಎಲೆಯೂ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನುಗ್ಗೆಕಾಯಿ ಎಲೆ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಕೂದಲಿಗೆ ಇದು ಪೋಷಣೆಯನ್ನು ನೀಡುತ್ತದೆ.
ನುಗ್ಗೆಕಾಯಿ ಎಲೆಯಲ್ಲಿರುವ ಪೋಷಕಾಂಶಗಳು ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ಇದು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದೆ. ನುಗ್ಗೆಕಾಯಿ ಎಲೆ ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ನುಗ್ಗೆಕಾಯಿ ಎಲೆಯಲ್ಲಿ ಬಯೋಟಿನ್ ಕೂಡ ಇದೆ.
ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸತು, ವಿಟಮಿನ್ ಎ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಸಹ ನುಗ್ಗೆಕಾಯಿ ಎಲೆ ಒಳಗೊಂಡಿದೆ.
ನುಗ್ಗೆಕಾಯಿ ಎಲೆ ಹೇರ್ ಪ್ಯಾಕ್ ತಯಾರಿಸಿ ಹಚ್ಚಬೇಕು. ಮೊದಲು ನುಗ್ಗೆಕಾಯಿ ಎಲೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ಎಲೆಯನ್ನು ಪುಡಿ ಮಾಡಿಕೊಳ್ಳಿ.
ಈ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು 30 ನಿಮಿಷದ ಬಳಿಕ ಸ್ನಾನ ಮಾಡಿ.ಈ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿಯೂ ತಲೆಗೆ ಹಚ್ಚಬಹುದು.
ತಲೆಗೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಬರುವುದಿಲ್ಲ. ನುಗ್ಗೆಸೊಪ್ಪಿನ ಪುಡಿಯನ್ನು ಮೊಸರಿನಲ್ಲಿ ಬೆರೆಸಿ, ರೋಸ್ ವಾಟರ್ ಮತ್ತು ಅಕ್ಕಿ ನೀರನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.