Daily Horoscope: ದಿನಭವಿಷ್ಯ 03-04-2021 Today astrology

ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - Zee Kannada News Desk | Last Updated : Apr 3, 2021, 06:55 AM IST
  • ಮಿಥುನ ರಾಶಿಯವರು ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಅನುಭವಿಸುತ್ತೀರಿ
  • ಧನಸ್ಸು ರಾಶಿಯವರು ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು
  • ಕುಂಭ ರಾಶಿಯವರಿಗೆ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುವುದು
Daily Horoscope: ದಿನಭವಿಷ್ಯ 03-04-2021 Today astrology  title=
Daily horoscope (ದಿನಭವಿಷ್ಯ 03-04-2021)

Daily horoscope (ದಿನಭವಿಷ್ಯ 03-04-2021) : ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ:- ಇಂದು ನೀವು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಠಿಣ ಪರಿಶ್ರಮಗಳನ್ನು ಹಿರಿಯರ ಸಲಹೆಯಿಂದ ಮುನ್ನುಗ್ಗಿ. ಇದರಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು, ಜೀವನದಲ್ಲಿ ಸಕಾರಾತ್ಮಕವಾದ ಅಂತಹ ಬದಲಾವಣೆ ತರುವುದನ್ನು ನೀವು ಬಯಸುತ್ತೀರಿ, ವೈಯಕ್ತಿಕ ಸಂಬಂಧಗಳಲ್ಲಿ ಶುಭವಾಗಿರುತ್ತದೆ. ಕಾನೂನು ವಿಷಯಗಳಿಗೆ ವ್ಯವಹರಿಸಲು ಉತ್ತಮವಾದ ದಿನವಲ್ಲ, ನಕಾರಾತ್ಮಕವಾದ ಆಲೋಚನೆಗಳು ನಿಮ್ಮ ಮನಸ್ಸನ್ನು ಆಳುತ್ತವೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸುಧಾರಣೆ. 
ನಿಮ್ಮ ಅದೃಷ್ಟದ ಸಂಖ್ಯೆ-7
ನಿಮ್ಮ ಅದೃಷ್ಟದ ಬಣ್ಣ-ಹಸಿರು

ವೃಷಭ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾಗಬಹುದು, ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ವ್ಯಾಪಾರ ಮಾಡಿದರೆ ಇದ್ದಕ್ಕಿದ್ದಂತೆ ದೊಡ್ಡ ಲಾಭ ಪಡೆಯಬಹುದು. ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾದ ದಿನವನ್ನು ಅನುಭವಿಸುತ್ತೀರಿ. ನೀವು ನಿಮ್ಮ ತಂದೆಯಿಂದ ಪ್ರಮುಖ ಸಲಹೆಯನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಉತ್ತಮವಾಗಿರುತ್ತದೆ, ಹಣಕಾಸಿನ ವಿಚಾರದಲ್ಲಿ ಜಾಗೃತಿ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ. ರಿಯಲ್ ಎಸ್ಟೇಟ್ ಕೆಲಸದಲ್ಲಿ ಮಾಡುತ್ತಿರುವವರಿಗೆ ಬಾರಿ ಲಾಭ. ಗಣಪತಿಯನ್ನು, ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ-5 
ನಿಮ್ಮ ಅದೃಷ್ಟದ ಬಣ್ಣ-ಕೇಸರಿ

ಮಿಥುನ ರಾಶಿ:- ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಅನುಭವಿಸುತ್ತೀರಿ. ಸಂಗಾತಿಯಿಂದ ಪೂರ್ಣ ಬೆಂಬಲ ಸಿಗುತ್ತದೆ. ಇದರಿಂದ ನಿಮಗೆ ತುಂಬಾ ಸಂತೋಷವಾಗುತ್ತದೆ, ಕೆಲಸದ ಬಗ್ಗೆ ಹಿರಿಯರು ನೀಡುವ ಮಾರ್ಗವನ್ನು ಅನುಸರಿಸಿ, ಹಣಕಾಸಿನ ಬಗ್ಗೆ ಜಾಗೃತಿ ವಹಿಸಿ. ನೋಡಿಕೊಂಡು ಖರ್ಚು ಮಾಡಿ. ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿರುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ-1
ನಿಮ್ಮ ಅದೃಷ್ಟದ ಬಣ್ಣ- ಬಿಳಿ

