Daily Horoscope: ದಿನಭವಿಷ್ಯ 24-06-2021 Today astrology

ಶ್ರೀ ಶ್ರೀ ಕ್ಷೇತ್ರ  ಮಂತ್ರಾಲಯ ರಾಯರ ಸ್ವಾಮಿ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ...

Written by - Zee Kannada News Desk | Last Updated : Jun 24, 2021, 06:10 AM IST
  • ಕರ್ಕಾಟಕ ರಾಶಿಯವರಿಗೆ ಈ ದಿನ ಉದ್ಯೋಗ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟ ಉಂಟಾಗಲಿದೆ
  • ಮಕರ ರಾಶಿಯವರಿಗೆ ಈ ದಿನ ಮನೆಯಲ್ಲಿ ಕೆಲವರಿಗೆ ಅನಾರೋಗ್ಯ ಸಮಸ್ಯೆಗಳು ಕಾಡಬಹುದು
  • ಕುಂಭ ರಾಶಿಯವರಿಗೆ ಈ ದಿನ ಉತ್ತಮ ರೀತಿಯಲ್ಲಿ ಯಶಸ್ಸು ನಿಮ್ಮನು ಆರಿಸಿಕೊಂಡು ಬರುವ ಸಾಧ್ಯತೆ ಇರುತ್ತದೆ
Daily Horoscope: ದಿನಭವಿಷ್ಯ 24-06-2021 Today astrology  title=
Daily Horoscope (ದಿನಭವಿಷ್ಯ 24-06-2021)

Daily Horoscope (ದಿನಭವಿಷ್ಯ 24-06-2021) : ಶ್ರೀ ಶ್ರೀ ಕ್ಷೇತ್ರ  ಮಂತ್ರಾಲಯ ರಾಯರ ಸ್ವಾಮಿ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ...

ಮೇಷ: ವಿನಾಕಾರಣ ಯಾರ ಮೇಲೂ ಆರೋಪ ಮಾಡಲು ಹೋಗಬೇಡಿ, ಈ ದಿನ ಆಹಾರದಲ್ಲಿ ಹೆಚ್ಚಿನ ಶುಚಿತ್ವ ಕಾಪಾಡಿ, ಇಲ್ಲವಾದಲ್ಲಿ ಅನಾರೋಗ್ಯದ ಸಮಸ್ಯೆಗಳಿಗೆ ನೀವು ಗುರಿ ಆಗುತ್ತೀರಿ, ಈ ದಿನ ಕಾನೂನು ವ್ಯಾಜ್ಯದ ಸಮಸ್ಯೆಗಳು ಏನೇ ಇದ್ದರು ಸಹ ಅವುಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ
ನಿಮ್ಮ ಅದೃಷ್ಟ ಸಂಖ್ಯೆ 6.

ವೃಷಭ: ಈ ದಿನ ಬಂಧುಗಳ ಜೊತೆಗೆ ಒಂದಿಷ್ಟು ಕಿರಿ ಕಿರಿ ಉಂಟು ಆಗಲಿದೆ, ಈ ದಿನ ಮಕ್ಕಳ ನಡವಳಿಕೆ ನಿಮಗೆ ಸಾಕಷ್ಟು ಬೇಸರ ಉಂಟು ಮಾಡುತ್ತದೆ. ಈ ದಿನ ಎಲ್ಲ ರೀತಿಯ ವ್ಯವಹಾರಗಳು ಲಾಭ ಉಂಟು ಮಾಡುತ್ತದೆ, ಈ ದಿನ ಸಂಜೆ ಮಾಡುವ ಪ್ರಯಣ ನಿಮಗೆ ತೊಂದರೆ ಉಂಟು ಮಾಡುತ್ತದೆ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ 1

ಮಿಥುನ: ಈ ದಿನ ಸ್ವಂತ ಮನೆ ನಿರ್ಮಾಣ ಮಾಡುವ ಜನರಿಗೆ ಒಳ್ಳೆಯದಾಗಲಿದೆ, ಹಾಗೆಯೇ ಈ ದಿನ ಹಿರಿಯರ ಮಾತುಗಳಿಂದ ನಿಮಗೆ ಹೆಚ್ಚಿನ ಬೇಸರ ಸಹ ಬರುತ್ತದೆ. ಈ ದಿನ ಹಳೆ ವೈಷಮ್ಯಗಳು ಇದ್ದ ಜನರು ತುಂಬಾ ಜಾಗ್ರತೆಯಿಂದ ಇರಿ. ಈ ದಿನ ಸಂಜೆ ನಂತರ ಆರೋಗ್ಯದ ಕಾಳಜಿ ಹೆಚ್ಚಿಗೆ ಇರಲಿ.  ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ 8

