White Hair Remedies: ಬದಲಾದ ಜೀವನಶೈಲಿ, ಕಳಪೆ ಆಹಾರಪದ್ಧತಿ, ಧೂಳು, ಮಾಲಿನ್ಯ, ಅನುವಂಶೀಯತೆ ಇದರಿಂದಾಗಿ ಕೂದಲು ಬೂದು ಬಣ್ಣಕ್ಕೆ, ಬಿಳಿ ಬಣ್ಣಕ್ಕೆ ತಿರುಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಬೆಳ್ಳಗಾದ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹೇರ್ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಇದರಿಂದ ಬಿಳಿ ಕೂದಲನ್ನು ತ್ವರಿತವಾಗಿ ಕಪ್ಪಾಗಿಸಬಹುದು. ಆದರೆ, ಕ್ರಮೇಣ ಕೂದಲು ಮತ್ತೆ ಬಿಳಿ ಬಣ್ಣಕ್ಕೆ ಮರಳುತ್ತದೆ. ಜೊತೆಗೆ, ಇದರಿಂದ ಕೂದಲಿಗೆ ಸಂಬಂಧಿಸಿದ ಹಾಗೂ ಕೆಲವೊಮ್ಮೆ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕೂಡ ತಲೆದೂರಬಹುದು. ಆದರೆ, ಕಸದಿಂದ ರಸ ಎಂದು ನೀವು ಕೇಳಿರುತ್ತೀರಿ. ನೀವು ಕಸ ಎಂದು ಬಿಸಾಡುವ ತೆಂಗಿನಕಾಯಿ ಕರಟದಿಂದಲೇ ಬೆಳ್ಳಗಾಗಿರುವ ನಿಮ್ಮ ಕೂದಲನ್ನು ಜಡದಿಂದ ಕಪ್ಪಾಗಿಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಹೌದು, ಸಾಮಾನ್ಯವಾಗಿ ತೆಂಗಿನಕಾಯಿ ತುರಿದ ಬಳಿಕ ಅದರ ಕರಟವನ್ನು ಕಸ ಎಂದು ಬಿಸಾಡುತ್ತೇವೆ. ಇಲ್ಲವೇ, ಸೌದೆಒಲೆ ಇದ್ದಲ್ಲಿ ಒಲೆಗೆ ಬಳಸಬಹುದು. ಆದರೆ, ಇದರ ಸಹಾಯದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಬೇರುಗಳಿಂದ ಶಾಶ್ವತವಾಗಿ ಕಪ್ಪಾಗಿಸಬಹುದು. ಜೊತೆಗೆ ಇದು ಕೂದಲಿಗೆ ಬೇರುಗಳಿಂದ ಪೋಷಣೆ ನೀಡುತ್ತದೆ.
ತೆಂಗಿನಕಾಯಿ ಕರಟವನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಲು ಏನು ಮಾಡಬೇಕು?
ಮೊದಲಿಗೆ ತೆಂಗಿನಕಾಯಿ ಕರಟವನ್ನು ಸ್ಟೌವ್ ಮೇಲಿಟ್ಟು ಅದನ್ನು ಸಂಪೂರ್ಣವಾಗಿ ಕಾಯಲು ಬಿಡಿ. ಅದು ಸಂಪೂರ್ಣವಾಗಿ ಸುಟ್ಟುಕರಕಲಾದ ಬಳಿಕ ಇಕ್ಕಳದ ಸಹಾಯದಿಂದ ಅದನ್ನು ಒಂದು ತಟ್ಟೆಯಲ್ಲಿ ಹಾಕಿ ಅದರ ಮೇಲೆ ನಿಂಬೆ ರಸವನ್ನು ಹಿಂಡಿ. ಸುಟ್ಟುಕರಕಲಾಗಿರುವ ಕರಟ ತಣ್ಣಗಾದ ಬಳಿಕ ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿ ಮಾಡಿ. ನಂತರ ಆ ಪುಡಿಯನ್ನು ಒಂದು ಬಾಟಲಿನಲ್ಲಿ ಸಂಗ್ರಹಿಸಿಡಿ.
ಕರಟದ ಪುಡಿಯನ್ನು ಬಿಳಿ ಕೂದಲಿಗೆ ಬಳಸುವುದು ಹೇಗೆ?
ನಿಮಗೆ ಬೇಕೆಂದಾಗ ಕರಟದ ಪುಡಿಯಲ್ಲಿ ನೀವು ಕೂದಲಿಗೆ ಬಳಸುವ ಎಣ್ಣೆಯನ್ನು (ಕೊಬ್ಬರಿ ಎಣ್ಣೆ, ಹರಳೆಣ್ಣೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ) ಸ್ವಲ್ಪ ಪುಡಿಯೊಂದಿಗೆ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಕೂಡಲೇ ಬೆಳ್ಳಗಿರುವ ಕೂದಲು ಕಪ್ಪಾಗುತ್ತದೆ. ಅಲ್ಲದೆ, ನಿಯಮಿತವಾಗಿ ತೆಂಗಿನಕಾಯಿ ಕರಟವನ್ನು ಬಳಸುವುದರಿಂದ ಕೂದಲಿಗೆ ಉತ್ತಮ ಪೋಷಣೆ ದೊರೆತು ಗಟ್ಟಿಮುಟ್ಟಾದ ಉದ್ದ ಕೂದಲನ್ನು ಹೊಂದಬಹುದು. ಭವಿಷ್ಯದಲ್ಲಿ ಕೂದಲು ಬೂದು ಬಣ್ಣಕ್ಕೆ ಅಥವಾ ಬೆಳ್ಳಗಾಗುವುದನ್ನು ಕೂಡ ತಡೆಯಬಹುದು.
ಇದನ್ನೂ ಓದಿ- ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಹಚ್ಚಿದರೆ ಎರಡೇ ನಿಮಿಷದಲ್ಲಿ ಗಾಢ ಕಪ್ಪಾಗುತ್ತೆ ಬಿಳಿ ಕೂದಲು
ಇದನ್ನೂ ಓದಿ- ಎಳ್ಳೆಣ್ಣೆಯನ್ನು ಇವುಗಳೊಂದಿಗೆ ಬಳಸಿದರೆ ಬಿಳಿ ಕೂದಲು ನ್ಯಾಚುರಲ್ ಆಗಿಯೇ ಕಪ್ಪಾಗುತ್ತೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









