Daily Horoscope: ದಿನಭವಿಷ್ಯ 08-03-2021 Today astrology

 ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ   ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - Zee Kannada News Desk | Last Updated : Mar 8, 2021, 06:15 AM IST
  • ವೃಷಭ ರಾಶಿಯವರು ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ
  • ಕನ್ಯಾ ರಾಶಿಯವರು ಉದ್ಯೋಗಗಳಲ್ಲಿ ಏರಿಳಿತ ಕಾಣಬಹುದು
  • ಧನಸ್ಸು ರಾಶಿಯವರು ನಿಮ್ಮ ಕೌಶಲ್ಯದಲ್ಲಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳಿ
Daily Horoscope: ದಿನಭವಿಷ್ಯ 08-03-2021 Today astrology  title=
Daily horoscope (ದಿನಭವಿಷ್ಯ 08-03-2021)

Daily horoscope (ದಿನಭವಿಷ್ಯ 08-03-2021) : ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ   ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ :
ಗೆಲುವಿನ ಲಯಕ್ಕೆ ಮರಳಲು ನಿಮ್ಮಲ್ಲಿರುವ ಸೋಮಾರಿತನವನ್ನು ತೆಗೆದುಹಾಕಿ. ಬಿಸಿಲು ಬಿರುಗಾಳಿಗೆ ಅಂಜಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆಪ್ತ ಜನಗಳು ತಮ್ಮ ಸಮಯಕ್ಕೆ ಉಪಯೋಗಿಸಿಕೊಳ್ಳುವುದು ಹಾಗೂ ಸಮಯದ ನಂತರ ದೂರ ತಳ್ಳುವರು, ನೀವು ಎಚ್ಚರದಿಂದಿರಿ. ಸ್ವತಂತ್ರದಿಂದ, ಸ್ವಇಚ್ಛೆಯಿಂದ ಕಾರ್ಯವನ್ನು ಮಾಡಿ ಎಷ್ಟೇ ಹಣ ಬಂದರೂ ನಿಮಗೆ ಸಂತೋಷ ಕೊಡುತ್ತದೆ. ಹಂಗಿನ ಅರಮನೆಗಿಂತ ಸ್ವಂತದ ಗುಡಿಸಲು ಲೇಸು ಎಂಬಂತೆ ಬಾಳಿರಿ.

ವೃಷಭ ರಾಶಿ :
ಇತ್ತೀಚಿಗೆ ಯಾವ ಕಾರ್ಯದಲ್ಲೂ ಶತ್ರುತ್ವ ಸಂಪಾದನೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಿಮ್ಮಲ್ಲಿರುವ ಪ್ರತಿಷ್ಠೆಯ ಭಾವನೆ ಹಾಗೂ ಮಾತಿನ ಭರಾಟೆ ಆದಷ್ಟು ನಿಯಂತ್ರಣದಲ್ಲಿಡಿ. ಕುಟುಂಬಸ್ಥರ ನೋವು ನಲಿವುಗಳಲ್ಲಿ ನೀವು ಸಹ ಪಾಲ್ಗೊಳ್ಳಿ. ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ. ಏಕೆಂದರೆ ನಿಮ್ಮ ಎಲ್ಲಾ ಧನಾತ್ಮಕ ಶಕ್ತಿ ಇರುವುದು ನಿಮ್ಮ ಕುಟುಂಬದಲ್ಲಿ ಮಾತ್ರ ನೆನಪಿಡಿ.

ಮಿಥುನ ರಾಶಿ :
ಯೋಜನೆಗಳ ಸಮಗ್ರ ದೃಷ್ಟಿ ಹಾಗೂ ಕ್ರಿಯಾಶೀಲತೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳುವುದು  ಮುಂದಿನ ಹಂತದಲ್ಲಿ ಕಾರ್ಯ ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ನಿಮ್ಮ ಪಾಡಿಗೆ ಇದ್ದು ಬಿಡಿ ನಿಮ್ಮ ಕೆಲಸ ಶಕ್ತರಾಗಿ ಮಾಡಿ ಮುಗಿಸಿ ಎಲ್ಲರೂ ಸುಮ್ಮನಾಗುವರು.

