Horoscope: ದಿನಭವಿಷ್ಯ 02-12-2021 Today Astrology

ಗುರುವಾರ, ವೃಷಭ ರಾಶಿ ಮತ್ತು ಕರ್ಕ ರಾಶಿಯ ಜನರು ತಮ್ಮ ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.  

Written by - ZH Kannada Desk | Last Updated : Dec 2, 2021, 05:49 AM IST
  • ವೃಷಭ ಮತ್ತು ಕರ್ಕ ರಾಶಿಯವರಿಗೆ ಕಷ್ಟದ ದಿನ
  • ದೀರ್ಘಕಾಲದ ಅನಾರೋಗ್ಯದಿಂದ ತೊಂದರೆಗೊಳಗಾಗಬಹುದು
  • ಈ 3 ರಾಶಿಯವರಿಗೆ ಒಳ್ಳೆಯ ದಿನ
Horoscope: ದಿನಭವಿಷ್ಯ 02-12-2021 Today Astrology

ನವದೆಹಲಿ : ಗುರುವಾರ, ವೃಷಭ ರಾಶಿ ಮತ್ತು ಕರ್ಕ ರಾಶಿಯ ಜನರು ತಮ್ಮ ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ದೀರ್ಘಕಾಲದ ಅನಾರೋಗ್ಯವು ಸಿಂಹ ರಾಶಿಯವರಿಗೆ ತೊಂದರೆ ನೀಡಬಹುದು. ಆದ್ದರಿಂದ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಿಥುನ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. 

ಮೇಷ:  ಯಾವುದೇ ಹೊಸ ಉದ್ಯಮಕ್ಕೆ ಇದು ಉತ್ತಮ ಸಮಯ. ಉದ್ಯಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅದರಲ್ಲಿ ಯಶಸ್ವಿ ಕೂಡಾ ಆಗಬಹುದು. ನಿಮ್ಮ ಜೀವನಶೈಲಿ ಸುಧಾರಿಸಲಿದೆ. 

ವೃಷಭ: ಕೌಟುಂಬಿಕ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ನಿಮ್ಮ ಪೋಷಕರೊಂದಿಗೆ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಪ್ರೇಮ ವ್ಯವಹಾರಗಳಿಗೆ ಸಮಯ ಅನುಕೂಲಕರವಾಗಿದೆ. ಸಂಬಳ ಪಡೆಯುವ ಜನರು ಕಠಿಣ ಪರಿಶ್ರಮದಿಂದ ತಮ್ಮ ಮೇಲಾಧಿಕಾರಿಗಳನ್ನು ತೃಪ್ತಿಪಡಿಸಬಹುದು. 

ಮಿಥುನ: ನಿಮ್ಮ ಉತ್ತಮ ಪ್ರದರ್ಶನವು ಇತರ ಜನರನ್ನು ಮೆಚ್ಚಿಸುತ್ತದೆ. ನಿತ್ಯದ ಕೆಲಸವನ್ನು ಬಿಟ್ಟು ಬೇರೆ ಏನಾದರೂ ಮಾಡಲು ಪ್ರಯತ್ನಿಸಿದರೆ, ಯಶಸ್ವಿಯಾಗುತ್ತೀರಿ. ವ್ಯಾಪಾರಸ್ಥರಿಗೆ ಈ ದಿನವು ನಿರಾಶಾದಾಯಕವಾಗಿರುತ್ತದೆ. ಉದ್ಯೋಗಸ್ಥರಿಗೆ ದಿನವು ಅನುಕೂಲಕರವಾಗಿರುತ್ತದೆ.

ಇದನ್ನೂ ಓದಿ : Surya Grahan 2021 : ಡಿ. 4 ರಂದು ವರ್ಷದ ಕೊನೆಯ ಸೂರ್ಯಗ್ರಹಣ : ಅಂದು ಏನು ಮಾಡಬೇಕು, ಮಾಡಬಾರದು?

ಕರ್ಕ: ನೀವು ವಿವಿಧ ಹಂತಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ನೀವು ಗೊಂದಲದ ಸ್ಥಿತಿಯಲ್ಲಿರುತ್ತೀರಿ. ಹಾಗಾಗಿ, ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುವುದು ಸಾಧ್ಯವಾಗದೆ ಇರಬಹುದು. ಈ ಸಮಯದಲ್ಲಿ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವು ವ್ಯಾಪಾರ ಯೋಜನೆಗಳನ್ನು ತಡೆಹಿಡಿಯಬೇಕಾಗಬಹುದು.

ಸಿಂಹ: ಮೂಳೆಗಳು ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ  ಇದು ಕಷ್ಟಕರ ಸಮಯವಾಗಿರುತ್ತದೆ. ಹಿರಿಯ ನಾಗರಿಕರು ದೀರ್ಘ ಪ್ರಯಾಣವನ್ನು ತಪ್ಪಿಸಬೇಕು. ಕುಟುಂಬದ ಸದಸ್ಯರ ನಡುವಿನ ಅಶಾಂತಿಯು ಕಾಳಜಿಯ ವಿಷಯವಾಗಿರುತ್ತದೆ.

