Daily Horoscope: ದಿನಭವಿಷ್ಯ 16-01-2021 Today astrology

ಶ್ರೀ ಕ್ಷೇತ್ರ  ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ  

Written by - ZH Kannada Desk | Last Updated : Jan 16, 2021, 08:45 AM IST
  • ಇಂದಿನಿಂದ ಈ 4 ರಾಶಿಗೆ ಕುಬೇರಯೋಗ
  • ವೃಷಭ, ಕಟಕ, ಕನ್ಯಾ, ಮಕರ ರಾಶಿಗೆ ಧನಲಾಭದ ಜೊತೆಗೆ ನೆಮ್ಮದಿ
  • ಸಾಲದಿಂದ ಮುಕ್ತಿ, ವಿದ್ಯೆ ವ್ಯಾಪಾರ ರಂಗದಲ್ಲಿ ಬಾರಿ ದೊಡ್ಡ ಯಶಸ್ಸು
Daily Horoscope: ದಿನಭವಿಷ್ಯ 16-01-2021 Today astrology

Daily horoscope (ದಿನಭವಿಷ್ಯ 16-01-2021)  : ಶ್ರೀ ಕ್ಷೇತ್ರ  ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಇಂದಿನಿಂದ ಈ 4 ರಾಶಿಗೆ ಕುಬೇರಯೋಗ ವೃಷಭ, ಕಟಕ, ಕನ್ಯಾ, ಮಕರ ರಾಶಿಗೆ ಧನಲಾಭದ ಜೊತೆಗೆ ನೆಮ್ಮದಿ. ಸಾಲದಿಂದ ಮುಕ್ತಿ, ವಿದ್ಯೆ ವ್ಯಾಪಾರ ರಂಗದಲ್ಲಿ ಬಾರಿ ದೊಡ್ಡ ಯಶಸ್ಸು ಸಿಗಲಿದೆ. ಕೋಪ ನಿಯಂತ್ರಿಸಿ ಧೈರ್ಯದಿಂದ ಕೆಲಸ ಮಾಡಿದರೆ ಸಾಕು 2 ವರ್ಷಗಳ ಕಾಲ ಲಕ್ಷ್ಮಿ ಕೃಪೆಯಿಂದ ಕಷ್ಟಗಳು ನೀರಿನಂತೆ ಕರಗುತ್ತದೆ. 

ಮೇಷ ರಾಶಿ :- ಪ್ರಗತಿಯನ್ನು ಹೊಂದಲು ಪರಿಶ್ರಮ ಬೀಳಬೇಕಾಗುತ್ತದೆ. ಯಾವುದೇ ರೀತಿ ಅಡ್ಡದಾರಿಯನ್ನು ಹಿಡಿಯಬೇಡಿ. ಮೇಲಧಿಕಾರಿಗಳ ಸಲಹೆಯನ್ನು ನೀವು ಅನುಸರಿಸಿದರೆ ಮುಂದೆ ಒಳಿತಾಗುತ್ತದೆ. ಆರ್ಥಿಕ ರಂಗದಲ್ಲಿ ಒಳಿತು ಒಳ್ಳೆಯ ಸುದ್ದಿಗಳನ್ನು ಕೇಳುತ್ತೇವೆ. ಮನೆಯ ವಾತಾವರಣ ಕೂಡ ಚೆನ್ನಾಗಿರುತ್ತದೆ. ಹಿರಿಯರ ಆಶೀರ್ವಾದ ನಿಮಗೆ ಸದಾ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಜಾಗೃತರಾಗಿರಿ. 
ನಿಮ್ಮ ಅದೃಷ್ಟದ ಸಂಖ್ಯೆ - 2 
ನಿಮ್ಮ ಅದೃಷ್ಟದ ಬಣ್ಣ - ನೇರಳೆ 

ವೃಷಭ ರಾಶಿ :- ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಹಾಗೂ ಮಾನಸಿಕ ಶಾಂತಿಯನ್ನು ಅನುಭವಿಸುತ್ತೀರಿ. ಹೊಸ ವ್ಯಾಪಾರವನ್ನು ಮಾಡುತ್ತಿದ್ದರು. ಇಂದು ಒಳ್ಳೆಯ ದಿನವಾಗಿದೆ, ಮಗುವಿಗೆ ಸಂಬಂಧಿಸಿದ ಯಾವುದೇ ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು. ಹೋಟೆಲ್ ಮತ್ತು ಸಾರಿಗೆ ವಿಭಾಗದಲ್ಲಿರುವ ಅವರಿಗೆ ಒಳ್ಳೆಯ ಫಲಿತಾಂಶ ಕಾಣಬಹುದು. 
ನಿಮ್ಮ ಅದೃಷ್ಟದ ಸಂಖ್ಯೆ - 4
ನಿಮ್ಮದು ಅದೃಷ್ಟದ ಬಣ್ಣ - ಕೆಂಪು

