)
White Hair Home Remedies: ಬದಲಾದ ಕಾಲಮಾನದಲ್ಲಿ ಒತ್ತಡಭರಿತ ಜೀವನಶೈಲಿ, ಧೂಳು, ಮಾಲಿನ್ಯದಿಂದಾಗಿ ಕೂದಲು ಬಲು ಬೇಗ ತುಂಬಾ ಚಿಕ್ಕ ವಯಸ್ಸಿನಲ್ಲಿ ಬೆಳ್ಳಗಾಗುತ್ತದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಬಹುತೇಕ ಜನರು ಹೇರ್ ಡೈ ಮೊರೆ ಹೋಗುತ್ತಾರೆ. ಇದು ತಕ್ಷಣಕ್ಕೆ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಆದರೆ, ಇದರಿಂದ ಭವಿಷ್ಯದಲ್ಲಿ ಚರ್ಮ, ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಯಾವುದೇ ಹೇರ್ ಡೈ ಸಹಾಯವಿಲ್ಲದೆ ಕೊಬ್ಬರಿ ಎಣ್ಣೆಯೊಂದಿಗೆ ಕಲೋಂಜಿಯನ್ನು ಬಳಸಿ ಇದಕ್ಕೆ ತ್ವರಿತ ಹಾಗೂ ಶಾಶ್ವತ ಪರಿಹಾರ ಪಡೆಯಬಹುದು.
ಹೌದು, ಕೊಬ್ಬರಿ ಎಣ್ಣೆಯಲ್ಲಿ ಕಲೋಂಜಿ ಎಂದು ಕರೆಯಲಾಗುವ ಕಪ್ಪು ಜೀರಿಗೆಯಲ್ಲಿರುವ ಥೈಮೋಕ್ವಿನೋನ್ ಮತ್ತು ಲಿನೋಲಿಕ್ ಎಂಬ ಆಮ್ಲಗಳು ಕೂದಲಿನ ಬುಡದಲ್ಲಿ ಕೂದಲು ಕಪ್ಪಾಗಲು ಬೇಕಾಗುವ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸಲು ನೈಸರ್ಗಿಕ ಪರಿಹಾರವಾಗಿದೆ.
ಕಲೋಂಜಿ ಕಾಳುಗಳನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಒಂದೆರಡು ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಇದನ್ನು ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ ಲಘು ಮಸಾಜ್ ಮಾಡಿದರೆ ಕೂಡಲೇ ಬೆಳ್ಳಗಿರುವ ಕೂದಲು ಕಪ್ಪಾಗುತ್ತದೆ.
ತೆಂಗಿನೆಣ್ಣೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಬೆರೆಸಿಟ್ಟು ಬಳಸುವುದರಿಂದ ಇದು ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ ಕೂದಲ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ. ಅಲ್ಲದೆ ಕೂದಲು ಕಾಂತಿಯುತವಾಗಿ ಉದ್ದವಾಗಿ ಬೆಳಯಲು ಪ್ರಚೋದಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.