ಮನೆಯ ಮುಖ್ಯ ದ್ವಾರದ ಮೇಲೆ ಈ ಲೋಹದಿಂದ ಮಾಡಿರುವ ಸ್ವಸ್ತಿಕ್ ಚಿಹ್ನೆ ಹಾಕಿದರೆ ಅಭಿವೃದ್ದಿ ಗ್ಯಾರಂಟಿ !
Copper Swastik Benefits : ಸ್ವಸ್ತಿಕವನ್ನು ಭಗವಾನ್ ವಿಷ್ಣುವಿನ ಸ್ಥಾನ ಮತ್ತು ಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ ಸ್ವಸ್ತಿಕ್ ಚಿಹ್ನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
Copper Swastik Benefits : ಸ್ವಸ್ತಿಕ್ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಜನರು ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಹೊರಗೆ ಹಾಕುತ್ತಾರೆ. ಮನೆಯ ಮುಖ್ಯದ್ವಾರದಲ್ಲಿ ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಯಾವುದೇ ಶುಭ ಕಾರ್ಯದ ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಹಾಕಲಾಗುತ್ತದೆ. ಧರ್ಮಗ್ರಂಥಗಳಲ್ಲಿ, ಇದನ್ನು ಭಗವಾನ್ ವಿಷ್ಣುವಿನ ಸ್ಥಾನ ಮತ್ತು ಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ ಸ್ವಸ್ತಿಕ್ ಚಿಹ್ನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಜೀವನದಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ತರಲು ಪ್ರಯತ್ನಿಸಬಹುದಾದ ಅನೇಕ ಕ್ರಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ತಾಮ್ರದ ಸ್ವಸ್ತಿಕ್ ಅನ್ನು ಮನೆಯ ಹೊರಗೆ ಇಡುವುದು.
ಇದನ್ನೂ ಓದಿ : Pradosh Vrat 2024: ಇಂದು ಇವುಗಳಲ್ಲಿ ಯಾವುದಾದರು ಒಂದು ವಸ್ತು ಮನೆಗೆ ತಂದರೂ ಇಷ್ಟಾರ್ಥ ಸಿದ್ಧಿ
ತಾಮ್ರದ ಸ್ವಸ್ತಿಕ್ :
ತಾಮ್ರ ಪವಿತ್ರ ಲೋಹವಾಗಿದೆ.ಇದರಿಂದ ತಯಾರಿಸಿದ ಸ್ವಸ್ತಿಕವನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕುವುದು ಮಂಗಳಕರವಾಗಿರುತ್ತದೆ. ಇದು ಧನಾತ್ಮಕತೆಯನ್ನು ಮನೆಯ ಒಳಗೆ ಹರಿಯುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಮನೆಯ ಹೊರಗೆ ತಾಮ್ರದ ಸ್ವಸ್ತಿಕವನ್ನು ಇಡುವುದರಿಂದ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ. ಸ್ವಸ್ತಿಕ ಚಿಹ್ನೆಯು ಮನೆಯನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಮನೆಯ ಮುಖ್ಯ ಬಾಗಿಲಿನ ಮೇಲೆ ತಾಮ್ರದ ಸ್ವಸ್ತಿಕವನ್ನು ಇಡುವುದರಿಂದ ವ್ಯಕ್ತಿಗೆ ಅದೃಷ್ಟ ಬರುತ್ತದೆ.ಇದು ಸೂರ್ಯನ ಶಕ್ತಿಯನ್ನು ಆಕರ್ಷಿಸುತ್ತದೆ. ಇದು ವ್ಯಕ್ತಿಗೆ ಸಮೃದ್ಧಿ ಮತ್ತು ಪ್ರಗತಿಯನ್ನು ತರುತ್ತದೆ.
ಮನೆಯ ಹೊರಗೆ ತಾಮ್ರದ ಸ್ವಸ್ತಿಕವನ್ನು ಹಾಕುವುದರಿಂದ ಕುಟುಂಬದ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ದೀರ್ಘಕಾಲದಿಂದ ಇರುವ ರೋಗವು ದೂರವಾಗುತ್ತದೆ. ಇದಲ್ಲದೇ ಕುಟುಂಬದ ಸದಸ್ಯರ ಮನಸ್ಸು ಕೂಡ ಶಾಂತವಾಗಿರುತ್ತದೆ.
ಇದನ್ನೂ ಓದಿ : Astro Tips For Money: ಹಣಕಾಸಿನ ಬಿಕ್ಕಟ್ಟಿನಿಂದ ಹೊರಬರಲು ಇಂದೇ ಮಾಡಿ ತುಳಸಿ ಪರಿಹಾರ
ತಾಮ್ರದ ಸ್ವಸ್ತಿಕವನ್ನು ಮನೆಯ ಹೊರಗೆ ಸರಿಯಾದ ಸ್ಥಳದಲ್ಲಿ ಇಡುವುದು ಮಂಗಳಕರವಾಗಿರುತ್ತದೆ. ಆದ್ದರಿಂದ ತಾಮ್ರದ ಸ್ವಸ್ತಿಕವನ್ನು ಮನೆಯ ಮುಖ್ಯ ಬಾಗಿಲಿನ ಮೇಲೆ ಇರಿಸಿದಾಗ, ಅದನ್ನು ಬಾಗಿಲಿನ ಮೇಲೆ ಮತ್ತು ಮಧ್ಯದಲ್ಲಿ ಇರಿಸಬೇಕಾಗುತ್ತದೆ. ಇದಲ್ಲದೇ ಮನೆಯೊಳಗೆ ಇಟ್ಟರೂ ಶುಭ.
ಮನೆಯೊಳಗೆ ಪೂರ್ವ ದಿಕ್ಕಿನಲ್ಲಿ ತಾಮ್ರದ ಸ್ವಸ್ತಿಕವನ್ನು ಇರಿಸಬೇಕು. ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಲು ಸ್ವಸ್ತಿಕವನ್ನು ಹಾಕಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.