ಕರ್ಕಾಟಕ ರಾಶಿ :
ನಿಮ್ಮ ಪತ್ನಿಯೊಡನೆ ಗಂಭೀರವಾದ ವಿಷಯದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಕ್ಕಳು ಕುತೂಹಲಕಾರಿಯಾದಂತಹ ಆಸಕ್ತಿ ಬೆಳೆಸಿಕೊಳ್ಳುವರು ಅವರ ಇಷ್ಟಕ್ಕೆ ನಿಮ್ಮ ಬೆಂಬಲ ಸಹ ಇರಲಿ. ಆರ್ಥಿಕ ಹಿತದೃಷ್ಟಿಯಿಂದ ವ್ಯವಹಾರ ದಲ್ಲಿ ಶಿಸ್ತು ಬೆಳೆಸಿಕೊಳ್ಳುವುದು ಬಹುಮುಖ್ಯ, ಹಣಕಾಸಿನಲ್ಲಿ ಸಡಿಲ ತನ ಬೇಡವೇ ಬೇಡ.

ಇದನ್ನೂ ಓದಿ - ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ

ಸಿಂಹ ರಾಶಿ :
ಮನದಲ್ಲಿ ಮೂಡುವ ಹಿಂಜರಿಕೆ ಭಾವನೆ ಎದುರಿಸಬೇಕಾಗುತ್ತದೆ. ಧೈರ್ಯ ಸರ್ವತ್ರ ಸಾಧನ ಎಂಬುದನ್ನು ನೆನಪಿಡಿ ಮುಂದೆ ಸಾಗಿ. ನಿರೀಕ್ಷಿತ ಕೆಲಸ ಪೂರ್ಣಗೊಳಿಸಲು ಬಂಡವಾಳದ ಕೊರತೆ ಎದುರಿಸಬೇಕಾಗುತ್ತದೆ ಇದರಿಂದ ಸಾಲದ ಮೋರೆ ಹೋಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾಗಿ ಸಾಗಿದರು ಹಣಕಾಸಿನಲ್ಲಿ ನಿರಾಶಾದಾಯಕವಾಗಿರುತ್ತದೆ. ಆರ್ಥಿಕ ಯೋಜನೆಗಳಿಗೆ ತಡಮಾಡದೆ ಚೈತನ್ಯ ನೀಡಿ.

ಕನ್ಯಾ ರಾಶಿ :
ಉದ್ಯೋಗಗಳಲ್ಲಿ ಏರಿಳಿತ ಕಾಣಬಹುದು. ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನು ಗುರಿ ಮಾಡಬಹುದು ಇದರಿಂದ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತದೆ. ಜೀವನ ಎಂಬುವುದು ಪರಸ್ಪರ ಪ್ರೀತಿ ಪ್ರೇಮದಿಂದ ಅರಿತು ಬಾಳುವುದು ನಿಮ್ಮದೇ ಸಿದ್ದಾಂತ ನಡೆಯಬೇಕು ಎಂಬುದು ನಿಮ್ಮ ಹಟ ಸಾಧನೆ ಒಳ್ಳೆಯದಲ್ಲ.

ತುಲಾ ರಾಶಿ :
ಮಾತಿನಿಂದ ಸೌಧವನ್ನು ನಿರ್ಮಿಸುವುದು ನಿಮ್ಮ ಕೌಶಲ್ಯ. ಇದರಿಂದಲೇ ವ್ಯಾಪಾರ ವ್ಯವಹಾರದಲ್ಲಿ ಧನ ಸಂಪತ್ತು ವೃದ್ಧಿ ಆಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ವೃತ್ತಿರಂಗದಲ್ಲಿ ವಿನೂತನ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಆದಷ್ಟು ಎಚ್ಚರಿಕೆ ವಹಿಸಿ. ಇದರಿಂದ ನಿಮ್ಮ ಲಾಭಾಂಶದ ಲೆಕ್ಕಾಚಾರವನ್ನು ಪರಿಗಣಿಸಿ.