ಮಿಥುನ ರಾಶಿ :- ಉದ್ಯೋಗದಲ್ಲಿರುವವರಿಗೆ ಉತ್ತಮವಾದ ಸ್ಥಾನವನ್ನು ಪಡೆಯಬಹುದು. ವ್ಯಾಪಾರಿಗಳಿಗೆ ಉತ್ತಮ ಆರೋಗ್ಯ ದಿನವಾಗಿರುತ್ತದೆ. ಸಣ್ಣ ವ್ಯಾಪಾರಿಗಳು ಕೂಡ ಲಾಭವನ್ನು ನಿರೀಕ್ಷೆ ಮಾಡಬಹುದು. ಹಣದ ಬಗ್ಗೆ ಹೇಳುವುದಾದರೆ ಉತ್ತಮವಾದ ಹಣವನ್ನು ಗಳಿಸಬಹುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಕುಟುಂಬದ ಸಮಸ್ಯೆ ಪರಿಹಾರ ಆಗಬಹುದು. ನಿಮ್ಮ ಬುದ್ಧಿವಂತಿಕೆ ಮತ್ತು ಜಾಗೃತಿಯಿಂದ ಕೆಲಸ ನಿರ್ವಹಿಸಿ ವ್ಯಾಪಾರಿಗಳಿರಬಹುದು ಮತ್ತು ಉದ್ಯೋಗ ಸ್ಥಳದಲ್ಲಿ ಇರುವವರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. 
ನಿಮ್ಮ ಅದೃಷ್ಟದ ಸಂಖ್ಯೆ - 5 
ನಿಮ್ಮ ಅದೃಷ್ಟದ ಬಣ್ಣ - ಬಿಳಿ

ಕಟಕ ರಾಶಿ :- ನೀವು ಕೋಪಗೊಳ್ಳುವ ಸಲುವಾಗಿ ಮನೆಯಲ್ಲಿ ಬಿನ್ನಾಭಿಪ್ರಾಯ ಉಂಟಾಗಬಹುದು. ಎಚ್ಚರಿಕೆಯಿಂದ ಮಾತನಾಡಿ ಹಣದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ತಂದೆಯೊಂದಿಗೆ ವ್ಯವಹಾರವನ್ನು ಸಲಹೆಯನ್ನು ಪಡೆಯಿರಿ ನಿಂತುಹೋಗಿರುವ ಯಾವುದೋ ಒಂದು ಯೋಜನೆಯನ್ನು ಮತ್ತೆ ಮರು ಪ್ರಾರಂಭಿಸಲು ಇಂದು ಶುಭದಿನ, ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 4 
ನಿಮ್ಮ ಅದೃಷ್ಟದ ಬಣ್ಣ - ಕೇಸರಿ

ಇದನ್ನೂ ಓದಿ - Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

ಸಿಂಹ ರಾಶಿ :- ನೀವು ಯಾವುದೇ ಇಂಟರ್ವ್ಯೂಗೆ ಹೋಗುತ್ತಿದ್ದರೆ ಪೂರ್ಣಪ್ರಮಾಣದ ನಂಬಿಕೆ ವಿಶ್ವಾಸ ದಿಂದ ಹೋಗಿ. ಏಕೆಂದರೆ ಯಶಸ್ಸನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ಇವೆ. ಸಾರಿಗೆ ಸಂಬಂಧಪಟ್ಟಂತಹ ಲೋಹವು ಒಳ್ಳೆಯ ಫಲಿತಾಂಶ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಶಾಂತಿಯಿಂದ ವರ್ತಿಸಿ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ಅವರ ಆಶೀರ್ವಾದವನ್ನು ಕೂಡ ಪಡೆಯುತ್ತೀರಿ. ಹಣದ ಬಗ್ಗೆ ಮಾತನಾಡುವುದಾದರೆ ತಂದೆಯಿಂದ ಅರ್ಥಿಕ ಲಾಭ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಪ್ರೀತಿ ವಿಚಾರದಲ್ಲಿ ಅದ್ಭುತವಾದ ದಿನವಾಗಿರುತ್ತದೆ. ನೀವು ಆಹಾರವನ್ನು ತೆಗೆದುಕೊಳ್ಳುವಾಗ ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಿ.
ನಿಮ್ಮ ಅದೃಷ್ಟದ ಸಂಖ್ಯೆ - 1 
ನಿಮ್ಮ ಅದೃಷ್ಟದ ಬಣ್ಣ - ಹಳದಿ