ಕಟಕ ರಾಶಿ:- ಯಾರೊಂದಿಗೂ ಕೂಡ ನೀವು ಅನಗತ್ಯವಾಗಿ ಜಗಳವನ್ನು ಮಾಡಬೇಡಿ. ಮನಸ್ತಾಪಗಳನ್ನು ಆಗುವುದನ್ನು ತಡೆಯಿರಿ. ತಾಳ್ಮೆ-ಸಹನೆಯಿಂದ ಮುಂದುವರೆಯಿರಿ, ವಿಶೇಷವಾಗಿ ಹಣದ ಬಗ್ಗೆ ಕಾಳಜಿವಹಿಸಿ. ಯಾರೊಂದಿಗೂ ಕೂಡ ಸಾಲವನ್ನು ತೆಗೆದುಕೊಳ್ಳಬೇಡಿ, ಇಂದು ಬರುವ ನಿಮ್ಮ ಸಂಕಷ್ಟಗಳೆಲ್ಲ ಪರಿಹಾರ ಆಗಬೇಕು ಎಂದರೆ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಿ. 
ನಿಮ್ಮ ಅದೃಷ್ಟದ ಸಂಖ್ಯೆ-1
ನಿಮ್ಮ ಅದೃಷ್ಟದ ಬಣ್ಣ-ಗುಲಾಬಿ

ಇದನ್ನೂ ಓದಿ - Hasta Samudrika:ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯಾ? ಇದ್ರೆ ನೀವೂ ನಿಮ್ಮ ಮಡದಿಯ ಕಾಳಜಿಗೆ ಪಾತ್ರರಗುವಿರಿ

ಸಿಂಹ ರಾಶಿ:- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ ಮತ್ತು ಅದರಲ್ಲಿ ನೀವು ಯಶಸ್ವಿಯಾಗುವ ಸಂಭವವಿದೆ. ಬ್ಯಾಂಕಿಂಗ್ ಕ್ಷೇತ್ರ ಆಗಿರಬಹುದು, ಯಾವುದೇ ವ್ಯವಹಾರ ಆಗಿರಬಹುದು. ಇವುಗಳು ಇಂದು ನಿಮ್ಮ ಪರವಾಗಿ ಇರುತ್ತವೆ. ನೀವು ಆತ್ಮವಿಶ್ವಾಸದಿಂದ ಇರಿ. ಶೀಘ್ರದಲ್ಲೇ ಯಶಸ್ಸನ್ನು ಕೂಡ ಪಡೆಯುತ್ತೀರಿ. ಹಣದ ವಿಚಾರದಲ್ಲಿ ನೀವು ಸ್ವಲ್ಪ ಸಾಕಷ್ಟು ಜಾಗೃತಿಯಿಂದ ಇರಿ. ಆದಷ್ಟು ಮನೆಯ ಗುರು-ಹಿರಿಯರ ಮಾತು ಕೇಳಿ. ಅವರ ಜೊತೆ ಜಗಳ ಆಡುವುದನ್ನು ತಪ್ಪಿಸಿ.
ನಿಮ್ಮ ಅದೃಷ್ಟದ ಸಂಖ್ಯೆ-9 
ನಿಮ್ಮ ಅದೃಷ್ಟದ ಬಣ್ಣ-ಕೇಸರಿ

ಕನ್ಯಾ ರಾಶಿ:- ಕುಟುಂಬದ ಜವಾಬ್ದಾರಿಗಳು ಕೂಡ ಪೂರ್ಣಗೊಳ್ಳುತ್ತದೆ ಹಾಗೂ ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಕೂಡ ಅಭಿವೃದ್ಧಿಯನ್ನು ಹೊಂದಬಹುದು, ಮದುವೆಯಾಗದವರಿಗೆ ಸಿಹಿ ಸುದ್ದಿ ಕೇಳಿ ಬರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳು ಇದ್ದರೂ ಸಹ ಮನೆಯವರೊಂದಿಗೆ ಚರ್ಚಿಸಿ ಅದನ್ನು ನಿವಾರಿಸಿಕೊಳ್ಳಿ. ಸಾಧ್ಯವಾದಷ್ಟು ಕುಟುಂಬದೊಂದಿಗೆ ಮೋಜಿನ ದಿನ ಕಳೆಯುವಿರಿ. ಆರೋಗ್ಯ ಕೂಡ ಚೆನ್ನಾಗಿರುತ್ತದೆ. ದೈಹಿಕವಾಗಿ ಮಾನಸಿಕವಾಗಿ ಆರಾಮವಾಗಿರುತ್ತೀರಿ.
ನಿಮ್ಮ ಅದೃಷ್ಟದ ಸಂಖ್ಯೆ-5 
ನಿಮ್ಮ ಅದೃಷ್ಟದ ಬಣ್ಣ-ಬಿಳಿ