ವೃಶ್ಚಿಕ ರಾಶಿ :
ನಿಮ್ಮ ಮನಸ್ಸಿನಲ್ಲಿ ಇರುವಂತಹ ಜಮೀನು ಖರೀದಿ ಅಥವಾ ಗೃಹ ಖರೀದಿಯ ಬಯಕೆ ಪೂರ್ಣಗೊಳ್ಳುತ್ತದೆ. ಮಕ್ಕಳ ವಿಷಯದಲ್ಲಿ ಹೆಚ್ಚು ಸಂತೋಷ ಪಡುವಿರಿ. ಅವರ ಜ್ಞಾನಾರ್ಜನೆಗಾಗಿ ವಿಶೇಷವಾದಂತಹ ಕಾರ್ಯ ಸಂಕಲ್ಪಗಳನ್ನು ಮಾಡುವಿರಿ. ಪತ್ನಿಯು ನಿಮ್ಮನ್ನು ಅತಿ ಹೆಚ್ಚಾಗಿ ಬೇಕು ಬೇಡಗಳ ಪಟ್ಟಿಯನ್ನು ತಯಾರಿಸುವರು. ಕಾರ್ಯ ಪೂರ್ಣಗೊಳಿಸಲಾಗದೆ ಒದ್ದಾಡುವ ಪರಿಸ್ಥಿತಿ ನಿಮ್ಮದಾಗಿದೆ. ಮಾನಸಿಕ ಖಿನ್ನತೆಗಳು ನಿಮ್ಮನ್ನು ಆವರಿಸಲಿದೆ.

ಇದನ್ನೂ ಓದಿ - March 2021 Astrology: ಮಾರ್ಚ್‌ನಲ್ಲಿ 3 ಗ್ರಹಗಳ ಸ್ಥಾನ ಬದಲಾವಣೆ: ಈ ಐದು ರಾಶಿಯವರಿಗೆ ಅದೃಷ್ಟ!

ಧನಸ್ಸು ರಾಶಿ :
ನಿಮ್ಮ ಕೌಶಲ್ಯದಲ್ಲಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳಿ. ನಿಮ್ಮ ವಿರುದ್ದವಾಗಿ ಮಾತನಾಡುವ ಮಂದಿಯನ್ನು ಆದಷ್ಟು ನಿರ್ಲಕ್ಷಿಸಿ. ಆರೋಪಗಳನ್ನು ಮಾಡುವವರು ಮಾಡಲಿ ನಿಮ್ಮ ಕೃತಿಯಿಂದ ಅವರಿಗೆ ತಕ್ಕ ಫಲಿತಾಂಶವನ್ನು ನೀಡಲು ತಯಾರಾಗಿ. ನಿಮ್ಮಲ್ಲಿರುವ ಆಲಸ್ಯತನ ಜಡತ್ವ ನಿಮಗೆ ಸಮಸ್ಯೆಯನ್ನು ತಂದೊಡ್ಡಬಹುದು. ಆದಕಾರಣ ಹೆಚ್ಚಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಕುಲದೇವತಾರಾಧನೆ ಮಾಡುವುದು ಒಳಿತು. 