ಕನ್ಯಾ : ಕೆಲವರಿಗೆ ಆರ್ಥಿಕವಾಗಿ ಲಾಭದಾಯಕವಾಗುವ ಪ್ರಯಾಣಗಳು ಸಾಧ್ಯವಾಗಲಿದೆ. ಕುಟುಂಬದ ವಾತಾವರಣದಲ್ಲಿನ ಒತ್ತಡದ ಸಂದರ್ಭಗಳಿಂದಾಗಿ, ಕುಟುಂಬ ಸದಸ್ಯರು ನಿಮ್ಮ ಯಶಸ್ಸನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : Solar Eclipse 2021: ಗ್ರಹಣದ ಮಧ್ಯೆ ರೂಪುಗೊಳ್ಳುತ್ತಿದೆ ಸೂರ್ಯ ಕೇತು ಯೋಗ, ಈ ಆರು ರಾಶಿಯವರು ಎಚ್ಚರಿಕೆಯಿಂದ ಇರಬೇಕು

ತುಲಾ: ನಿಮ್ಮ ಸಂಪರ್ಕಗಳಿಂದಾಗಿ ವ್ಯಾಪಾರ ಮತ್ತು ವ್ಯವಹಾರದ ಸಂದರ್ಭದಲ್ಲಿ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಪ್ರಯತ್ನಗಳಲ್ಲಿ ಸರ್ವತೋಮುಖ ಯಶಸ್ಸನ್ನು ಸಾಧಿಸುವಿರಿ ಮತ್ತು
ನಿಮ್ಮ ಶಕ್ತಿಗಳು ಹೆಚ್ಚಾಗುತ್ತವೆ. ನಿಮ್ಮ ಕುಟುಂಬದ ಹಿರಿಯರು ನಿಮಗೆ ಎಲ್ಲಾ ಕಾರ್ಯಗಳಲ್ಲಿ ಸಂತೋಷದಿಂದ ಸಹಾಯ ಮಾಡುತ್ತಾರೆ.

ವೃಶ್ಚಿಕ: ನೀವು ಆರ್ಥಿಕವಾಗಿ ಬಹಳ ಯಶಸ್ವಿಯಾಗುತ್ತೀರಿ. ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳ ಗಮನವನ್ನು ನೀವು ಸೆಳೆಯುವಿರಿ.

ಧನು ರಾಶಿ : ನೀವು ಮುಕ್ತವಾಗಿ ಮಾತನಾಡುವವರಾಗಿದ್ದು, ನೀವು ಕುಟುಂಬದ ಸದಸ್ಯರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗಕ್ಕೆ ದಿನವು ಶುಭವಲ್ಲದಿದ್ದರೂ, ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ನೀವು ಕ್ರಿಯಾತ್ಮಕವಾಗಿರಬೇಕು.

ಇದನ್ನೂ ಓದಿ : ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ 

ಮಕರ: ಇದು ಮಿಶ್ರ ಫಲಿತಾಂಶಗಳ ಅವಧಿಯಾಗಿದೆ. ಈ ಸಮಯದಲ್ಲಿ ನೀವು ಸ್ವಲ್ಪ ಚಿಂತಿತರಾಗಿರಬಹುದು. ಅನಗತ್ಯ ತೊಂದರೆಗಳಲ್ಲಿ ಸಿಲುಕಿಕೊಳ್ಳಬಹುದು. ನಡೆಯುತ್ತಿರುವ ಯೋಜನೆಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಕುಂಭ: ಈ ಅವಧಿಯಲ್ಲಿ ನೀವು ಆರ್ಥಿಕವಾಗಿ ಸಮೃದ್ಧರಾಗುತ್ತೀರಿ. ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರವನ್ನೂ ವಿಸ್ತರಿಸಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ನೀವು ಕಠಿಣ ಪರಿಶ್ರಮದ ಫಲ ಸಿಗಲಿದೆ. ಜೀವನ ಸಂಗಾತಿಯೊಂದಿಗೆ ಆನಂದದಾಯಕ ಸಮಯವನ್ನು ಕಳೆಯುವಿರಿ. ಕುಟುಂಬ ಸದಸ್ಯರೊಂದಿಗೆ ಸಂಬಂಧವು ಸೌಹಾರ್ದಯುತವಾಗಿರುತ್ತದೆ. 

ಮೀನ: ನೀವು ಎಲ್ಲಾ ಚಟುವಟಿಕೆಗಳಲ್ಲಿ ಮಿಂಚುವಿರಿ ಮತ್ತು ಅದೃಷ್ಟವು ನಿಮ್ಮನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲಿದೆ.  ಯಾವುದೇ ವಿಶೇಷ ಕೆಲಸವು ಉದ್ಯೋಗಿಗಳಿಗೆ ಯಶಸ್ಸನ್ನು ನೀಡುತ್ತದೆ. ವಿದೇಶಿ ಸಂಪರ್ಕ ಹೊಂದಿರುವ ಜನರು ಕೆಲವು ಹಠಾತ್ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಪ್ರಯಾಣವನ್ನೂ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News