ಸ್ನಾನ ಮಾಡುವಾಗ ಮಹಿಳೆಯರು ಮಾಡುವ ಈ ತಪ್ಪಿನಿಂದಾಗಿಯೇ ಚರ್ಮ, ಕೂದಲಿನ ಆರೋಗ್ಯಕ್ಕೆ ಹಾನಿ..!

Common Bathing Mistakes: ದೇಹವನ್ನು ಶುದ್ಧಗೊಳಿಸಲು ಮಾಡುವ ತಪ್ಪುಗಳು ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡಬೇಕು. ಆದರೆ, ಸ್ನಾನ ಮಾಡುವಾಗ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಚರ್ಮ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. 

Written by - Yashaswini V | Last Updated : May 17, 2025, 08:45 AM IST
  • ದೇಹವನ್ನು ಶುದ್ಧಗೊಳಿಸಲು ಸ್ನಾನ ಮಾಡಲಾಗುತ್ತದೆ
  • ಆದರೆ, ಈ ಸಂದರ್ಭದಲ್ಲಿ ಮಾಡುವ ಸಾಮಾನ್ಯ ತಪ್ಪುಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.
  • ಅದರಲ್ಲೂ ಈ ತಪ್ಪುಗಳು ಮಹಿಳೆಯರ ಕೂದಲು, ಚರ್ಮದ ಆರೋಗ್ಯದ ಮೇಲೆ ಸೈಡ್ ಎಫೆಕ್ಟ್ ಉಂಟು ಮಾಡುತ್ತವೆ.
ಸ್ನಾನ ಮಾಡುವಾಗ ಮಹಿಳೆಯರು ಮಾಡುವ ಈ ತಪ್ಪಿನಿಂದಾಗಿಯೇ ಚರ್ಮ, ಕೂದಲಿನ ಆರೋಗ್ಯಕ್ಕೆ ಹಾನಿ..!

Common Bathing Mistakes: ಸಾಮಾನ್ಯವಾಗಿ ಮಹಿಳೆಯರು ಸ್ನಾನ ಮಾಡುವಾಗ ಮಾಡುವಂತಹ ಕೆಲವು ತಪ್ಪುಗಳು ಅವರ ಕೂದಲು, ಚರ್ಮವನ್ನು ಹಾನಿಗೊಳಿಸುವುದರ ಜೊತೆಗೆ ಒಟ್ಟಾರೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಅಂತಹ ತಪ್ಪುಗಳು ಯಾವುವು ಎಂದು ನೋಡುವುದಾದರೆ... 

* ತುಂಬಾ ಬಿಸಿ ನೀರಿನ ಬಳಕೆ: 
ನಮ್ಮಲ್ಲಿ ಕೆಲವರಿಗೆ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವ ಅಭ್ಯಾಸವಿದೆ. ಆದರೆ, ಇದು ಕೂದಲು ಉದುರುವಿಕೆ ಸಮಸ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಚರ್ಮ ಒಣಗಿ, ನಿರ್ಜೀವವಾಗಲು ಕಾರಣವಾಗುತ್ತದೆ. ತುರಿಕೆ ಸಮಸ್ಯೆ, ಚರ್ಮದಲ್ಲಿ ಸುಕ್ಕುಗಳಿಗೂ ಇದು ಕಾರಣವಾಗಬಹುದು. 

* ಸೋಪ್ ಬಳಕೆ : 
ಹಿಂದೆಲ್ಲ ಮುಖ ತೊಳೆಯಲು ಕಡಲೆಹಿಟ್ಟು, ಸೀಗೆಪುಡಿಯನ್ನು ಬಳಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಪ್ ಬಳಕೆ ಹೆಚ್ಚಾಗಿದೆ. ಅತಿಯಾಗಿ ಸೋಪ್ ಬಳಸುವುದರಿಂದ ಚರ್ಮದ ನೈಸರ್ಗಿಕ ಎಣ್ಣೆಯ ಸಮತೋಲನ ಹಾಳಾಗುತ್ತದೆ. ಇದರಿಂದಾಗಿ ಚರ್ಮ ಒಣಗುವುದರ ಜೊತೆಗೆ ಬಿರುಕು ಬಿಡಲು ಆರಂಭಿಸುತ್ತದೆ. 

ಇದನ್ನೂ ಓದಿ- Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದ್ರೆ ನೋವು ನಿವಾರಣೆ, ಒತ್ತಡದಿಂದಲೂ ಮುಕ್ತಿ

* ಒದ್ದೆ ಕೂದಲು ಬಾಚುವುದು: 
ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಮಾತ್ರವಲ್ಲ, ಒದ್ದೆ ಕೂದಲನ್ನು ಬಾಚುವುದು ಒಳ್ಳೆಯ ಅಭ್ಯಾಸವಲ್ಲ. ಒದ್ದೆ ಕೂದಲು ದುರ್ಬಲವಾಗಿರುತ್ತದೆ. ಹಾಗಾಗಿ, ಬಾಚಿದ ಕೂಡಲೇ ಕೂದಲು ಉದುರುತ್ತದೆ. 

*  ಕೊಳಕಾದ ಅಥವಾ ಒದ್ದೆ ಟವಲ್ ಬಳಕೆ: 
ನಿತ್ಯ ಬಳಸುವ ಟವೆಲ್‌ಗಳನ್ನು ಎರಡು ಮೂರು ದಿನಗಳಿಗೊಮ್ಮೆ ವಾಶ್ ಮಾಡಬೇಕು. ಸದಾ ಸ್ವಚ್ಛವಾಗಿರುವ ಟವೆಲ್‌ಗಳನ್ನೇ ಬಳಸಬೇಕು. ಒದ್ದೆ ಅಥವಾ ಒಣಗಿದ ಟವಲ್ ಬಲ್ಸುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಇದರಿಂದ ಚರ್ಮದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. 

ಇದನ್ನೂ ಓದಿ-  ತ್ವಚೆಯ ಈ ಎಲ್ಲಾ ಸಮಸ್ಯೆಗಳಿಗೂ ರಾಮಬಾಣ 'ಸಕ್ಕರೆ': ಈ ರೀತಿ ಬಳಸಿ ಸಾಕು...! 

* ಖಾಸಗಿ ಅಂಗದ ಸ್ವಚ್ಛತೆ: 
ಸ್ನಾನ ಮಾಡುವಾಗ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಬೇಕು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಸೂಕ್ಷ್ಮ ಜಾಗವನ್ನು ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಯುಟಿಐ (ಮೂತ್ರನಾಳದ ಸೋಂಕು) ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. 

* ಹೇರ್ ವಾಶ್: 
ವಾರದಲ್ಲಿ ಎರಡರಿಂದ ಮೂರು ಬಾರಿ ಹೇರ್ ವಾಶ್ ಮಾಡುವುದು ಸಮಸ್ಯೆಯಲ್ಲ. ಆದರೆ, ನಿತ್ಯ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಿದರೆ ಕೂಡಲಿನಲ್ಲಿರುವ ನೈಸರ್ಗಿಕ ಎಣ್ಣೆಗಳು ಹೊರಹೋಗಿ ಕೂದಲು ಮಂದವಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News