Daily Horoscope: ದಿನಭವಿಷ್ಯ 19-05-2021 Today astrology

ಶ್ರೀ ಶ್ರೀಕ್ಷೇತ್ರ ಪಂಚಮುಖಿ ಗಣಪತಿ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ...

Written by - ZH Kannada Desk | Last Updated : May 19, 2021, 06:10 AM IST
  • ಸಿಂಹ ರಾಶಿಯವರು ಇಂದು ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆಯಿದೆ
  • ವೃಶ್ಚಿಕ ರಾಶಿಯವರು ನೂತನ ವ್ಯವಹಾರವನ್ನು ಪ್ರಾರಂಭಿಸುವ ಸಲುವಾಗಿ ಚಿಂತನೆ ನಡೆಸುವಿರಿ
  • ಮಕರ ರಾಶಿಯವರಿಗೆ ಹೊಸ ವಾಹನ ಖರೀದಿಸುವ ಯೋಗವಿದೆ
Daily Horoscope: ದಿನಭವಿಷ್ಯ 19-05-2021 Today astrology

Daily Horoscope (ದಿನಭವಿಷ್ಯ 19-05-2021)  : ಶ್ರೀ ಶ್ರೀಕ್ಷೇತ್ರ ಪಂಚಮುಖಿ ಗಣಪತಿ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ...

ಮೇಷ: ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮುಂದಿನ ಕಾರ್ಯಯೋಜನೆಗಳ ವಿಚಾರವಾಗಿ ಚಿಂತನೆ. ಶುಭ ಕಾರ್ಯ ನಡೆಸಲು ತಯಾರಿ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

ವೃಷಭ: ಅನಾವಶ್ಯಕ ಮಾತುಗಳಿಂದಾಗಿ ಉದ್ವೇಗಕ್ಕೊಳಗಾಗುವ ಸಾಧ್ಯತೆ. ವಿಪರೀತ ಖರ್ಚು ಭರಿಸಬೇಕಾದ ಅನಿವಾರ್ಯತೆ ಇದ್ದರೂ, ಆರ್ಥಿಕ ಅನುಕೂಲತೆ. ಧನವನ್ನು ಕೂಡಿಡಲಿದ್ದೀರಿ.

ಮಿಥುನ: ಕಾರ್ಯ ನಿಮಿತ್ತ ಕೈಗೊಂಡ ದೂರದ ಪ್ರಯಾಣದಿಂದಾಗಿ ಅಧಿಕ ಆದಾಯ. ವೆಚ್ಚದ ಮೇಲೆ ಹಿಡಿತದಿಂದಾಗಿ ಉಳಿತಾಯ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಬಿಡುವಿನ ದಿನ.

ಕಟಕ: ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಸ್ಥಾನ ಭದ್ರತೆ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ನಿರಾಳರಾಗುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ಸಾಧ್ಯತೆ.

ಇದನ್ನೂ ಓದಿ- ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!

ಸಿಂಹ: ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆ. ಮನೆಯ ಅಲಂಕಾರಕ್ಕಾಗಿ ವೆಚ್ಚ. ವಾಹನಗಳ ವ್ಯವಹಾರದಲ್ಲಿ ಉತ್ತಮ ಲಾಭ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು.

ಕನ್ಯಾ: ಕ್ರೀಡಾಪಟುಗಳು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಸಾಮರ್ಥ್ಯ‌ ಪ್ರದರ್ಶಿಸುವ ಪೈಪೋಟಿಯ ದಿನವಾಗಲಿದೆ. ಮನೆಯ ವ್ಯವಹಾರಗಳಲ್ಲಿ ತೊಂದರೆಗಳು ದೂರವಾಗಿ ನೆಮ್ಮದಿ ಮೂಡಲಿದೆ.

ತುಲಾ: ಸಮಯವನ್ನು ವ್ಯರ್ಥಮಾಡದೇ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಉತ್ತಮ ಫಲ ಪಡೆಯಲಿದ್ದೀರಿ. ರೇಷ್ಮೆ ಬೆಳೆಗಾರರು ಹಾಗೂ ಉದ್ಯಮದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ದಿನವಾಗುವುದು.

ವೃಶ್ಚಿಕ: ನೂತನ ವ್ಯವಹಾರವನ್ನು ಪ್ರಾರಂಭಿಸುವ ಸಲುವಾಗಿ ಚಿಂತನೆ ನಡೆಸುವಿರಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ವ್ಯಯ. ಆರೋಗ್ಯ ಉತ್ತಮಗೊಳ್ಳಲಿದೆ.

ಇದನ್ನೂ ಓದಿ- Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ

ಧನು: ಕೃಷಿ ಚಟುವಟಿಕೆಗಳು ಭರದಿಂದ ಸಾಗಲಿವೆ. ಮಕ್ಕಳ ನೆಮ್ಮದಿಗಾಗಿ ಬೊಂಬೆಗಳ ಖರೀದಿ ಸಾಧ್ಯತೆ. ಯುವಕರಿಗೆ ಸಂಶೋಧನಾ ಕ್ಷೇತ್ರದಲ್ಲಿ ನೌಕರಿ ಮಾಡುವ ಅವಕಾಶ ಲಭ್ಯ.

ಮಕರ: ಹೊಸ ವಾಹನ ಖರೀದಿ ಮಾಡಲಿದ್ದೀರಿ. ಮಕ್ಕಳೊಂದಿಗೆ ಆನಂದದಿಂದ ಕಾಲ ಕಳೆಯುವಿರಿ. ಪ್ರಯಾಣದಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಹಿಂದಿನ ಸಂತಸದ ಸಮಯವನ್ನು ಮೆಲುಕು ಹಾಕಲಿದ್ದೀರಿ.

ಕುಂಭ: ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಸಂಪಾದನೆ. ಪ್ರೀತಿಪಾತ್ರರೊಂದಿಗೆ ವಿಹಾರಾರ್ಥ ಕಾಲ ಕಳೆಯುವ ಸಾಧ್ಯತೆ. ಮನೆಯಲ್ಲಿ ಹಬ್ಬದ ವಾತಾವರಣ. ಸ್ತ್ರೀಯರಿಗೆ ಗೌರವ ಪ್ರಾಪ್ತಿ.

ಮೀನ: ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಉದಾರ ಮನೋಭಾವದಿಂದ ಸಹಾಯ ಮಾಡಲಿದ್ದೀರಿ. ಸ್ತ್ರೀಯರಿಗೆ ಮನೋಭಿಲಾಷೆ ಈಡೇರಿಲಿದೆ.

ಇದನ್ನೂ ಓದಿ- Lunar Eclipse 2021: ಮೇ 26 ರಂದು ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯ ಮೇಲೆ ನೇರ ಪರಿಣಾಮ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News