ಕರ್ಕಾಟಕ: ಈ ದಿನ ಉದ್ಯೋಗ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟ ಉಂಟಾಗಲಿದೆ, ಈ ದಿನ ತಂದೆ ತಾಯಿ ಆಶೀರ್ವಾದ ಪಡೆಯುವುದು ತುಂಬಾ ಮುಖ್ಯ ಆಗಿರುತ್ತದೆ, ಈ ದಿನ ಕುಟುಂಬದಲ್ಲಿ ಕಲಹಗಳು ಇದ್ದಾಗ ಒಂದಿಷ್ಟು ಸನ್ನಿವೇಶಕ್ಕೆ ತಕ್ಕ ರೀತಿಯಲ್ಲಿ ಮಾತನಾಡುವುದು ಕಲಿಯಿರಿ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ 9

ಇದನ್ನೂ ಓದಿ- Zodiac Signs : ಈ ರಾಶಿಯವರ ಮೇಲೆ ಆಂಜನೇಯನ ವಿಶೇಷ ಕೃಪೆಯಿರುತ್ತದೆಯಂತೆ..

ಸಿಂಹ: ಈ ದಿನ ಪ್ರೀತಿ ಪ್ರೇಮದ ವಿಷಯದಲ್ಲಿ ಜಾಗ್ರತೆ ಇರಲಿ, ಈ ದಿನ ಆರೋಗ್ಯದಲ್ಲಿ ಸಾಕಷ್ಟು ಕಾಳಜಿ ವಹಿಸಿ. ಈ ದಿನ ಸಂಗಾತಿ ನೀಡುವ ಸಲಹೆಗಳು ನಿಮಗೆ ಅನುಕೂಲ ಉಂಟು ಮಾಡುತ್ತದೆ, ಈ ದಿನ ಸ್ವಯಂಕೃತ ಅಪರಾಧ ಮನೋಭಾವನೆ ಸಹ ನಿಮ್ಮನ್ನು ಕಾಡಿಸುತ್ತದೆ, ಈ ದಿನ ಮಿಶ್ರಲಾಭ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ
ನಿಮ್ಮ ಅದೃಷ್ಟ ಸಂಖ್ಯೆ-3

ಕನ್ಯಾ: ಈ ದಿನ ಉದ್ಯೋಗ ವಿಷಯದಲ್ಲಿ ನಿಮಗೆ ಒಳಿತು ಆಗಲಿದೆ, ಹಾಗೆಯೇ ಹಣಕಾಸಿನ ವಿಷಯದಲ್ಲಿ ಮತ್ತು ಸಾಲ ಮರುಪಾವತಿ ಮಾಡುವ ವಿಷಯದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ತೊಂದರೆಗಳು ಬರಬಹುದು. ಈ ದಿನ ವ್ಯವಹಾರದಲ್ಲಿ ನಿಷ್ಠೆ ಮತ್ತು ಶ್ರದ್ದೆ ಇದ್ರೆ ಒಳಿತು ಕಾಣಬಹುದು. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ-4

ತುಲಾ: ಈ ದಿನ ಮನೆಯಲ್ಲಿ ಸಂತೋಷಕರ ಕ್ಷಣಗಳು ನಿಮಗೆ ದೊರೆಯುತ್ತದೆ, ಈ ದಿನ ವ್ಯವಹಾರದಲ್ಲಿ ಸಮಾಧಾನಕರ ಲಾಭ ಆಗಲಿದೆ, ಈ ದಿನ ಪ್ರೀತಿ ಪ್ರೇಮ ಸಂಬಂಧ ಅಭಿವೃದ್ದಿ ಆಗುತ್ತದೆ. ಈ ದಿನ ಕ್ರೀಡಾ ಕ್ಷೇತ್ರದಲ್ಲಿ ಇರೋ ಜನರಿಗೆ ಸಿಹಿ ಸುದ್ದಿ ಲಭ್ಯವಾಗಲಿದೆ.‌ ಈ ದಿನ ಸಂಜೆ ನಂತರ ಯಾವುದೇ ಕಾರಣಕ್ಕೂ ಪ್ರಯಾಣ ಬೇಡ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟದ ಸಂಖ್ಯೆ-3

ವೃಶ್ಚಿಕ: ಈ ದಿನ ಸಂಗಾತಿ ಜೊತೆಗೆ ಸುಮಧುರ ಕ್ಷಣಗಳು ಕಳೆಯುತ್ತೀರಿ, ಈ ದಿನ ನಿಮ್ಮ ಶತ್ರುಗಳಿಂದ ನಿಮಗೆ ಮಾನಸಿಕ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ, ಈ ದಿನ ಮನೆಗೆ ತುಂಬಾ ಅಗತ್ಯ ಇರೋ ವಸ್ತುಗಳು ಖರೀದಿ ಮಾಡುತ್ತೀರಿ, ಈ ದಿನ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಆಗುತ್ತದೆ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ. 
ನಿಮ್ಮ ಅದೃಷ್ಟ ಸಂಖ್ಯೆ- 3