ತುಲಾ ರಾಶಿ :- ನಿಮ್ಮ ನಿರಂತರವಾದ ವೆಚ್ಚಗಳು ಉಳಿತಾಯವನ್ನು ನಾಶಪಡಿಸಬಹುದು. ಆದ್ದರಿಂದ ಅನಗತ್ಯವಾದ ಖರ್ಚನ್ನು ಮಾಡುವುದನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ, ಮನೆಯ ಸದಸ್ಯರೊಂದಿಗೆ ಅಷ್ಟೇನೂ ಚೆನ್ನಾಗಿರುವುದಿಲ್ಲ. ನಿಮ್ಮ ಕೋಪವನ್ನು ಎಷ್ಟು ಸಾಧ್ಯವೋ ಅಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಿ. ಹಣದ ವಿಚಾರದಲ್ಲಿ ಹೊಡಿತು ಆರೋಗ್ಯದ ವಿಚಾರದಲ್ಲಿ ಜಾಗ್ರತೆ. 
ನಿಮ್ಮ ಅದೃಷ್ಟದ ಸಂಖ್ಯೆ-2 
ನಿಮ್ಮ ಅದೃಷ್ಟದ ಬಣ್ಣ-ನೀಲಿ

ವೃಶ್ಚಿಕ ರಾಶಿ:– ನೀವು ಕುಟುಂಬಕ್ಕೆ ಮತ್ತು ಕೆಲಸಕ್ಕಾಗಿ ಸಾಕಷ್ಟು ಸಮಯವನ್ನು ಒದಗಿಸುತ್ತೀರಿ. ಮದುವೆಯಾದವರಿಗೆ ಶುಭದಿನ. ನಿಮ್ಮ ಸಂಗಾತಿ ನಿಮ್ಮ ಆಸೆಗಳನ್ನು ಪೂರೈಸುತ್ತಾರೆ, ಆರ್ಥಿಕವಾಗಿ ಈ ದಿನ ಉತ್ತಮವಾಗಿರುತ್ತದೆ. ಹಣದಿಂದ ನಿಮ್ಮ ಸ್ನೇಹಿತರೊಂದಿಗೆ ವ್ಯವಹರಿಸುವುದನ್ನು ತಪ್ಪಿಸಿ, ಧರ್ಮ ಕ್ಷೇತ್ರಗಳಿಗೆ ಹೋಗಿ. ನಿಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ. ಹಣದ ವಿಚಾರದಲ್ಲಿ ಒಳ್ಳೆಯದು ಆರೋಗ್ಯದ ವಿಚಾರದಲ್ಲಿ ಜಾಗ್ರತೆ.
ನಿಮ್ಮ ಅದೃಷ್ಟದ ಸಂಖ್ಯೆ-1 
ನಿಮ್ಮ ಅದೃಷ್ಟದ ಬಣ್ಣ-ನೇರಳೆ

ಇದನ್ನೂ ಓದಿ - ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್

ಧನಸ್ಸು ರಾಶಿ:- ಕುಟುಂಬ ಜೀವನದಲ್ಲಿ ಸಂತೋಷ ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು, ನೌಕರಿ ಮಾಡುತ್ತಿರುವವರಿಗೆ ಶುಭಸುದ್ದಿ. ದೂರ ಸಂಚಾರ ಮಾಡುವಾಗ ಜಾಗೃತಿ ವಹಿಸಿ, ಬ್ಯಾಂಕಿನ ಕ್ಷೇತ್ರದಲ್ಲಿ ಜಾಗ್ರತೆವಹಿಸಿ. ವಾಹನ ಖರೀದಿಯಿಂದ ಸಂತೋಷ ಪಡೆಯುತ್ತೀರಿ. ಸದ್ಯದ ವಿಚಾರದಲ್ಲಿ ಅನೇಕ ಅನುಕೂಲಕರವಾದ ವಾತಾವರಣ ನಿರ್ಮಿಸಿ ನೆಮ್ಮದಿ ತರುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ. ಕುಟುಂಬದಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಬರದಂತೆ ತಡೆಯಿರಿ. ಬೇರೆಯವರ ಮಾತಿಗೆ ಬೆಲೆ ಕೊಡಿ, ಪ್ರಾಣದೇವರನ್ನು ಆರಾಧಿಸಿ ಎಲ್ಲವೂ ಒಳಿತಾಗುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ-4 
ನಿಮ್ಮ ಅದೃಷ್ಟದ ಬಣ್ಣ-ಕೇಸರಿ

