Daily Horoscope: ದಿನಭವಿಷ್ಯ 23-04-2021 Today astrology

ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ತಾಯಿಯ ಅನುಗ್ರಹದಿಂದ  ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

Written by - ZH Kannada Desk | Last Updated : Apr 23, 2021, 06:40 AM IST
  • ವೃಷಭ ರಾಶಿಯವರಿಗೆ ಸಂಗಾತಿಯ ಕಡೆ ಸಂಬಂಧಿಕರು ನಿಮ್ಮಿಂದ ಸಹಾಯ ನಿರೀಕ್ಷೆ ಮಾಡಲಿದ್ದಾರೆ
  • ಕರ್ಕಾಟಕ ರಾಶಿಯವರಿಗೆ ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ದಾರಿ ಸಿಗುತ್ತದೆ
  • ಮಕರ ರಾಶಿಯವರು ದುಡ್ಡಿನ ಅಗತ್ಯಕ್ಕಾಗಿ ಇತರರನ್ನು ಅನಿವಾರ್ಯವಾಗಿ ಕೇಳಲೇಬೇಕಾಗುತ್ತದೆ
Daily Horoscope: ದಿನಭವಿಷ್ಯ 23-04-2021 Today astrology

Daily horoscope (ದಿನಭವಿಷ್ಯ 23-04-2021) : ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ತಾಯಿಯ ಅನುಗ್ರಹದಿಂದ  ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ ರಾಶಿ:
ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಕೆಲವರ ಜತೆಗೆ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಕೈಯಲ್ಲಿ ಇರುವ ಹಣವನ್ನು ಜೋಪಾನವಾಗಿ ನಿರ್ವಹಿಸಿ. ವಿಲಾಸಿ ವಸ್ತುಗಳಿಗೆ ಖರ್ಚು ಮಾಡುವ ಮುನ್ನ ಪೂರ್ವಾಪರ ಆಲೋಚಿಸಿ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವವರಿಗೆ ಪ್ರಗತಿ ಇದೆ.

ವೃಷಭ ರಾಶಿ:
ಸಂಗಾತಿಯ ಕಡೆ ಸಂಬಂಧಿಕರು ನಿಮ್ಮಿಂದ ಸಹಾಯ ನಿರೀಕ್ಷೆ ಮಾಡಲಿದ್ದಾರೆ. ಬೆಲೆ ಬಾಳುವ ಲೋಹಗಳಿಗಾಗಿ ಹಣವನ್ನು ವೆಚ್ಚ ಮಾಡಲಿದ್ದೀರಿ. ಬಟ್ಟೆ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವಂತಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಿನ್ನಡೆ ಆಗಬಹುದು.

ಮಿಥುನ ರಾಶಿ:
ವಿಪರೀತ ಖರ್ಚು ಆಗಲಿದೆ. ಆಕರ್ಷಣೆಗೆ ಬಿದ್ದು, ಅಳತೆಗೆ ಮೀರಿ ಖರ್ಚು ಮಾಡಬೇಡಿ. ಆಸ್ತಮಾ, ಉಸಿರಾಟದ ಸಮಸ್ಯೆ ಇರುವವರು ಸೂಕ್ತ ವೈದ್ಯರನ್ನು ಭೇಟಿಯಾಗಿ. ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾದಲ್ಲಿ ಲಾಭ- ನಷ್ಟದ ಬಗ್ಗೆ ಮುಂಚಿತವಾಗಿಯೇ ಆಲೋಚಿಸಿ.

ಕರ್ಕಾಟಕ ರಾಶಿ:
ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ದಾರಿ ಸಿಗುತ್ತದೆ. ನಿಮ್ಮ ಬಗ್ಗೆ ಯಾರು ಆರೋಪಗಳನ್ನು ಮಾಡುತ್ತಿದ್ದರೋ ಅಂಥವರು ಅಚ್ಚರಿ ಪಡುವಂಥ ಸಾಧನೆ ನಿಮ್ಮಿಂದ ಆಗುತ್ತದೆ. ಸಿಮೆಂಟ್, ಕಬ್ಬಿಣ ವ್ಯವಹಾರ ನಡೆಸುವವರು ವ್ಯಾಪಾರ ವಿಸ್ತರಣೆಗೆ ಪ್ರಯತ್ನ ನಡೆಸಲಿದ್ದೀರಿ. ತೀರ್ಥಯಾತ್ರೆ ತೆರಳುವ ಯೋಗ ಇದೆ.

ಇದನ್ನೂ ಓದಿ - Shukra Uday 2021: ಮೇಷ ರಾಶಿಯಲ್ಲಿ ಶುಕ್ರನ ಉದಯ, ಯಾವ ರಾಶಿಗಳಿಗೆ ತರಲಿದೆ ಅದೃಷ್ಟ

ಸಿಂಹ ರಾಶಿ:
ಸುಖವನ್ನು ಅನುಭವಿಸುವ ಯೋಗ ಇದೆ. ಆಹಾರ, ವಾಹನ ಸೌಖ್ಯ ಇತ್ಯಾದಿ ಸುಖವನ್ನು ಅನುಭವಿಸಲಿದ್ದೀರಿ. ಇತರರು ಅಸಾಧ್ಯ ಎಂದು ಕೈ ಬಿಟ್ಟ ಕೆಲಸವನ್ನು ನೀವು ಕೈಗೆತ್ತಿಕೊಂಡು, ಸಾಧನೆ ಮಾಡಿ ತೋರಿಸಲಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಹೊಂದುವ ಅವಕಾಶ.