ಕನ್ಯಾ ರಾಶಿ :- 
ವ್ಯಾಪಾರಿಗಳಿಗೆ ಇಂದು ಮಿಶ್ರ ಫಲ ಸಿಗುತ್ತದೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವ್ಯಾಪಾರ ಮಾಡುತ್ತಿರುವವರಿಗೆ ಅಧಿಕ ಲಾಭ ಪಡೆಯಬಹುದು. ಇಂದು ನೀವು ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲವಾದರೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅದು ನಿಮ್ಮ ಕುಟುಂಬದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಹಣಕಾಸಿನ ಅಂಶ ಬಲಪಡಿಸಲು ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ಅಂತಹ ಯೋಜನೆಗಳು ಯಶಸ್ವಿಯಾಗುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 3 
ನಿಮ್ಮ ಅದೃಷ್ಟದ ಬಣ್ಣ - ಬಿಳಿ

ತುಲಾ ರಾಶಿ :- ನಿಮ್ಮ ವೈಯಕ್ತಿಕ ಜೀವನದಲ್ಲಿ ತಾಳ್ಮೆ ಇರಬೇಕು ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ಹೆಚ್ಚಾಗುತ್ತದೆ. ಕೆಲವೊಂದಿಷ್ಟು ಮನೆಯಲ್ಲಿ ಮನಸ್ತಾಪ ಬರಬಹುದು. ವಿಷಯಗಳ ಬಗ್ಗೆ ಮಾತನಾಡುವಾಗ ಆದಷ್ಟು ತಾಳ್ಮೆಯಿಂದ ಇರಿ. ಕೆಲಸದ ಬಗ್ಗೆ ಮಾತನಾಡುವುದಾದರೆ ಬಹಳ ಮುಖ್ಯವಾಗಿರುತ್ತದೆ. ನೀವು ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದೊಡ್ಡ ಲಾಭವನ್ನು ಕೂಡ ಪಡೆಯಬಹುದು. ವ್ಯಾಪಾರಸ್ಥರಿಗೆ ಇಂದು ಸಾಮಾನ್ಯವಾಗಿರುತ್ತದೆ. ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಉಳಿತಾಯದ ಕಡೆ ಹೆಚ್ಚು ಗಮನ ಕೊಡಿ. ಕುಟುಂಬ ಜೀವನದಲ್ಲಿ ಸಂತೋಷವಾಗುತ್ತದೆ.
ನಿಮ್ಮ ಅದೃಷ್ಟ ಸಂಖ್ಯೆ - 5 
ನಿಮ್ಮ ಅದೃಷ್ಟ ಬಣ್ಣ - ಬಿಳಿ

ವೃಶ್ಚಿಕ ರಾಶಿ :- ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ನಿಮ್ಮ ದಕ್ಷತೆ ಪರೀಕ್ಷಿಸಲು ನಿಮಗೆ ದೊಡ್ಡ ಕೆಲಸವನ್ನು ಕೂಡ ಕೊಡುತ್ತಾರೆ. ಇದರಿಂದ ಮುಂದೆ ಒಳ್ಳೆಯದಾಗುತ್ತದೆ, ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಚೆನ್ನಾಗಿರುತ್ತೆ. 
ನಿಮ್ಮ ಅದೃಷ್ಟದ ಸಂಖ್ಯೆ - 2 
ನಿಮ್ಮ ಅದೃಷ್ಟದ ಬಣ್ಣ - ಕೇಸರಿ

ಇದನ್ನೂ ಓದಿ - ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಧನಸ್ಸು ರಾಶಿ :- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಡನೆ ಉತ್ತಮವಾದ ಸಂಬಂಧವಿರುತ್ತದೆ. ವಿಶೇಷವಾದಂತಹ ಸಾಧನೆಯನ್ನು ಕೂಡ ಪಡೆಯುತ್ತೀರಿ. ಅನೇಕ ಹೊಸ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಣದ ವಿಷಯ ಬಗ್ಗೆ ಕಾಳಜಿವಹಿಸಿ ಸಾಲ ತೆಗೆದುಕೊಳ್ಳಬೇಡಿ. ಉದ್ಯೋಗ ಮಾಡುತ್ತಿದ್ದರೆ ಜಾಗ್ರತೆಯಾಗಿರಿ, ಹಣಕಾಸಿನ ವಿಚಾರದಲ್ಲಿ ಜಾಗೃತಿ ಆರೋಗ್ಯದ ವಿಚಾರದಲ್ಲಿ ಸಾಧಾರಣವಾಗಿರುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 2 
ನಿಮ್ಮ ಅದೃಷ್ಟದ ಬಣ್ಣ - ಹಳದಿ