ಇದನ್ನೂ ಓದಿ- Astrology: ಈ ರಾಶಿಯ ಮಕ್ಕಳು ಬಹಳ ಪ್ರತಿಭಾನ್ವಿತರಂತೆ, ಪ್ರೋತ್ಸಾಹದ ಕೊರತೆ ಇರಬಾರದಷ್ಟೇ

ಧನಸ್ಸು: ಈ ದಿನ ನಿಮ್ಮ ಮುಂದೆ ಸಾಕಷ್ಟು ಅವಕಾಶಗಳು ಬರುತ್ತದೆ, ಈ ದಿನ ಸಹೋದರ ಸಂಬಂಧ ಹೆಚ್ಚಿನ ಅನುಕೂಲ ಉಂಟು ಆಗಲಿದೆ, ಈ ದಿನ ಆರೋಗ್ಯಕರ ಆಹಾರ ಪಥ್ಯ ಮಾಡಬೇಕು, ಈ ದಿನ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯಲು ಹೊಸ ರೀತಿಯಲ್ಲಿ ಸಲಹೆ ಪಡೆದು ಅದನ್ನು ಅನ್ವಯ ಮಾಡಬೇಕು. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ -8

ಮಕರ: ಈ ದಿನ ಮನೆಯಲ್ಲಿ ಕೆಲವರಿಗೆ ಅನಾರೋಗ್ಯ ಸಮಸ್ಯೆಗಳು ಕಾಡಬಹುದು ಜಾಗ್ರತೆ ಇರಲಿ, ಈ ದಿನ ಪ್ರೇಮ ಸಂಬಂಧಗಳು ಅಳಿಸಿ ಹೋಗಬಹುದು. ಮಾತಿನ ಮೇಲೆ ಹಿಡಿತ ಸಾಧಿಸಿರಿ, ಈ ದಿನ ವ್ಯಾಪಾರ ಮತ್ತು ಸೇವಾ ಕ್ಷೇತ್ರದಲ್ಲಿ ಇರೋ ಜನರಿಗೆ ಒಳ್ಳೆಯ ಲಾಭ ಸಹ ಆಗುತ್ತದೆ, ಈ ದಿನ ಅನಿರೀಕ್ಷಿತ ವ್ಯಕ್ತಿಗಳ ಭೇಟಿ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ. ನಿಮ್ಮ ಅದೃಷ್ಟ ಸಂಖ್ಯೆ-9

ಕುಂಭ: ಈ ದಿನ ಉತ್ತಮ ರೀತಿಯಲ್ಲಿ ಯಶಸ್ಸು ನಿಮ್ಮನು ಆರಿಸಿಕೊಂಡು ಬರುವ ಸಾಧ್ಯತೆ ಇರುತ್ತದೆ, ಈ ದಿನ ಧಾರ್ಮಿಕ ಕಾರ್ಯದಲ್ಲಿ ನಿಮ್ಮನ್ನು ನೀವು ಹೆಚ್ಚಿನ ಸಮಯವನ್ನು ತೊಡಗಿಸಿಕೊಂಡು ಇರುತ್ತೀರಿ, ಈ ದಿನ ಸಹೋದರನ ಜೊತೆಗೆ ಆಸ್ತಿ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಭಿನ್ನಾಭಿಪ್ರಾಯ ಬರುತ್ತದೆ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ.
ನಿಮ್ಮ ಅದೃಷ್ಟ ಸಂಖ್ಯೆ -7

ಮೀನ: ಈ ದಿನ ಖಾಸಗಿ ಕಂಪನಿ ನೌಕರಿ ಮಾಡುವ ಜನರಿಗೆ ಹೆಚ್ಚಿನ ಲಾಭ ಆಗುತ್ತದೆ, ಈ ದಿನ ಸ್ತ್ರೀಯರ ಜೊತೆಗೆ ಹೆಚ್ಚಿನ ಜಾಗ್ರತೆಯಿಂದ ವರ್ತನೆ ಮಾಡಿರಿ, ಈ ದಿನ ರೈತರಿಗೆ ಒಳ್ಳೆಯ ಹಣಕಾಸಿನ ಲಾಭ ಸಹ ಆಗುತ್ತದೆ, ಈ ದಿನ ಮಿತ್ರರ ಸಹಕಾರ ಪರಿಪೂರ್ಣ ರೀತಿಯಲ್ಲಿ ನಿಮಗೆ ದೊರೆಯುತ್ತದೆ. ಶಕ್ತಿ ದೇವತೆ ನಿಮಿಷಾಂಬ ದೇವಿ ಆರಾಧಿಸಿ
ನಿಮ್ಮ ಅದೃಷ್ಟ ಸಂಖ್ಯೆ-6

ಇದನ್ನೂ ಓದಿ-  Sun enters Ardra Nakshatra: ಆರ್ದ್ರ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಇದರ ಪರಿಣಾಮ ಹೇಗಿರಲಿದೆ!

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News