ಮಕರ ರಾಶಿ :
ದಾಖಲೆಗಳು ಹಾಗೂ ಹಣಕಾಸಿನ ಎಲ್ಲಾ ವಿಷಯಗಳಿಗೂ ಭದ್ರತೆಯನ್ನು ನೀಡಿ. ಎಲ್ಲೆಂದರಲ್ಲಿ ಇಟ್ಟು ಮರೆಯುವುದು ನಿಮ್ಮ ಸ್ವಭಾವವಾಗಿದೆ. ಇದರಿಂದ ಕುಟುಂಬದಲ್ಲಿ ಅಥವಾ ನಿಮಗೆ ವೈಯಕ್ತಿಕವಾಗಿ ಸಮಸ್ಯೆಗಳು ತರಬಹುದು. ಯೋಗ, ಧ್ಯಾನದಿಂದ ಮನಸ್ಸನ್ನು ಹತೋಟಿಗೆ ತರುವುದು ಒಳಿತು. ಕೆಲವು ವಿಷಯಗಳಲ್ಲಿ ಮನಸ್ಸು ಹೆಚ್ಚು ಕೇಂದ್ರೀಕರಿಸುತ್ತದೆ. ಅದು ಒಳ್ಳೆಯ ವಿಷಯ ಇದ್ದರೆ ತೊಂದರೆ ಇಲ್ಲ.

ಕುಂಭ ರಾಶಿ :
ಸ್ನೇಹದ ರೂಪದಲ್ಲಿ ಬಂದು ನಿಮಗೆ ಸಮಸ್ಯೆಯನ್ನು ತಂದುಕೊಡಬಹುದು ಆದಷ್ಟು ನಿಜ ಸ್ನೇಹವನ್ನು ಮಾತ್ರ ಬೆಂಬಲಿಸಿ. ಉದ್ಯೋಗ ನಿಮಿತ್ತ ಪರಸ್ಥಳ ವಾಸವೂ ನಿಮ್ಮ ಮನಸ್ಸನ್ನು ಕಾಡಬಹುದು. ಆರ್ಥಿಕ ವಿಷಯದಲ್ಲಿ ಹೆಚ್ಚಿನ ನಿರೀಕ್ಷೆ ಇದೆ.  ಆದಷ್ಟು ಲೇವಾದೇವಿ ವ್ಯವಹಾರವನ್ನು  ಮಾಡದಿರುವುದು ಒಳಿತು. ಕೆಟ್ಟ ಆಲೋಚನೆ ಇದ್ದರೆ ಆದಷ್ಟು ನಿಮ್ಮ ಮನಸ್ಸನ್ನು ನಿಯಂತ್ರಿಸಿ.

ಮೀನ ರಾಶಿ :
ಹಲವು ದಿನಗಳಿಂದ ಮದುವೆಗಾಗಿ ಕಾಯುತ್ತಿರುವವರಿಗೆ ಇಂದು ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ. ಆರ್ಥಿಕ ಯೋಜನೆಗಳಲ್ಲಿ ಹಿನ್ನಡೆ ಕಾಣಬಹುದು. ಆದರೆ ಮುಂದಿನ ದಿನಗಳಲ್ಲಿ ನೀವು ಮಾಡುತ್ತಿರುವ ಕೆಲಸದ ಶ್ರಮವೂ ಖಂಡಿತವಾಗಿಯೂ ಲಾಭಕಾರಿಯಾಗಿ ಬರುವುದು ನಿಶ್ಚಿತ. ಬಂದು ವರ್ಗದಲ್ಲಿ ನಿಮ್ಮ ವಿರುದ್ದವಾಗಿ ಅಪ ಪ್ರಚಾರ ಮಾಡುವಂತಹ ಜನರಿದ್ದಾರೆ. ಇಂತಹ ಹಿತಶತ್ರುಗಳಿಂದ ಆದಷ್ಟು ದೂರವಿರಿ.

ಇದನ್ನೂ ಓದಿ - ನಿಮ್ಮ ನಿತ್ಯಪೂಜೆಯಲ್ಲಿ ಈ ಐದು ತಪ್ಪುಗಳಾಗುತ್ತಿರಬಹುದು..?

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News