ಮಕರ ರಾಶಿ:– ದೊಡ್ಡ ಲಾಭದಲ್ಲಿ ದಿನವೂ ಸಾರ್ಥಕವಾಗುತ್ತದೆ. ಪ್ರೀತಿಪಾತ್ರರು ಒಳ್ಳೆ ಸುದ್ದಿ ಕೂಡ ಎಂದು ಕೇಳುತ್ತೀರಿ. ಧಾರ್ಮಿಕ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತೀರಿ. ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುತ್ತದೆ. ವಿಶೇಷವಾಗಿ ಉದ್ಯೋಗಸ್ಥರು ತಮ್ಮ ಉನ್ನತ ಅಧಿಕಾರಿಗಳ ಮುಂದೆ ಉತ್ತಮ ರೀತಿಯಲ್ಲಿ ವರ್ತಿಸಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಅದೃಷ್ಟವು ನಿಮ್ಮನ್ನು ಕೈ ಹಿಡಿಯುತ್ತದೆ.                              ನಿಮ್ಮ ಅದೃಷ್ಟದ ಸಂಖ್ಯೆ-1
ನಿಮ್ಮ ಅದೃಷ್ಟ ಬಣ್ಣ - ಹಸಿರು 

ಕುಂಭ ರಾಶಿ:– ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುವುದು. ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ಕೂಡ ಪಡೆಯುತ್ತೀರಿ. ವಿಶೇಷವಾಗಿ ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ. ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಇಂದು ಉತ್ತಮವಾದ ದಿನವಲ್ಲ. ಹಣ ನಷ್ಟವಾಗುವ ಸಾಧ್ಯತೆ ಇದೆ. ಜಾಗರೂಕತೆಯಿಂದ ವ್ಯಾಪಾರ ಮಾಡಿ ಆರೋಗ್ಯ ದೃಷ್ಟಿಯಲ್ಲಿ ಜಾಗೃತಿವಹಿಸಿ.
ನಿಮ್ಮ ಅದೃಷ್ಟದ ಸಂಖ್ಯೆ-5 
ನಿಮ್ಮ ಅದೃಷ್ಟದ ಬಣ್ಣ-ಕೆಂಪು

ಮೀನ ರಾಶಿ:– ಪಾಲುದಾರಿಕೆ ವ್ಯವಹಾರವನ್ನು ನಡೆಸುತ್ತಿರುವವರಿಗೆ ಒಂದಿಷ್ಟು ಅಡ್ಡಿಯಾಗಬಹುದು. ಹೂಡಿಕೆಯನ್ನು ಮಾಡುವಾಗ ಒಂದಿಷ್ಟು ಎಚ್ಚರಿಕೆಯಿಂದ ಮಾಡಿ, ಪ್ರೀತಿ ಜೀವನದಲ್ಲಿ ಹೆಚ್ಚು ನಿರೀಕ್ಷೆ ಮಾಡಬೇಡಿ ನಿರಾಸೆಯಾಗುತ್ತದೆ, ಕುಟುಂಬದಲ್ಲಿ ಆಗಾಗ ಅನಾರೋಗ್ಯ ಕಾಡಬಹುದು. ಹೆಚ್ಚಿನ ಕಾಳಜಿಯನ್ನು ವಹಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಹಣಕಾಸಿನ ವಿಚಾರದಲ್ಲಿ ಒಳಿತು. ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರವಾಗಿರಿ. ಅನಗತ್ಯವಾದ ವಿಚಾರಗಳಿಂದ ದೂರವಿರಿ.  
ನಿಮ್ಮ ಅದೃಷ್ಟದ ಸಂಖ್ಯೆ-5 
ನಿಮ್ಮ ಅದೃಷ್ಟ ಬಣ್ಣ-ಹಳದಿ

ಇದನ್ನೂ ಓದಿ - ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News