ಮಕರ ರಾಶಿ :- ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗಬಹುದು. ನೀವು ಸಾಕಷ್ಟು ಒಂಟಿತನವನ್ನು ಅನುಭವಿಸಬಹುದು. ಯಾಕೆಂದರೆ ನಿಮಗೆ ಅಗತ್ಯವಿರುವ ಸಮಯದಲ್ಲಿ ಪ್ರೀತಿಪಾತ್ರರಿಗೆ ಬೆಂಬಲದ ಕೊರತೆಯಿಂದಾಗಿ ನೀವು ತುಂಬಾ ನಿರಾಸೆ ಗೊಳ್ಳುತ್ತೀರಿ. ಈ ದಿನದ ಹಣದ ವಿಚಾರದ ಬಗ್ಗೆ ನೋಡುವುದಾದರೆ ಒಂದಿಷ್ಟು ಮಿಶ್ರವಾಗಿರುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ ನಿಮ್ಮ ಮೇಲಾಧಿಕಾರಿ ವ್ಯಕ್ತಿತ್ವವನ್ನು ಬಲಪಡಿಸಲು ಸೃಜನಶೀಲ ಆಲೋಚನೆಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಮುಂದೆ ಸಾಕಷ್ಟು ಜವಾಬ್ದಾರಿಗಳು ಕೂಡ ಎದುರಾಗಬಹುದು. ನೆಮ್ಮದಿಯ ಜೀವನಕ್ಕಾಗಿ ಮುಖ್ಯಪ್ರಾಣದೇವರನ್ನು ಅಥವಾ ನಿಮ್ಮ ಮನೆಯ ದೇವರನ್ನು ಆರಾಧಿಸಿ ಒಳಿತಾಗುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 1 
ನಿಮ್ಮ ಅದೃಷ್ಟದ ಬಣ್ಣ - ಹಳದಿ

ಕುಂಭ ರಾಶಿ :- ಈ ದಿನ ಉತ್ತಮವಾದ ದಿನವಾಗಿರುತ್ತದೆ. ಒತ್ತಡದಿಂದ ದೂರವಾಗುತ್ತೀರಿ. ಮೊದಲನೆಯದಾಗಿ ಕೆಲಸದ ಬಗ್ಗೆ ಮಾತನಾಡುವುದಾದರೆ ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯುತ್ತೀರಿ. ಆರ್ಥಿಕ ದೃಷ್ಟಿಯಲ್ಲಿ ದುಬಾರಿಯಾಗುತ್ತದೆ. ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ಅಷ್ಟಾಗಿ ಉತ್ತಮವಾಗಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಹಣದ ಬಗ್ಗೆ ಸ್ವಲ್ಪ ವಿವಾದವೂ ಕೂಡ ಉಂಟಾಗಬಹುದು. 
ನಿಮ್ಮ ಅದೃಷ್ಟದ ಸಂಖ್ಯೆ - 5 
ಅದೃಷ್ಟದ ಬಣ್ಣ - ಕೇಸರಿ

ಮೀನ ರಾಶಿ :- ನಿಮ್ಮ ಮಾತಿನ ಮೇಲೆ ಹೆಚ್ಚು ನಿಯಂತ್ರಣವನ್ನು ಇಟ್ಟುಕೊಳ್ಳಿ. ಕೆಲಸದಲ್ಲಿ ತಪ್ಪುಗಳನ್ನು ಮಾಡುತ್ತಿದ್ದರೆ ಜಾಗ್ರತೆಯಾಗಿರಿ. ವ್ಯಾಪಾರ ಸ್ಥಳದಲ್ಲಿ ಅನಗತ್ಯವಾದ ಚರ್ಚೆಯನ್ನು ಮಾಡಬೇಡಿ. ನಿಮ್ಮ ಮನೆಯಲ್ಲಿ ಮದುವೆಯಾಗದಿದ್ದರೆ ವಿವಾಹದ ಮಾತುಕತೆ ನಡೆಯುತ್ತದೆ. ಹಣದ ವಿಚಾರದಲ್ಲಿ ನೋಡುವುದಾದರೆ ದುಬಾರಿಯಾಗಿರುತ್ತದೆ. ನಿಮ್ಮ ಆರೋಗ್ಯದ ವಿಚಾರದ ಬಗ್ಗೆ ಜಾಗ್ರತೆಯಾಗಿರಿ. 
ನಿಮ್ಮ ಅದೃಷ್ಟದ ಸಂಖ್ಯೆ - 9 
ನಿಮ್ಮ ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ - MAKARA JYOTHI : ಕರೋನಾ ಕಡಿವಾಣದ ನಡುವೆ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News