ಕನ್ಯಾ ರಾಶಿ:
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ವಿಚಾರಕ್ಕೆ ನಿರ್ಲಕ್ಷ್ಯ ಮಾಡದಿರಿ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ಸಣ್ಣ- ಪುಟ್ಟ ಸಂಗತಿಗಳಿಗೆ ಆಪ್ತರ ಜತೆಗೆ ಮನಸ್ತಾಪ ಆಗಬಹುದು. ಮುಖ್ಯ ಸಂಗತಿಗಳು ಅರ್ಧಕ್ಕೆ ನಿಂತುಹೋಗುವ ಅಪಾಯ ಇದೆ.

ತುಲಾ ರಾಶಿ:
ನಿಮಗೆ ಬರಬೇಕಾದ ಹಣವು ಸಮಯಕ್ಕೆ ಸರಿಯಾಗಿ ದೊರೆಯುವುದು ಕಷ್ಟ. ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅಗತ್ಯ ಬರಲಿದೆ. ಆಸ್ತಿ ಪಾಲು ಹಂಚಿಕೆ ಬಗ್ಗೆ ಮನಸ್ತಾಪ ಆಗಬಹುದು, ಗಮನದಲ್ಲಿ ಇರಲಿ. ಕೌಟುಂಬಿಕ ವ್ಯವಹಾರಗಳನ್ನು ಮುನ್ನಡೆಸುತ್ತಿರುವವರು ಬದಲಾವಣೆ ಕಡೆಗೆ ಆಲೋಚಿಸಲಿದ್ದೀರಿ.

ವೃಶ್ಚಿಕ ರಾಶಿ:
ವಿದೇಶದಲ್ಲಿ ಇರುವವರಿಗೆ ಒಂಟಿತನ ಕಾಡಲಿದೆ. ಭಾವನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಾಗ ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಆಲೋಚಿಸಿ. ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಬೆನ್ನಿನ ಹುರಿ ನೋವು ಇರುವವರು ತೂಕ ಇಳಿಸುವ ಕಡೆ ಲಕ್ಷ್ಯ ಕೊಡಿ.

ಇದನ್ನೂ ಓದಿ- Snake Plant Benefits: ಬಹಳ ಉಪಯುಕ್ತ ಈ ಸ್ನೇಕ್ ಪ್ಲಾಂಟ್, ಖರೀದಿಸುವ ಮೊದಲು ಇದನ್ನು ತಿಳಿಯಿರಿ

ಧನಸ್ಸು ರಾಶಿ:
ಇತರರ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗದಿರಿ. ಆರಂಭದಲ್ಲಿ ನಿಮ್ಮನ್ನು ಹೊಗಳಿ, ಆ ನಂತರ ದೂಷಿಸುತ್ತಾರೆ. ಮನೆ ಅಥವಾ ಕಚೇರಿ ಬದಲಾವಣೆಗೆ ಖರ್ಚು- ವೆಚ್ಚ ಆಗಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆಯ ಸಮಯ ಇದು. ಹೊಸ ಅವಕಾಶ ದೊರೆಯಲಿದೆ.

ಮಕರ ರಾಶಿ:
ದುಡ್ಡಿನ ಅಗತ್ಯಕ್ಕಾಗಿ ಇತರರನ್ನು ಅನಿವಾರ್ಯವಾಗಿ ಕೇಳಲೇಬೇಕಾಗುತ್ತದೆ. ವಾಹನ ಖರೀದಿಸಲು ಬ್ಯಾಂಕ್ ನಲ್ಲಿ ಪ್ರಯತ್ನಿಸಲಿದ್ದೀರಿ. ಇತರರ ಮೇಲೆ ದಯಾ- ದಾಕ್ಷಿಣ್ಯಕ್ಕಾಗಿ ಕೈಯಿಂದ ಹಣ ಖರ್ಚು ಮಾಡಿಕೊಳ್ಳುತ್ತೀರಿ. ಗೆಳೆಯರ ಜತೆಗೆ ಸಂತೋಷವಾದ ಸಮಯ ಕಳೆಯುವ ಯೋಗ.

ಕುಂಭ ರಾಶಿ:
ಭೂಮಿ, ಮನೆ ಖರೀದಿ ಬಗ್ಗೆ ಗಟ್ಟಿ ನಿರ್ಧಾರ ಮಾಡುವ ಸಾಧ್ಯತೆ ಇದೆ. ಮದುವೆ ಸಂಬಂಧಗಳು ಹುಡುಕಿಕೊಂಡು ಬರಲಿದೆ. ವಿದ್ಯಾರ್ಥಿಗಳಿಗೆ ನಾನಾ ಬಗೆಯ ಅಡೆತಡೆಗಳು ಕಾಣಿಸಿಕೊಳ್ಳಲಿದ್ದು, ಸ್ತ್ರೀಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿದೆ. ಆ ಕಡೆಗೆ ನಿಗಾ ಮಾಡಿ.

ಮೀನ ರಾಶಿ:
ಗೊಂದಲದ ಮನಸ್ಥಿತಿಯಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ನಂತರ ಬೇಸರ ಮಾಡಿಕೊಳ್ಳುವಂತೆ ಆಗುತ್ತದೆ. ಆದ್ದರಿಂದ ಯಾವುದಕ್ಕೂ ಆತುರ ಮಾಡಬೇಡಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಿಡುವಿಲ್ಲದಂಥ ದಿನವಾಗಿರುತ್ತದೆ. ಯಾರನ್ನೂ ಅನುಕರಿಸದಿರಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ- Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News